Coastal Bulletin

ಬಂಟ್ವಾಳ : ತಾಲೂಕಿನ ಅಜಿಲಮೊಗರು, ಕುಟ್ಟಿಕಲ ಹನುಮಾನ್ ಕಟ್ಟೆಯ ಬಳಿ ವಿಶ್ವಹಿಂದೂ ಪರಿಷತ್ ಹಾಗೂ ಭಜರಂಗದಳ ಇದರ ಹನುಮಾನ್ ಶಾಖೆಯ ಆಶ್ರಯದಲ್ಲಿ ಮಾ 21ರಂದು ಸೋಮವಾರ ಶ್ರೀ ಕಟೀಲು ಮೇಳದವರಿಂದ ಶ್ರೀ ದೇವಿ ಮಹಾತ್ಮೆ ಎಂಬ ಯಕ್ಷಗಾನ ಬಯಲಾಟ ನಡೆಯಲಿದೆ.

ಸಂಜೆ 5ಗಂಟೆಗೆ ಬ್ರಹ್ಮಶ್ರೀ ನಾರಾಯಣಗುರು ಮಂದಿರ ನೇಲ್ಯಪಲ್ಕೆ ಇಲ್ಲಿಂದ ಬ್ರಹ್ಮಶ್ರೀ ಹಾಗೂ ಯಕ್ಷಚಿಗುರು ಭಜನಾ ತಂಡದಿಂದ ಕುಣಿತ ಭಜನೆಯೊಂದಿಗೆ ದೇವರ ಮೆರವಣಿಗೆ

ಸಾಗಿ ಬರಲಿದೆ.

ರಾತ್ರಿ 8 ಗಂಟೆಗೆ ದೇವರ ಚೌಕಿ ಪೂಜೆ ನಡೆದು ಪ್ರಸಾದ ರೂಪವಾಗಿ ಅನ್ನಸಂತರ್ಪಣೆ ನಡೆಯಲಿದೆ ಎಂದು ಸಮಿತಿಯು ಪ್ರಕಟಣೆಯಲ್ಲಿ ತಿಳಿಸಿದೆ.

Leave a Comment