Coastal Bulletin

ಮೇಷ ಕಾರ್ಯಕ್ಷೇತ್ರದಲ್ಲಿನ ಸನ್ನಿವೇಶಗಳನ್ನು ನಿಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುವಿರಿ. ಕೆಲವು ವಿಚಾರಗಳನ್ನು ವಿಭಿನ್ನ ದೃಷ್ಟಿಕೋನದಿಂದ ನೋಡಿ ಅಪಾರ್ಥ ಕಲ್ಪಿಸುವಿರಿ. ದೈನಂದಿನ ರೀತಿ ರಿವಾಜುಗಳನ್ನು ಉಳಿಸಿಕೊಳ್ಳಲು ಬಹಳ ಹರಸಾಹಸಪಡುವಿರಿ. ಹೊಸ ಅವಕಾಶಗಳು ಒದಗಿ ಬರುವುದರಿಂದ ನಿಯೋಜಿತ ಕೆಲಸವನ್ನು ಆಸಕ್ತಿಯಿಂದ ಒಪ್ಪಿಕೊಳ್ಳುವಿರಿ. ಹಣದ ಒಳಹರಿವು ನಿಮ್ಮ ಎಣಿಕೆಯಷ್ಟು ಇರುತ್ತದೆ.

ವೃಷಭ

ವಾಹನಗಳ ಬಿಡಿಭಾಗಗಳನ್ನು ತಯಾರು ಮಾಡುವ ಕಂಪನಿಗಳಿಗೆ ವ್ಯವಹಾರ ಹೆಚ್ಚುತ್ತದೆ ಮತ್ತು ಲಾಭವೂ ಬರುತ್ತದೆ. ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನಕ್ಕಾಗಿ ಉತ್ತಮ ಅವಕಾಶಗಳು ದೊರೆಯುತ್ತವೆ. ಸ್ವತ್ತುಗಳ ವಿವಾದಗಳಲ್ಲಿ  ಬಂಧುಗಳೊಡನೆ ಸೌಹಾರ್ದ ರೀತಿಯ ಮಾತುಕತೆಯಿಂದ ಲಾಭಕರ ನಿರ್ಣಯಗಳು ಮತ್ತು ನಿರ್ಧಾರಗಳು ಹೊರಬರುತ್ತವೆ. 

ಮಿಥುನ

ಅನವಶ್ಯಕ ಮಾತುಗಳಿಂದ ಉದ್ವೇಗಕ್ಕೆ ಒಳಗಾಗುವ ಸಾಧ್ಯತೆಗಳಿವೆ. ಮಾತು ಕಡಿಮೆ ಮಾಡಿರಿ. ಖರ್ಚು ಹೆಚ್ಚಾದರೂ ಆದಾಯವು ಅಷ್ಟೇ ಇರುತ್ತದೆ. ಸಿನಿಮಾ ಕ್ಷೇತ್ರಗಳಲ್ಲಿ ದುಡಿಯುತ್ತಿರುವವರ ಆದಾಯದಲ್ಲಿ ಏರಿಕೆಯನ್ನು ಕಾಣಬಹುದು. ಹೋಟೆಲ್ ಉದ್ಯಮದವರಿಗೆ ಸ್ವಲ್ಪಮಟ್ಟಿನ ಚೇತರಿಕೆಯನ್ನು ಕಾಣಬಹುದು.

ಕಟಕ

ಕಾರ್ಯನಿಮಿತ್ತ ಕೈಗೊಂಡಿದ್ದ ದೂರ ಪ್ರಯಾಣದಿಂದ ಲಾಭ ಗಳಿಸುವಿರಿ. ವೆಚ್ಚದ ಮೇಲಿನ ಕಡಿತದಿಂದ ಉಳಿತಾಯವನ್ನು ಸಾಧಿಸುವಿರಿ. ಕಾರ್ಯಕ್ಷೇತ್ರಗಳಲ್ಲಿ ಕೆಲಸ ಕಾರ್ಯಗಳು ಸುಸೂತ್ರವಾಗಿ ಸಾಗುತ್ತವೆ. ಸಾಮಾಜಿಕ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಮಾಡುವಿರಿ. ಸಹೋದ್ಯೋಗಿಗಳೊಡನೆ ಉತ್ತಮ ಹೊಂದಾಣಿಕೆಯನ್ನು ಸಾಧಿಸುವಿರಿ. ಕೆಲಸದ ಒತ್ತಡ ಕಡಿಮೆಯಾಗಿ ಸ್ವಲ್ಪ ನೆಮ್ಮದಿ ಅನುಭವಿಸುವಿರಿ. 

