Coastal Bulletin

ಟೋಕಿಯೋ: ಪ್ಯಾರಾಲಿಂಪಿಕ್ಸ್ ನ ಟೇಬಲ್ ಟೆನಿಸ್ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದ ಭಾರತದ ಗುಜರಾತ್ ಮೂಲದ ಭಾವಿನಾ ಪಟೇಲ್ ಅವರಿಗೆ ರಾಷ್ಟ್ರಪತಿ, ಪ್ರಧಾನಿ ಮತ್ತಿತರ ಗಣ್ಯರು ಸೇರಿದಂತೆ ದೇಶಾದ್ಯಂತ ಶುಭ ಹಾರೈಸಿದ್ದಾರೆ. ಈ ಗೆಲುವಿಗೆ ಅಭಿನಂದನೆ ನಲ್ಲಿಸಿದ ರಾಷ್ಟ್ರಪತಿ ಕೋವಿಂದ್ ಅವರು, ಅಸಾಧಾರಣ ಸಮಯ ಪ್ರಜ್ಞೆ, ನಿರ್ಣಯ ಮತ್ತು ಕೌಶಲ್ಯಗಳು ಭಾರತಕ್ಕೆ ಕೀರ್ತಿ ತಂದಿದೆ. ಈ ಅಸಾಧಾರಣ ಸಾಧನೆಗೆ ನಿಮಗೆ ನನ್ನ ಅಭಿನಂದನೆಗಳು ಎಂದು ತಿಳಿಸಿದ್ದಾರೆ.

ಪ್ಯಾರಾಲಿಂಪಿಕ್ಸ್ ನಲ್ಲಿ ಟೇಬಲ್ ಟೆನಿಸ್ ನಲ್ಲಿ ಬೆಳ್ಳಿ ಪದಕ ಗೆಲ್ಲುವ ಮೂಲಕ ಭಾವಿನಾ ಇಂದು ಇತಿಹಾಸ ಸೃಷ್ಟಿಸಿದ್ದಾರೆ. ಅವರ ಜೀವನ ಪಯಣ

ಸ್ಪೂರ್ತಿದಾಯಕವಾಗಿದ್ದು ಇನ್ನಷ್ಟು ಯುವಜನತೆ ಮುಂದಿನ ದಿನಗಳಲ್ಲಿ ಕ್ರೀಡೆಯ ಬಗ್ಗೆ ಆಸಕ್ತಿ ಹೊರಳುವಂತೆ ಮಾಡಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ.

Leave a Comment