ಮೇಷ ನಯವಂಚಕರ ಜಾಲಕ್ಕೆ ಬಿದ್ದು ಒದ್ದಾಡುವ ಸಾಧ್ಯತೆ ಇದೆ. ಹಣಕಾಸಿನ ವಿಚಾರದಲ್ಲಿ ಹೆಚ್ಚು ಎಚ್ಚರವಹಿಸಿರಿ. ಕೃಷಿಕರಿಗೆ ಆದಾಯ ಹೆಚ್ಚುವ ಸಂದರ್ಭವಿದೆ. ಆಹಾರದ ವಿಷಯದಲ್ಲಿ ಸ್ವಲ್ಪ ಎಚ್ಚರಿಕೆ ಅಗತ್ಯ. ವಾಹನಗಳ ಮಾರಾಟ ಮಾಡುವವರಿಗೆ ಆದಾಯ ಹೆಚ್ಚುತ್ತದೆ. ನ್ಯಾಯಾಲಯದ ವಿಚಾರದಲ್ಲಿ ಹೆಚ್ಚು ಅಲೆದಾಟ ಆಗಬಹುದು.
ವೃಷಭ
ನಿಮ್ಮ ಯೋಜನೆಗಳು ತಾತ್ಕಾಲಿಕವಾಗಿ ಸ್ಥಗಿತವಾದಂತೆ ಭಾಸವಾದರೂ ಮುಂದುವರೆಯುತ್ತವೆ. ಮಕ್ಕಳ ಪ್ರತಿಭೆಯ ಬಗ್ಗೆ ಬಂಧುಗಳು ಸಂತಸದ ಮಾತುಗಳಾಡುವುದನ್ನು ಕೇಳಿ ಸಂತಸಪಡುವಿರಿ. ಆಸ್ತಿ ವ್ಯವಹಾರಗಳನ್ನು ಮಾಡುವವರಿಗೆ ಲಾಭ ಹೆಚ್ಚುತ್ತದೆ. ಹಣದ ಒಳಹರಿವು ನಿರೀಕ್ಷೆಯಷ್ಟು ಇದ್ದೇ ಇರುತ್ತದೆ. ಕೆಲವು ಸಮಸ್ಯೆಗಳನ್ನು ಯಥೋಚಿತವಾಗಿ ಬಗೆಹರಿಸಿಕೊಳ್ಳುವ ಅವಕಾಶಗಳು ಒದಗಿಬರುತ್ತವೆ
ಮಿಥುನ
ಮೊಂಡುವಾದಗಳಿಂದ ಯಾವುದೇ ಪ್ರಯೋಜನ ಇರುವುದಿಲ್ಲ, ಬದಲಾಗಿ ಕಿರುಕುಳ ಆಗಬಹುದು. ಹಣದ ಒಳಹರಿವು ನಿಮ್ಮ ಅಗತ್ಯವನ್ನು ಪೂರೈಸುವಷ್ಟು ಇರುತ್ತದೆ. ಒಡಹುಟ್ಟಿದವರಿಂದ ಸಾಕಷ್ಟು ಸಹಾಯ ದೊರೆಯುತ್ತದೆ. ಹೈನುಗಾರಿಕೆಯನ್ನು ಮಾಡುವವರಿಗೆ ಏಳಿಗೆ ಇರುತ್ತದೆ. ಹಾಲಿನ ಉತ್ಪನ್ನಗಳನ್ನು ಮಾಡುವವರ ವ್ಯವಹಾರ ವಿಸ್ತರಿಸುತ್ತದೆ. ಸಹೋದ್ಯೋಗಿಗಳೊಡನೆ ಸಂಬಂಧ ಹೆಚ್ಚಿಸಿಕೊಳ್ಳುವುದು ಬಹಳ ಉತ್ತಮ.
ಕಟಕ
ಬಹುದಿನಗಳ ನಂತರ ಕುಟುಂಬದ ಸದಸ್ಯರೊಡನೆ ಸಂತಸವಾಗಿ ಕಾಲ ಕಳೆಯುವಿರಿ. ನಿಮ್ಮ ನಡವಳಿಕೆ ವ್ಯಾವಹಾರಿಕವಾಗಿರುತ್ತದೆ. ಹೊಸ ಉದ್ಯೋಗ ಅವಕಾಶದಿಂದಾಗಿ ಜೀವನ ಶೈಲಿಯು ಬದಲಾವಣೆಯನ್ನು ಕಾಣುತ್ತದೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ಸಂಶೋಧನಾ ನಿರತರಿಗೆ ಉತ್ತಮ ಫಲಿತಾಂಶ ಸಿಗುವ ಸಾಧ್ಯತೆಗಳಿವೆ. ಕೃಷಿ ಬಾಂಧವರಿಗೆ ಉತ್ತಮ ಸೌಲಭ್ಯ ದೊರೆಯುತ್ತದೆ.