ಸಿಂಹ

ಕಾರ್ಯನಿಮಿತ್ತ ಕೈಗೊಂಡಿದ್ದ ದೂರ ಪ್ರಯಾಣದಿಂದ ಲಾಭ ಗಳಿಸುವಿರಿ. ವೆಚ್ಚದ ಮೇಲಿನ ಕಡಿತದಿಂದ ಉಳಿತಾಯವನ್ನು ಸಾಧಿಸುವಿರಿ. ಕಾರ್ಯಕ್ಷೇತ್ರಗಳಲ್ಲಿ ಕೆಲಸ ಕಾರ್ಯಗಳು ಸುಸೂತ್ರವಾಗಿ ಸಾಗುತ್ತವೆ. ಸಾಮಾಜಿಕ ವರ್ಚಸ್ಸನ್ನು ಹೆಚ್ಚಿಸಿಕೊಳ್ಳುವ ಪ್ರಯತ್ನವನ್ನು ಮಾಡುವಿರಿ. ಸಹೋದ್ಯೋಗಿಗಳೊಡನೆ ಉತ್ತಮ ಹೊಂದಾಣಿಕೆಯನ್ನು ಸಾಧಿಸುವಿರಿ. ಕೆಲಸದ ಒತ್ತಡ ಕಡಿಮೆಯಾಗಿ ಸ್ವಲ್ಪ ನೆಮ್ಮದಿ ಅನುಭವಿಸುವಿರಿ. 

ಕನ್ಯಾ

ಅಪೂರ್ವ ವಸ್ತುಗಳನ್ನು ಸಂಗ್ರಹ ಮಾಡಲು ಅಲ್ಪರ ಸಹವಾಸ ಮಾಡಬೇಡಿರಿ. ಮನೆಯ ಅಲಂಕಾರಕ್ಕಾಗಿ ಸ್ವಲ್ಪ ಹಣವನ್ನು ಖರ್ಚು ಮಾಡುವಿರಿ. ವಾಹನ ವ್ಯಾಪಾರ ಮಾಡುವವರಿಗೆ ಸ್ವಲ್ಪಮಟ್ಟಿನ ಅಭಿವೃದ್ಧಿ ಇರುತ್ತದೆ. ಈ ಹಿಂದೆ  ಹೂಡಿಕೆ ಮಾಡಿದ್ದ ಹಣ ಈಗ ಇಡಿ ಗಂಟಾಗಿ ಒದಗಿ ಬರುತ್ತದೆ. ಇದನ್ನು ಬಳಸಿ ಹಳೆಯ ಸಾಲಗಳನ್ನು ತೀರಿಸಿಕೊಳ್ಳಬಹುದು. ಆಸ್ತಿಯ ವಿಚಾರದಲ್ಲಿ ಹಣ ಮೋಸಹೋಗುವ ಸಾಧ್ಯತೆಗಳು ಕಾಣುತ್ತಿವೆ, ಎಚ್ಚರ.

