FIFA World Cup 2026: ಅರ್ಜೆಂಟೀನಾ ಮತ್ತು ಸ್ಪೇನ್ ನಡುವಿನ 2026ರ ಫಿಫಾ ವಿಶ್ವಕಪ್ ಫೈನಲ್ ಪಂದ್ಯಕ್ಕೆ ಎರಡು ದಿನಗಳು ಬಾಕಿ ಇರುವಾಗಲೇ ಸಾಮಾಜಿಕ ಜಾಲತಾಣಗಳಲ್ಲಿ ಫೋಟೋ ಒಂದು ವೈರಲ್ ಆಗಿದ್ದು ಎಲ್ಲೆಡೆ ಇದರದ್ದೆ ಚರ್ಚೆ ನಡೆಯುತ್ತಿದೆ. ಈ ಫೋಟೋ ಸ್ಪೇನ್ ತಂಡದ ಯುವ ಆಟಗಾರ ಲ್ಯಾಮಿನ್ ಯಮಲ್ ಅವರ ಬಾಲ್ಯದ ಫೋಟೋ ಆಗಿದ್ದು, ಇದರಲ್ಲಿ ಅರ್ಜೆಂಟೀನಾ ನಾಯಕ ಲಿಯೋನೆಲ್ ಮೆಸ್ಸಿ ಶಿಶು ಯಮಲ್ ಅವರಿಗೆ ಸ್ನಾನ ಮಾಡಿಸುತ್ತಿದ್ದಾರೆ. ಈ ಫೋಟೋ ಸಿಕ್ಕಾಪಟ್ಟೆ ವೈರಲ್ ಆಗಿದ್ದು ಇದೀಗ ಮೆಸ್ಸಿ ಸಹ ಇದಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ.
17 ವರ್ಷಗಳ ಹಿಂದೆ ಯುನಿಸೆಫ್ ಅಭಿಯಾನದ ಭಾಗವಾಗಿ ಮೆಸ್ಸಿ ಶಿಶು ಯಮಲ್‌ಗೆ ಸ್ನಾನ ಮಾಡಿಸುತ್ತಿರುವ ಫೋಟೋ ಇದಾಗಿದೆ. ಇದಕ್ಕೆ ಪ್ರತಿಕ್ರಿಯಿಸಿದ ಮೆಸ್ಸಿ, "ಈ ಫೋಟೋ ಅದ್ಭುತವಾಗಿದೆ. ಇದೀಗ ನಾವಿಬ್ಬರೂ ವಿಶ್ವಕಪ್‌ನಲ್ಲಿ ಎದುರಾಳಿಗಳಾಗಿ ಮುಖಾಮುಖಿ ಆಗುತ್ತಿರುವುದು ವಿಶೇಷವೆನಿಸಿದೆ. ಪ್ರಸ್ತುತ ಯುವ ಆಟಗಾರರಲ್ಲಿ ಯಮಲ್ ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಅವರ ಯಶಸ್ಸು ಬಾರ್ಸಿಲೋನಾದ ಯಶಸ್ಸಿಗೆ ಕಾರಣವಾಗುವುದರಿಂದ ನಾನು ಅವನಿಗೆ ಶುಭ ಹಾರೈಸುತ್ತೇನೆ. ಆದಾಗ್ಯೂ, ಎದುರಾಳಿಗಳಾಗಿ, ನಾವು ಅವನ ಆಟಕ್ಕೆ ಬ್ರೇಕ್ ಹಾಕಲು ಎಲ್ಲಾ ರೀತಿಯಿಂದಲೂ ತಯಾರಿ ನಡೆಸುತ್ತಿದ್ದೇವೆ.
ಒಟ್ಟಾರೆ ಸ್ಪೇನ್ ಅದ್ಭುತ ತಂಡವಾಗಿದೆ ಅವರ ಬಳಿ ಅನೇಕ ಉತ್ತಮ ಆಟಗಾರರಿದ್ದಾರೆ. ಇದರ ಹೊರತಾಗಿಯೂ ನಾವು ನಮ್ಮದೇ ಆದ ತಂತ್ರಗಳನ್ನು ಸಿದ್ಧಪಡಿಸುತ್ತೇವೆ. ಯಮಲ್ ಸಧ್ಯ 18 ವರ್ಷದವನಾಗಿದ್ದಯ ಅವನಿಗೆ ಮುಂದೆ ಉಜ್ವಲ ಭವಿಷ್ಯವಿದೆ, ಯಮಲ್‌ಗೆ ಶುಭವಾಗಲಿ. ಆದರೆ ಈ ವಿಶ್ವಕಪ್ ಫೈನಲ್ನಲ್ಲಿ ಅವರ ತಂಡವನ್ನು ಚಾಂಪಿಯನ್ ಆಗಲು ನಾವು ಬಿಡುವುದಿಲ್ಲ" ಎಂದು ಮೆಸ್ಸಿ ಹೇಳಿದರು.
