ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಮಂಗಳೂರು ( ಕರ್ನಾಟಕ ಸಹಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ) ಆಶ್ರಯದಲ್ಲಿ 2021 ಸಾಲಿನ ಗೌರವ ಪ್ರಶಸ್ತಿ ಪ್ರದಾನ ಮತ್ತು ಪುಸ್ತಕದ ಬಹುಮಾನ , ವಿಶೇಷ ಸಾಧಕರಿಗೆ ರಾಜ್ಯ ಪುರಸ್ಕಾರ ಕಾರ್ಯಕ್ರಮ ಸೆ.24 ರಂದು ಮಂಗಳೂರಿನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ನಡೆದಿದೆ.
ತುಳು ಅಕಾಡೆಮಿಯ ಅಧ್ಯಕ್ಷ ದಯಾನಂದ .ಜಿ.ಕತ್ತಲ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಇಂಧನ ಸಚಿವ ಶ್ರೀ. ವಿ.ಸುನೀಲ್ ಕುಮಾರ್, ಶಾಸಕ ವೇದವ್ಯಾಸ ಕಾಮತ್, ಸಂಸದ ನಳಿನ್ ಕುಮಾರ್ ಕಟೀಲು, ಶಾಸಕ ಉಮಾನಾಥ ಕೋಟ್ಯಾನ್, ಮೋಹನ್
ಆಳ್ವ ಹೀಗೆ ಹಲವು ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ತುಳುನಾಡು,ತುಳುಭಾಷೆ, ತುಳು ಸಂಸ್ಕೃತಿ ಹಾಗೂ ತುಳು ಲಿಪಿ ಗಾಗಿ ಕೆಲಸ ಮಾಡುವ ಜೈ ತುಳುನಾಡು ಸಂಘಟನೆ(ರಿ )ಗೆ ಸಂಘಟನಾ ಪ್ರಶಸ್ತಿ ನೀಡಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜೈ ತುಳುನಾಡು ಸಂಘಟನೆಯ ಕಾರ್ಯಕರ್ತರು ಉಪಸ್ಥಿತರಿದ್ದರು.














