ವಾರ ಭವಿಷ್ಯ
ಮೇಷ-ಔಷಧಿ ವ್ಯಾಪಾರಿಗಳಿಗೆ ಉತ್ತಮ ವ್ಯವಹಾರವಿರುತ್ತದೆ. ಹತ್ತಿ ಬಟ್ಟೆಯನ್ನು ತಯಾರಿಸುವವರಿಗೆ ಮಾರುಕಟ್ಟೆ ವಿಸ್ತಾರಗೊಳ್ಳುತ್ತದೆ. ಮಕ್ಕಳ ಆರೋಗ್ಯದ ಕಡೆಗೆ ಹೆಚ್ಚಿನ ಗಮನ ಅಗತ್ಯ.
ವೃಷಭ-ತೆರಿಗೆ ತಜ್ಞರಿಗೆ ಸೂಕ್ತ ಪದೋನ್ನತಿ ದೊರೆಯುತ್ತದೆ. ಹೊಸ ವಾಹನದ ಖರೀದಿ ಬಗ್ಗೆ ಸಾಕಷ್ಟು ಚಿಂತನೆ ಮಾಡುವಿರಿ. ಹಣದ ಒಳಹರಿವು ನಿಮ್ಮ ಅಗತ್ಯ ಪೂರೈಸುತ್ತದೆ.
ಮಿಥುನ-ಆಸ್ತಿ ವಿಚಾರದಲ್ಲಿ ರಾಜಿ ಸಂಧಾನಗಳು ನಡೆದು ವಿಚಾರ ಸುಖಾಂತ್ಯವಾಗುತ್ತದೆ. ವ್ಯವಹಾರದಲ್ಲಿ ಹೊಸ ವ್ಯಕ್ತಿಗಳಿಂದ ಸಹಾಯ ಸಹಕಾರ ದೊರೆಯುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ.
ಕಟಕ-ನೌಕರಿಯಲ್ಲಿರುವವರಿಗೆ ಸಹೋದ್ಯೋಗಿಗಳಿಂದ ಕಿರಿಕಿರಿ ಉಂಟಾಗುವ ಸಾಧ್ಯತೆಯಿದೆ. ಸಂಗಾತಿಯ ಆದಾಯದಲ್ಲಿ ಏರಿಕೆಯನ್ನು ಕಾಣಬಹುದು.
ಸಿಂಹ-ಹಿರಿಯರು ಹಾಗೂ ಮಕ್ಕಳೊಂದಿಗೆ ವಾದವಿವಾದ ಮಾಡದಿರುವುದು ಉತ್ತಮ. ಸ್ತ್ರೀಯರೊಂದಿಗೆ ಹಣಕಾಸಿನ ವ್ಯವಹಾರವನ್ನು ಮಾಡುವಾಗ ಅತಿಯಾದ ಎಚ್ಚರಿಕೆ ಇರಲಿ. ಬಂಧುಗಳೊಂದಿಗೆ ಇದ್ದ ಭಿನ್ನಾಭಿಪ್ರಾಯಗಳು ದೂರವಾಗುತ್ತವೆ.
ಕನ್ಯಾ-ಉನ್ನತ ಶಿಕ್ಷಣ ಮಾಡಬೇಕೆನ್ನುವವರ ಆಸೆ ಕೈಗೂಡುತ್ತದೆ. ವಾದ-ವಿವಾದಗಳಲ್ಲಿ ನಿಮಗೆ ಯಶಸ್ಸು ದೊರೆಯುತ್ತದೆ. ಯಂತ್ರೋಪಕರಣಗಳ ವ್ಯಾಪಾರ ಮಾಡುವವರಿಗೆ ವ್ಯಾಪಾರ ವೃದ್ಧಿಸುತ್ತದೆ.
