Coastal Bulletin

ಮೇಷ ಯುವತಿಯರಿಗೆ ಉತ್ತಮ ಅವಕಾಶಗಳು ತೆರೆದುಕೊಳ್ಳುವ ಸಂಭವವಿದೆ. ನೌಕರಿಯಲ್ಲಿರುವ ಮಹಿಳೆಯರಿಗೆ ಉದ್ಯೋಗ ಸ್ಥಳದಲ್ಲಿ ಕಿರಿಕಿರಿ ಉಂಟಾಗಬಹುದು. ಮಕ್ಕಳಿಗಾಗಿ ಹೆಚ್ಚು ಹಣ ಖರ್ಚು ಮಾಡಬೇಕಾದೀತು. ಹೊಸದಾಗಿ ಬರುವ ಜಂಟಿ ವ್ಯವಹಾರಗಳಲ್ಲಿ ಭಾಗವಹಿಸದಿರುವುದು ಬಹಳ ಉತ್ತಮ. 

ವೃಷಭ

ಆತ್ಮೀಯರ ಸಲಹೆಯಿಂದ ಎದುರಾಗಿದ್ದ ವಿಪತ್ತಿನಿಂದ ಪಾರಾಗುವಿರಿ. ಹಣದ ಹರಿವು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ಕೆಲವು ನೌಕರಸ್ಥರಿಗೆ ಬಿಡುವಿಲ್ಲದ ಕೆಲಸಗಳಿಂದಾಗಿ ಅವರ ಸಂಗಾತಿಯ ಕೋಪಕ್ಕೆ ಗುರಿಯಾಗಬಹುದು. ನಿಮ್ಮ ಸಂಗಾತಿಗಾಗಿ ಹೊಸ ವಸ್ತುಗಳನ್ನು ಖರೀದಿಸುವಿರಿ.

ಮಿಥುನ

ಔಷಧಿ ತಯಾರಕರಿಗೆ ವ್ಯಾಪಾರದಲ್ಲಿ ಹೆಚ್ಚಳವನ್ನು ಕಾಣಬಹುದು. ಬಟ್ಟೆ ವ್ಯಾಪಾರಿಗಳ ವ್ಯಾಪಾರದಲ್ಲಿ ವಿಸ್ತರಣೆಯಾಗಿ ಲಾಭವಿರುತ್ತದೆ. ಲೇವಾದೇವಿ ವ್ಯಾಪಾರ ಮಾಡುವವರಿಗೆ ಸ್ವಲ್ಪ ಹಿನ್ನಡೆ ಇರುತ್ತದೆ.

ಕಟಕ

ಪ್ರವಾಸೋದ್ಯಮ ಕೆಲಸವನ್ನು ಮಾಡುತ್ತಿರುವವರಿಗೆ ಉತ್ತಮ ಬೇಡಿಕೆ ಬರುತ್ತದೆ. ಸಾರಿಗೆ ವ್ಯವಸ್ಥೆಯನ್ನು ನೋಡಿಕೊಳ್ಳುತ್ತಿರುವವರಿಗೆ ಆದಾಯದಲ್ಲಿ ಹೆಚ್ಚಳವಿದೆ. ಬರಹಗಾರರಿಗೆ ಹಾಗೂ ಸಾಹಿತಿಗಳಿಗೆ ಸನ್ಮಾನ ದೊರೆಯುವ ಸಾಧ್ಯತೆ ಇದೆ. ಹಣದ ಒಳಹರಿವು ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. 

ಸಿಂಹ

ಕ್ರೀಡಾಪಟುಗಳಿಗೆ ಸಾಧನೆಗೆ ಬೇಕಾದ ಎಲ್ಲ ರೀತಿಯ ಸವಲತ್ತುಗಳು ದೊರೆಯುತ್ತವೆ. ದೊಡ್ಡ ಹಣಕಾಸಿನ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿರುವ ಉನ್ನತ ಅಧಿಕಾರಿಗಳಿಗೆ ಪದೋನ್ನತಿ ಸಿಗುವ ಸಾಧ್ಯತೆ ಇದೆ. ನಿಮ್ಮ ಕೆಲಸ ಕಾರ್ಯಗಳಿಗೆ ಸಾಕಷ್ಟು ಸಹಾಯ ದೊರೆತು ಕಾರ್ಯಸಾಧನೆ ಆಗುವುದು.

ಕನ್ಯಾ

ಕೃಷಿಕರಿಗೆ ಬೇಕಾದ ಅನುಕೂಲತೆ ಒದಗಿಬರುತ್ತದೆ. ಬಂಧುಗಳ ಮಧ್ಯಪ್ರವೇಶದಿಂದ ಆಸ್ತಿ ವಿವಾದಗಳು ಬಗೆಹರಿಯುತ್ತವೆ. ಪ್ರೀತಿ ಪ್ರೇಮ ಪ್ರಕರಣಗಳಲ್ಲಿ ಯಶಸ್ಸನ್ನು ಕಾಣಬಹುದು. ಉದ್ಯೋಗವನ್ನು ಹುಡುಕುತ್ತಿರುವವರಿಗೆ ಉದ್ಯೋಗ ದೊರೆಯುತ್ತದೆ.

