ಕಲಾಬಾಗಿಲು: ಬುರೂಜ್ ಶಾಲೆಯಲ್ಲಿ ಆಟಿದ ಲೇಸ್ ಕಾರ್ಯಕ್ರಮ.                    ಹಿಂದೆ ಆಟಿ ಆಚಣೆಯಲ್ಲ, ಪ್ರಕೃತಿ ಸಹಜ ಬದುಕು-ಗೋಪಾಲ ಅಂಚನ್.

Coastal Bulletin
ಕಲಾಬಾಗಿಲು: ಬುರೂಜ್ ಶಾಲೆಯಲ್ಲಿ ಆಟಿದ ಲೇಸ್ ಕಾರ್ಯಕ್ರಮ.                    ಹಿಂದೆ ಆಟಿ ಆಚಣೆಯಲ್ಲ, ಪ್ರಕೃತಿ ಸಹಜ ಬದುಕು-ಗೋಪಾಲ ಅಂಚನ್.

ಬಂಟ್ವಾಳ: ಹಿಂದಿನ ಕಾಲದಲ್ಲಿ ಆಟಿ ನಮ್ಮ ಹಿರಿಯರಿಗೆ ಆಚರಣೆಯಾಗಿರಲಿಲ್ಲ, ಪ್ರಕೃತಿ ಸಹಜ ಬದುಕಾಗಿತ್ತು ಎಂದು ಹಿರಿಯ ಪತ್ರಕರ್ತ, ತುಳು ಜಾನಪದ ಅಧ್ಯಯನಕಾರ ಗೋಪಾಲ ಅಂಚನ್ ಹೇಳಿದರು.  


ಕಲಾಬಾಗಿಲು ರಝಾನಗರ ಬುರೂಜ್ ಇಂಗ್ಲೀಷ್ ಮೀಡಿಯಂ  ಶಾಲೆಯಲ್ಲಿ ನಡೆದ  ಆಟಿದ ಲೇಸ್ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು ವಾರ್ಷಿಕ ಆವರ್ತನದಲ್ಲಿ ಅತ್ಯಂತ ಕಷ್ಟಕರವಾದ ತಿಂಗಳಾದ ಅಷಾಢದಲ್ಲಿ  ಕಾಡುತ್ತಿದ್ದ ಹಸಿವು, ಅನಾರೋಗ್ಯ, ಭಯವನ್ನು ನಿವಾರಿಸಲು ನಮ್ಮ ಹಿರಿಯರು ಪ್ರಕೃತಿಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದರು. ಅದನ್ನು ನೆನೆಯುವ ಉದ್ಧೇಶದಲ್ಲಿ ಇಂದು ಆಟಿ ಆಚರಣೆಯಾಗಿದೆ ಹೊರತು ಸಂಭ್ರಮವಲ್ಲ. ನಾವು ಮತ್ತೆ ಪ್ರಕೃತಿಯೊಂದಿಗೆ ಮುಖ: ಮಾಡಿ ಬದುಕಬೇಕೆನ್ನುವುದೇ  ಆಟಿ ಆಚರಣೆಯ ಉದ್ಧೇಶವಾಗಿದೆ ಎಂದರು.

ಗ್ರಾಮ ಪಂಚಾಯತು ಮಾಜಿ ಅಧ್ಯಕ್ಷ ಬಾಲಕೃಷ್ಣ ಆರ್. ಅಂಚನ್  ಹಿಂಗಾರ ಅರಳಿಸುವುದರ ಮೂಲಕ ಉದ್ಘಾಟಿಸಿದರು.

ಈಗಿನ ಮತ್ತು ಹಿಂದಿನ ಆಟಿಯ ಹಿಂದಿರುವ ವೈರುದ್ಯಗಳ  ಬಗ್ಗೆ ಅವರು ತಿಳಿಸಿದರು. ಶಾಲಾ ಸಂಚಾಲಕ ಶೇಖ್

ರಹ್ಮತ್ತುಲ್ಲಾಹ್ ಅಧ್ಯಕ್ಷತೆ ವಹಿಸಿದ್ದರು. ಗ್ರಾಮ ಪಂಚಾಯತ್ ಮಾಜಿ ಸದಸ್ಯ ಪ್ರಶಾಂತ್ ಜೈನ್,  ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷ ವಲೇರಿಯನ್ ಲಸ್ರಾದೊ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕಿ ಎಲ್ಸಿ ಲಸ್ರಾದೋ, ಶಬಾನಾ ಶೇಖ್, ಪುಂಜಾಲಕಟ್ಟೆ ಪೋಲಿಸ್ ಹೆಡ್ ಕಾನ್ಸ್ಟೇಬಲ್ ಹರೀಶ್ ನಾಯ್ಕ್ , ಅಧಿಕಾರಿ ಕರೀಂ ಸಾಬ್ ಉಪಸ್ಥಿತರಿದ್ದರು.  ವಿದ್ಯಾರ್ಥಿಗಳು, ಪೋಷಕರು ತಂದ ವಿವಿಧ ಬಗೆಯ ಆಟಿ ತಿಂಗಳ ವಿಶೇಷ ಆಹಾರಗಳ ಪ್ರದರ್ಶನ ಮತ್ತು ಉಪಾಹಾರ ನಡೆಯಿತು. ಹಿಂದಿನ ಕಾಲದ ವಸ್ತುಗಳ ಪ್ರದರ್ಶನವೂ ವಿಶೇಷ ಗಮನ ಸೆಳೆಯಿತು. ವಿದ್ಯಾರ್ಥಿಗಳ  ಸಾಂಸ್ಕೃತಿಕ ಪ್ರದರ್ಶನಗಳು   ಮನರಂಜಿಸಿತು. ಹೈಸ್ಕೂಲ್ ವಿಭಾಗದ ಮುಖ್ಯ ಶಿಕ್ಷಕಿ ಜಯಶ್ರೀ ಸಾಲ್ಯಾನ್  ಸ್ವಾಗತಿಸಿದರು . ಮಮತಾ ಆರ್. ವಂದಿಸಿದರು. ದಿವ್ಯಾ ಮತ್ತು ಅನುಷಾ ಕಾರ್ಯಕ್ರಮ ನಿರೂಪಿಸಿದರು.

Leave a Comment