ತುಲಾ-ಕುಟುಂಬದಲ್ಲಿ ವಾದ ವಿವಾದಗಳಿಂದಾಗಿ ಸಾಕಷ್ಟು ಬೇಸರ ಮೂಡಬಹುದು. ಹಿತಶತ್ರುಗಳ ಬಾಧೆ ನಿಮ್ಮನ್ನು ಹೆಚ್ಚಾಗಿ ಬಾಧಿಸುತ್ತದೆ. ನಿಮ್ಮ ಸಂಗಾತಿಯ ವ್ಯತಿರಿಕ್ತ ನಡವಳಿಕೆಗಳು ನಿಮಗೆ ಗಾಬರಿ ತರುತ್ತದೆ.
padding: 0px; border: 0px; font-variant-numeric: inherit; font-variant-east-asian: inherit; font-stretch: inherit; line-height: inherit; vertical-align: baseline;">ವೃಶ್ಚಿಕ-ಮಹಿಳೆಯರಿಗೆ ಉದ್ಯೋಗದಲ್ಲಿ ಉತ್ತಮ ಅವಕಾಶ ತೆರೆದುಕೊಳ್ಳುವ ಸಾಧ್ಯತೆಯಿದೆ. ಕೃಷಿ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಬೇಕಾದ ಸಲಕರಣೆಗಳು ಒದಗಿಬರುತ್ತವೆ. ಸಂಗಾತಿಗೆ ನೆರೆಹೊರೆಯವರಿಂದ ವಿರೋಧ ಎದುರಾಗಬಹುದು.
ಧನು-ವ್ಯವಸಾಯದಲ್ಲಿ ತೊಡಗಿಸಿಕೊಂಡಿರುವವರಿಗೆ ಸಹಾಯಧನ ಹರಿದು ಬರುತ್ತದೆ. ಬಂಧುಗಳ ಮಧ್ಯಪ್ರವೇಶದಿಂದಾಗಿ ಪ್ರೇಮ ಪ್ರಕರಣ ಯಶಸ್ಸನ್ನು ಕಾಣುತ್ತದೆ. ಸರ್ಕಾರಿ ಹುದ್ದೆಯಲ್ಲಿರುವವರು ಭ್ರಷ್ಟಾಚಾರದ ಆರೋಪವನ್ನು ಎದುರಿಸುವ ಸಾಧ್ಯತೆ ಇದೆ.
ಮಕರ-ವ್ಯವಹಾರಗಳಿಂದ ನಿಮ್ಮ ಸಂಪರ್ಕವನ್ನು ವೃದ್ಧಿ ಮಾಡಿಕೊಳ್ಳುವಿರಿ. ಲೆಕ್ಕಪರಿಶೋಧಕರಿಗೆ ಬಿಡುವಿಲ್ಲದ ಕೆಲಸವಿರುತ್ತದೆ. ತನ್ಮೂಲಕ ಆದಾಯವೂ ಹೆಚ್ಚುತ್ತದೆ. ಒಂದು ಋಣ ಪರಿಹಾರ ಮಾಡಿ ತೃಪ್ತಿಯನ್ನು ಕಾಣುವಿರಿ.
ಕುಂಭ-ಆತ್ಮೀಯ ಸಲಹೆಯಿಂದ ವೃತ್ತಿಯಲ್ಲಿ ಎದುರಾದ ಆಪತ್ತಿನಿಂದ ಪಾರಾಗುವಿರಿ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಯುವಕರು ಉಡಾಫೆ ಮಾತಿನಿಂದ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಬಹುದು.
ಮೀನ-ಪ್ರವಾಸೋದ್ಯಮ ವ್ಯವಹಾರವನ್ನು ಮಾಡುವವರ ವ್ಯವಹಾರ ಸುಧಾರಿಸುತ್ತದೆ. ಹಣಕಾಸಿನ ವಿಷಯದಲ್ಲಿ ಜಾಗರೂಕತೆ ಅತಿ ಮುಖ್ಯ. ಮಕ್ಕಳ ಆರೋಗ್ಯದಲ್ಲಿ ಸಾಕಷ್ಟು ವ್ಯತ್ಯಾಸಗಳನ್ನು ಕಾಣಬಹುದು. ತರಕಾರಿ ವ್ಯಾಪಾರಿಗಳಿಗೆ ವ್ಯಾಪಾರ ಹೆಚ್ಚುತ್ತದೆ.