ತುಲಾ

ಹಿರಿಯ ಅಧಿಕಾರಿಗಳಿಗೆ ಸ್ಥಾನ ಬದಲಾವಣೆಯ ಸಾಧ್ಯತೆಗಳಿವೆ. ನೌಕರ ವರ್ಗಕ್ಕೆ ಇದ್ದ ಕೆಲಸದ ಒತ್ತಡಗಳು ಕಡಿಮೆಯಾಗುತ್ತವೆ. ಕೆಲವೊಂದು ಕೆಲಸಗಳಲ್ಲಿ ನಿಮ್ಮ ಕುಯುಕ್ತಿ ಬಯಲಾಗಿ ಮುಜುಗರ ಪಡುವ ಸಂದರ್ಭವಿದೆ.

ರಾಜಕೀಯ ನಾಯಕರುಗಳ ಸಹಾಯದಿಂದ ನಿಮ್ಮ ವೈಯಕ್ತಿಕ ಕೆಲಸಗಳನ್ನು ಮಾಡಿಕೊಳ್ಳುವಿರಿ. 

ವೃಶ್ಚಿಕ

ಖರೀದಿ ಮತ್ತು ಮಾರಾಟ ಮಾಡುವ ವ್ಯಾಪಾರಸ್ಥರಿಗೆ ಉತ್ತಮ ಲಾಭವಿರುತ್ತದೆ. ಬುದ್ಧಿಜೀವಿಗಳು ವಿಪರೀತ ಮಾತನಾಡಿ ಮುಜುಗರಕ್ಕೆ ಒಳಗಾಗುವರು. ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶಗಳು ತೆರೆದುಕೊಳ್ಳುತ್ತವೆ.  ಗೃಹ ನಿರ್ಮಾಣ ಅಥವಾ ಖರೀದಿ ಮಾಡುವ ಸಾಧ್ಯತೆ ಇದೆ. 

ಧನು

ಆರ್ಥಿಕ ಅಡಚಣೆಗಳು ಹಂತಹಂತವಾಗಿ ನಿವಾರಣೆಯಾಗಿ ಆರ್ಥಿಕ ಮಟ್ಟ ಸುಧಾರಿಸುತ್ತದೆ. ಗಮನವಿಟ್ಟು ಮಾಡಿದ ಕೆಲಸಗಳಲ್ಲಿ ಉತ್ತಮ ಯಶಸ್ಸು ದೊರೆಯುತ್ತದೆ. ವಿದ್ಯಾಭ್ಯಾಸದ ಕಡೆಗೆ ಹೆಚ್ಚಿನ ಗಮನ ಅಗತ್ಯ. ಅನಿವಾರ್ಯ ಕಾರಣಗಳನ್ನು ಹೊರತುಪಡಿಸಿ ದೂರ ಪ್ರಯಾಣ ಮಾಡುವುದು ಬೇಡ. 

ಮಕರ

ಪಾಲುದಾರಿಕೆಯ ವ್ಯವಹಾರಗಳಲ್ಲಿ ಉತ್ತಮ ಯಶಸ್ಸನ್ನು ಕಾಣುವಿರಿ. ಕಚೇರಿ ಕೆಲಸಗಳಲ್ಲಿ ಉತ್ತಮ ಹೆಸರನ್ನು ಪಡೆಯುವಿರಿ. ಲೆಕ್ಕಪರಿಶೋಧಕರಿಗೆ ಬಿಡುವಿಲ್ಲದ ಕೆಲಸವಿರುತ್ತದೆ. ಉನ್ನತ ಅಧ್ಯಯನಕ್ಕೆ ಉತ್ತೇಜನ ದೊರೆತು ಅಧ್ಯಯನ ಮುಂದುವರೆಸುವಿರಿ. ಕುಟುಂಬ ಸಮಸ್ಯೆಗಳಿಗೆ ಕುಳಿತು ಆಲೋಚಿಸಿ ಪರಿಹಾರ ಕಂಡುಕೊಳ್ಳುವಿರಿ. 

ಕುಂಭ

ರಾಜೀ ಸಂಧಾನಗಳು ಸಫಲಗೊಂಡು ಹಿರಿಯರು ಪ್ರತಿಷ್ಠಿತ ಸ್ಥಾನವೊಂದನ್ನು ಅಲಂಕರಿಸುವ ಸಾಧ್ಯತೆ ಇದೆ.  ಶತ್ರುಗಳು ಸೃಷ್ಟಿಸುವ ಸಂಚುಗಳಲ್ಲಿ ಸಿಕ್ಕಿಬೀಳದಂತೆ ಎಚ್ಚರ ವಹಿಸಿರಿ. ಧೈರ್ಯ ಮತ್ತು ಆತ್ಮವಿಶ್ವಾಸಗಳಿಂದ ಯತ್ನಿಸಿದ ಕಾರ್ಯಗಳಲ್ಲಿ ಯಶಸ್ಸು ಇರುತ್ತದೆ

ಮೀನ

ನೌಕರಿಯಲ್ಲಿರುವವರಿಗೆ ಬೇಸರವಾಗುವ ಸಾಧ್ಯತೆಗಳಿವೆ ಹಾಗೂ ಮನಸ್ಸಿಗೆ ಅಹಿತಕರವೆನಿಸುವ ಸುದ್ದಿಯನ್ನು ಕೇಳುವ ಸಾಧ್ಯತೆ ಇದೆ. ದ್ರವ್ಯಸಂಗ್ರಹ ಮಾಡಲು ಅತಿ ಆಸಕ್ತಿಯನ್ನು ತೋರುವಿರಿ. ವಿದೇಶಿ ವ್ಯವಹಾರ ಮಾಡುವವರಿಗೆ ಸ್ವಲ್ಪ ಹಿನ್ನಡೆ ಇರುತ್ತದೆ. ಭೂ ಖರೀದಿ ಮಾಡಬಹುದು.

Leave a Comment