Coastal Bulletin

ಸಿದ್ದಕಟ್ಟೆ : ಬಡರೋಗಿಗಳಿಗೆ ಬದುಕಿನ ಆಶಾಕಿರಣವಾದ ಈ ಜನ‌ಔಷಧಿ ಕೇಂದ್ರದಲ್ಲಿ ಕಡಿಮೆ ದರದಲ್ಲಿ‌ ಔಷಧಿಗಳು ದೊರೆಯುತ್ತದೆ. ದೇಶದಲ್ಲಿ ಈ ಯೋಜನೆಯನ್ನು ಹಮ್ಮಿಕೊಂಡಿದ್ದ ಮೋದಿಜೀ ಸರಕಾರಕ್ಕೆ ಇದೊಂದು ಹೆಮ್ಮೆ ಸಂಗತಿ. ಹಾಗೆ ಈ ಯೋಜನೆ ಮೂಲಕ ಉತ್ತಮ ಗುಣಮಟ್ಟವಾದ ಔಷಧಿಯನ್ನು ನೀಡುವ ಸಿದ್ದಕಟ್ಟೆಯ ಪ್ರಧಾನ ಮಂತ್ರಿ ಜನ‌ಔಷಧಿ ಕೇಂದ್ರದ ಮಾಲಕರಾದ ಮನೋಜ್ ಕುಲಾಲ್ ಹಾಗೂ ಸಿಬ್ಬಂದಿ ವರ್ಗವು ನಮ್ಮ ಸಿದ್ದಕಟ್ಟೆ ಪರಿಸರದ ನಾಗರಿಕರ ಪ್ರಶಂಸೆಗೆ ಪಾತ್ರವಾಗಿದೆ ಎಂದು ಪೂಂಜ ಮಹಿಷ ಮರ್ದಿನೀ ಕ್ಷೇತ್ರದ ವ್ಯವಸ್ಥಾಪನ ಸಮಿತಿ ಅಧ್ಯಕ್ಷರಾದ ರತ್ನಕುಮಾರ್ ಚೌಟ ಹೇಳಿದರು.

ಜನ‌ ಔಷಧಿ ದಿವಸ್ ಕಾರ್ಯಕ್ರಮದ  ಅಂಗವಾಗಿ  ಸಿದ್ದಕಟ್ಟೆಯ ಈ ಕೇಂದ್ರದಲ್ಲಿ ಹಮ್ಮಿಕೊಂಡಿದ್ದ ಈ  ಕಾರ್ಯಕ್ರಮವನ್ನು ಉದ್ಗಾಟಿಸಿ, ಮಾತನಾಡಿದರು. 

ಈ ಕಾರ್ಯಕ್ರಮದಲ್ಲಿ  ಜನ‌ಔಷಧಿ ಕೇಂದ್ರಕ್ಕೆ ಜನರ ಉಪಯೋಗಕ್ಕೆ ವೀಲ್ ಚಯರ್ ಅನ್ನು ಯಾದವ ಗಟ್ಟಿಯವರು ಕೊಡುಗೆ ನೀಡಿದರು. ಸರಕಾರಿ ಪದವಿ ಪೂರ್ವ ಕಾಲೇಜು ಸಿದ್ದಕಟ್ಟೆ ಮತ್ತು ಆಸು ಪಾಸಿನ ಸಂಘ  ಸಂಸ್ಥೆ ಗಳಿಗೆ, ಹಿರಿಯ ನಾಗರಿಕರಿಗೆ ಮೆಡಿಕಲ್ ಕಿಟ್ ನ್ನು ಈ ಜನ‌ಔಷಧಿ ಕೇಂದ್ರದಿಂದ ಕೊಡುಗೆಯಾಗಿ

ನೀಡಲಾಯಿತು.  

 ಸಂಗಬೆಟ್ಟು ಗ್ರಾಮ ಪಂಚಾಯತ್ ಅಧ್ಯಕ್ಷರು  ಸತೀಶ್ ಪೂಜಾರಿ ಅಳಕೆ, ಸಂಗಬೆಟ್ಟು ಗ್ರಾಮ ಪಂಚಾಯತ್ ಸದಸ್ಯರು ಸುರೇಶ್  ಕುಲಾಲ್, ಸಂಗಬೆಟ್ಟು ಗ್ರಾಮಪಂಚಾಯತ್ ಸದಸ್ಯರು  ಸಂದೇಶ್ ಶೆಟ್ಟಿ  ಪೊಡುಂಬ ,ಸಂಗಬೆಟ್ಟು ಗ್ರಾಮ ಪಂಚಾಯತ್ ಸದಸ್ಯರು ಉದಯ  ಪೂಜಾರಿ , ಉದ್ಯಮಿ ಗೋಪಿನಾಥ್ ರೈ, ಉಮರ್ ಮುಸ್ಲಿಯಾರ್, ಹೊನ್ನಾಯ್ಯ ಕುಲಾಲ್ ಮತ್ತಿತರು ಕಾರ್ಯಕ್ರಮ ದಲ್ಲಿ ಉಪಸ್ಥಿತರಿದ್ದರು. ರೇವತಿ ಕಾರ್ಯಕ್ರಮವನ್ನು ನಿರೂಪಿದರು. ಮನೋಜ್ ಕುಲಾಲ್ ಸ್ವಾಗತಿಸಿ, ಧನ್ಯವಾದ ಸಮರ್ಪಿಸಿದರು.

Leave a Comment