ಇನ್ನು ಸ್ಪ್ಯಾನಿಷ್ ಸ್ಟಾರ್
ಆಟಗಾರ ಮೈಕೆಲ್ ಮೆರಿನೊ ಕೂಡ ಯಮಲ್ ಮತ್ತು ಮೆಸ್ಸಿಯ ಫೋಟೋಗೆ ಪ್ರತಿಕ್ರಿಯೆ ನೀಡಿದ್ದಾರೆ. "ನಾನು ಆ ಫೋಟೋವನ್ನು ಮೊದಲ ಬಾರಿಗೆ ನೋಡಿದಾಗ ಆರಂಭದಲ್ಲಿ ಅದು AI ನಿಂದ ಸೃಷ್ಟಿಸಲ್ಪಟ್ಟ ಚಿತ್ರವೆಂದ ಭಾವಿಸಿದ್ದೆ. ಈ ಇಬ್ಬರು ಅತ್ಯುತ್ತಮ ಆಟಗಾರರು ಇದೀಗ ವಿಶ್ವಕಪ್ ಫೈನಲ್ ವೇದಿಕೆಯಲ್ಲಿ ಪರಸ್ಪರ ಮುಖಾಮುಖಿಯಾಗಲಿದ್ದಾರೆ ಎಂಬುದು ಅದ್ಭುತವಾಗಿದೆ.
ಲ್ಯಾಮಿನ್ ಭವಿಷ್ಯದ ಸೂಪರ್‌ಸ್ಟಾರ್ ಆಗುವುದರಲ್ಲಿ ಯಾವುದೇ ಸಂದೇಹವಿಲ್ಲ. ಫೈನಲ್‌ನಲ್ಲಿ ಇಬ್ಬರೂ ತಮ್ಮ ಅತ್ಯುತ್ತಮ ಆಟವನ್ನು ಪ್ರದರ್ಶಿಸುತ್ತಾರೆ ಎಂದು ನಾನು ನಿರೀಕ್ಷಿಸುತ್ತೇನೆ. ನಾವು ಖಂಡಿತವಾಗಿಯೂ ಫೈನಲ್ ಗೆದ್ದು ಟ್ರೋಫಿಯನ್ನು ಎತ್ತುತ್ತೇವೆ" ಎಂದು ಮೆರಿನೊ ಹೇಳಿದರು.
ಮೆಸ್ಸಿ ಅರ್ಜೆಂಟೀನಾ ತಂಡವನ್ನು ಸತತ ಎರಡನೇ ಪ್ರಶಸ್ತಿಗೆ ಕೊಂಡೊಯ್ಯುವ ಗುರಿ ಹೊಂದಿದ್ದಾರೆ. ಏತನ್ಮಧ್ಯೆ, ಉದಯೋನ್ಮುಖ ತಾರೆ ಯಮಲ್ ಸಹ ಸಜ್ಜಾಗುತ್ತಿದ್ದಾರೆ. ಸ್ಪೇನ್ ಮತ್ತು ಅರ್ಜೆಂಟೀನಾ ನಡುವಿನ ಪ್ರಶಸ್ತಿ ಹಣಾಹಣಿಯನ್ನು ಇಬ್ಬರ ನಡುವಿನ ಪೈಪೋಟಿ ಎಂದು ಪರಿಗಣಿಸಲಾಗುತ್ತಿದೆ.
ಯಮಲ್ ಜೊತೆಗೆ ಇತರ ಮೂವರು ಸ್ಪ್ಯಾನಿಷ್ ಆಟಗಾರರು ತಮ್ಮ ಬಾಲ್ಯದಲ್ಲಿ ಮೆಸ್ಸಿಯೊಂದಿಗೆ ತೆಗೆಸಿಕೊಂಡಿರುವ ಫೋಟೋಗಳನ್ನು ಹೊಂದಿದ್ದಾರೆ ಎಂಬುದು ಗಮನಾರ್ಹ.