ತುಲಾ

ಕ್ರೀಡಾಪಟುಗಳಿಗೆ ತಮ್ಮ ಕ್ರೀಡೆಯಲ್ಲಿ ಭಾಗವಹಿಸಿ ಉತ್ತಮ ಪ್ರದರ್ಶನ ನೀಡುವುದಕ್ಕಾಗಿ ಹೆಚ್ಚಿನ ಹಣ ದೊರೆಯುತ್ತದೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಹಣ ಕ್ರೋಡೀಕರಣ ಮಾಡುವಿರಿ. ಕಣ್ಣಿನ ತೊಂದರೆ ಅಥವಾ ರಕ್ತದಲ್ಲಿನ ತೊಂದರೆಗಳನ್ನು ಪರೀಕ್ಷೆ ಮಾಡಿಸಿಕೊಳ್ಳುವುದು ಉತ್ತಮ. ವಿದೇಶಿ ವ್ಯವಹಾರಗಳನ್ನು ಮಾಡುತ್ತಿರುವವರಿಗೆ ಅನಿರೀಕ್ಷಿತ ಅವಕಾಶ

ಒದಗಿ ವ್ಯವಹಾರ ವಿಸ್ತರಿಸುತ್ತದೆ. 

ವೃಶ್ಚಿಕ

ರೇಷ್ಮೆ ಬೆಳೆಗಾರರಿಗೆ ಉತ್ತಮ ಆದಾಯ ಬರುವ ಸಾಧ್ಯತೆ ಇದೆ. ರೇಷ್ಮೆ ಬಟ್ಟೆಯನ್ನು ನೇಯುವ ಕೆಲಸವನ್ನು ಮಾಡುವವರಿಗೆ ಬೇಡಿಕೆ ಹೆಚ್ಚಬಹುದು. ವಿದ್ಯಾರ್ಥಿಗಳಿಗೆ ವಿಶೇಷ ರೀತಿಯ ಸೌಲಭ್ಯ ಒದಗಿ ಬರುವ ಸಾಧ್ಯತೆ ದಟ್ಟವಾಗಿದೆ. ಜವಳಿ ವ್ಯಾಪಾರಸ್ಥರಿಗೆ ಹೆಚ್ಚಿನ ವ್ಯಾಪಾರವಿರುತ್ತದೆ. ಪಾಲುದಾರಿಕೆಯಿಂದ ಹೊರಗಡೆ ಇದ್ದ ವ್ಯಾಪಾರದಿಂದ ಹೆಚ್ಚು ಲಾಭ ಬರಬಹುದು. ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಸಿಗಬೇಕಾಗಿದ್ದ ಸವಲತ್ತುಗಳು ಈಗ ಸಿಗುವ ಸಾಧ್ಯತೆಗಳಿವೆ. 

ಧನು

ಮಕ್ಕಳಿಗೆ ಓದಿನಲ್ಲಿ ಆಸಕ್ತಿಯನ್ನು ಪೋಷಿಸುವ ಸಲುವಾಗಿ ಹೆಚ್ಚಿನ ಧನವ್ಯಯ ಮಾಡುವಿರಿ. ಹೆಚ್ಚು ಜನಾನುರಾಗಿಯಾಗಿರಲು ಪ್ರಯತ್ನ ಪಡುವಿರಿ. ಮಾತೃ ವರ್ಗದವರಿಂದ ನಿಮ್ಮ ಕೆಲಸಗಳಿಗೆ ಸಾಕಷ್ಟು ಸಹಾಯ ದೊರೆಯುತ್ತದೆ. ವೈಜ್ಞಾನಿಕ ಸಂಶೋಧನೆಗಳನ್ನು ಮಾಡುತ್ತಿರುವವರಿಗೆ ಬೇಕಾದ ಸೂಕ್ತ ಸವಲತ್ತುಗಳು ದೊರೆಯುತ್ತವೆ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ಮಹಿಳೆಯರ ಪ್ರಗತಿಯು ಉತ್ತಮವಾಗಿರುತ್ತದೆ. 

