Coastal Bulletin

ಮಂಗಳೂರು : ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ದುಬೈನಿಂದ ಮಂಗಳೂರಿಗೆ ಆಗಮಿಸಿದ್ದ ಪ್ರಯಾಣಿಕನ ಬಳಿಯಿದ್ದ 16,22,400 ರೂಪಾಯಿ ಮೌಲ್ಯದ 335 ಗ್ರಾಂ ಅಕ್ರಮ ಚಿನ್ನವನ್ನು ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡು ಅರೋಪಿಯನ್ನು ಬಂಧಿಸಿದ್ದಾರೆ.ಕಾಸರಗೋಡಿನ ತಾಲೂಕಿನ ಮುಳಿಯಾರ್ ನಿವಾಸಿ ಮಹಮ್ಮದ್ ನವಾಜ್ ಬಂಧಿತ.

ದುಬೈನಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ ಏರ್ ಇಂಡಿಯಾ ಎಕ್ಸ್’ಪ್ರೆಸ್ ನಲ್ಲಿ ನವಾಜ್, ಸ್ಕೇಟಿಂಗ್ ಬೋರ್ಡ್ ಗೆ

ಚಿನ್ನದ ವೀಲ್‍ ಮತ್ತು ಬೋಲ್ಟ್ ಜೋಡಿಸಿ ಅಕ್ರಮವಾಗಿ  ಚಿನ್ನಾಭರಣ ಸಾಗಿಸುವುದನ್ನು ಕಸ್ಟಮ್ಸ್ ಅಧಿಕಾರಿಗಳು ಪತ್ತೆ ಮಾಡಿದ್ದಾರೆ.

Leave a Comment