ಮಕರ

ಕೃಷಿ ಚಟುವಟಿಕೆಗಳು ಭರದಿಂದ ಸಾಗುತ್ತವೆ. ಮಕ್ಕಳ ಸಂತೋಷಕ್ಕಾಗಿ ಕರಕುಶಲ ವಸ್ತುಗಳನ್ನು ಖರೀದಿ ಮಾಡುವಿರಿ. ಪ್ರಯಾಣದಲ್ಲಿ ಗಣ್ಯವ್ಯಕ್ತಿಗಳ ಪರಿಚಯವಾಗಿ ಅವರಿಂದ ನಿಮಗೆ ಪ್ರಯಾಣದಲ್ಲಿ ಅನುಕೂಲವಾಗುತ್ತದೆ. ಸ್ವತಂತ್ರ ವೃತ್ತಿಯನ್ನು ಮಾಡುತ್ತಿರುವವರಿಗೆ ನಿರಂತರ ಆದಾಯ ಇದ್ದರೂ ಖರ್ಚುವೆಚ್ಚಗಳ ಬಗ್ಗೆ ಜಾಗರೂಕತೆ  ಅಗತ್ಯ. ಹಣದ ಒಳಹರಿವು ನಿಮ್ಮ ಅಗತ್ಯಕ್ಕೆ ತಕ್ಕಷ್ಟು ಇರುತ್ತದೆ. 

ಕುಂಭ

ಆಸೆ ಪಡುತ್ತಿದ್ದ ವಾಹನ ಖರೀದಿ ಮಾಡಲು ಮುಂದಾಗುವಿರಿ. ಅದಕ್ಕೆ ಬೇಕಾದ ಸಾಲ ಸೌಲಭ್ಯಗಳು ದೊರೆಯುತ್ತವೆ. ಹಿರಿಯರಿಗೆ ಗಣ್ಯರ ಜೊತೆ ವೇದಿಕೆಗಳಲ್ಲಿ ಕಾಣಿಸಿಕೊಳ್ಳುವ ಯೋಗವಿದೆ. ಸಾಂಸ್ಕೃತಿಕ ಕ್ಷೇತ್ರದ ಉನ್ನತಿಗಾಗಿ ಶ್ರಮ ಪಟ್ಟಿದ್ದಕ್ಕೆ ಗೌರವ ದೊರೆಯಬಹುದು. ಸರ್ಕಾರಿ ಮಟ್ಟದ ಕೆಲಸ ಕಾರ್ಯಗಳಲ್ಲಿ ಮುನ್ನಡೆಯನ್ನು ಕಾಣಬಹುದು. ನಿಮ್ಮ ಆದಾಯವು ಚೇತರಿಕೆಯತ್ತ ಸಾಗುತ್ತದೆ. ವಿದ್ಯಾರ್ಥಿಗಳಿಗೆ ಹೊಸ ವಿಷಯಗಳ ಪರಿಚಯದಿಂದ ಸಾಕಷ್ಟು ಸ್ಫೂರ್ತಿ ಮತ್ತು ಕಲಿಯಲು ಉತ್ಸಾಹ ಬರುತ್ತದೆ.

ಮೀನ

ಹಿರಿಯರ ಮಾತಿನಂತೆ ನಡೆದಲ್ಲಿ ಹೆಚ್ಚಿನ ಗೌರವ ದೊರೆಯುತ್ತದೆ. ಪ್ರೀತಿಪಾತ್ರರೊಂದಿಗೆ ವಿಹಾರಕ್ಕಾಗಿ ಹೋಗಿ ಬರುವ ಸಾಧ್ಯತೆಗಳಿವೆ. ಭೂಮಿಗೆ ಸಂಬಂಧಿಸಿದ ವ್ಯವಹಾರವನ್ನು ಮಾಡುವವರಿಗೆ ಲಾಭ ಹೆಚ್ಚುವ ಸಾಧ್ಯತೆಗಳಿವೆ. ಕಾರ್ಯಕ್ಷೇತ್ರದಲ್ಲಿ ಅತಿಯಾದ ಆತ್ಮವಿಶ್ವಾಸದಿಂದ ಹಿತಶತ್ರುಗಳು ಹೆಚ್ಚಾಗಬಹುದು. ಮಿಶ್ರಲೋಹಗಳ ತಯಾರಕರಿಗೆ ಮಾರುಕಟ್ಟೆ ವಿಸ್ತಾರವಾಗುವ ಯೋಗವಿದೆ. ಸಂಗೀತ ವಿದ್ವಾಂಸರಿಗೆ ಸಾಕಷ್ಟು ಮನ್ನಣೆ ಇರುತ್ತದೆ.

Leave a Comment