ಸಿಂಹ
ವ್ಯಾಪಾರ ವ್ಯವಹಾರಗಳಲ್ಲಿ ತೊಡಗಿಕೊಂಡಿರುವವರಿಗೆ ಸಾಮಾನ್ಯವಾದ ದಿನವಾಗಿರುತ್ತದೆ. ಎಲ್ಲ ವ್ಯವಹಾರಗಳ ಬಗ್ಗೆ ಜಾಗರೂಕತೆ ಅತಿ ಮುಖ್ಯ. ನಿಮ್ಮ ಗೆಳೆಯರು ಸಹಾಯಕ್ಕಾಗಿ ನಿಮ್ಮ ಬಳಿ ಬರುವರು. ಜಮೀನು ವಿಷಯಕ್ಕೆ ಸಂಬಂಧಿಸಿದಂತೆ ನೆರೆಹೊರೆಯವರ ಬಳಿ ಕಿರಿಕಿರಿಯಾಗಬಹುದು. ಕ್ರೀಡಾಪಟುಗಳಿಗೆ ಹೆಚ್ಚು ಸಾಧನೆ ಮಾಡುವ ಅವಕಾಶ ದೊರೆಯುತ್ತದೆ.
ಕನ್ಯಾ
ಕುಟುಂಬದ ಸಮಸ್ಯೆಗಳತ್ತ ಹೆಚ್ಚು ಗಮನ ಹರಿಸುವಿರಿ. ಸಂಗೀತಗಾರರಿಗೆ ಒಳ್ಳೆಯ ಅವಕಾಶ ದೊರೆಯುವ ಸಾಧ್ಯತೆಗಳಿವೆ. ಮಹಿಳೆಯರಿಗೆ ಹೊಸ ಸಂಪಾದನೆಯ ಮಾರ್ಗ ಒದಗಿ ಸಂತಸವಾಗುತ್ತದೆ. ಯಾವುದೇ ದುಡುಕಿನ ನಿರ್ಧಾರಗಳು ಖಂಡಿತ ಬೇಡ. ಸರಕು ಸಾರಿಗೆ ಮಾಡುವವರಿಗೆ ಹೆಚ್ಚು ಸಂಪಾದನೆಯಾಗುವ ಸಂದರ್ಭವಿದೆ. ಧೈರ್ಯ ಸಾಮರ್ಥ್ಯಗಳನ್ನು ಮೈಗೂಡಿಸಿಕೊಂಡಲ್ಲಿ ನೀವು ಹಿಡಿದ ಕೆಲಸವನ್ನು ಸಾಧಿಸಬಹುದು.
ತುಲಾ
ಸಂಶೋಧನೆಗಳನ್ನು ಮಾಡುತ್ತಿರುವವರಿಗೆ ಹೆಚ್ಚಿನ ಸಹಕಾರ ಮತ್ತು ಸೌಲಭ್ಯಗಳು ದೊರೆಯುತ್ತವೆ. ಪ್ರವಾಸ ಮಾಡುವಾಗ ಹೆಚ್ಚಿನ ಎಚ್ಚರಿಕೆ ಇರಲಿ. ನೀರು ಮತ್ತು ಆಹಾರದಿಂದ ಅನಾರೋಗ್ಯವಾಗಬಹುದು. ನಿರ್ಮಾಣ ಕೆಲಸ ಮಾಡುವವರಿಗೆ ಆರ್ಥಿಕ ಸಂಪನ್ಮೂಲಗಳನ್ನು
ಹೊಂದಿಸುವಲ್ಲಿ ಹಿನ್ನಡೆ ಆಗಬಹುದು. ನಿರುದ್ಯೋಗಿಗಳಿಗೆ ತಾತ್ಕಾಲಿಕ ಅವಕಾಶಗಳು ದೊರೆಯುವ ಸಾಧ್ಯತೆ ಇದೆ.
ವೃಶ್ಚಿಕ
ನಿಮ್ಮ ಇಂದಿನ ಉತ್ತಮ ಯೋಚನೆಗಳು ಮುಂದೆ ಉತ್ತಮ ಫಲ ಕೊಡುತ್ತವೆ. ನಿರೀಕ್ಷೆಯಷ್ಟು ಆದಾಯವನ್ನು ಕಾಣಬಹುದು. ಶಿಲ್ಪಕಲೆ ಮತ್ತು ಮೂರ್ತಿ ತಯಾರಕರಿಗೆ ವ್ಯವಹಾರ ಹೆಚ್ಚುತ್ತದೆ. ಪತ್ರಿಕೋದ್ಯಮದಲ್ಲಿ ಇರುವವರಿಗೆ ಪ್ರಮುಖ ವ್ಯಕ್ತಿಗಳನ್ನು ಸಂದರ್ಶಿಸುವ ಅವಕಾಶ ದೊರೆಯುತ್ತದೆ. ರಾಜಕೀಯದಲ್ಲಿ ಇರುವವರಿಗೆ ಸ್ವಲ್ಪ ದುಗುಡ, ದುಮ್ಮಾನಗಳು ಎದುರಾಗಬಹುದು ಹಾಗೂ ಅವರ ಆಪ್ತ ಹಿಂಬಾಲಕರಿಂದ ಮೋಸಹೋಗುವ ಸಾಧ್ಯತೆಗಳಿವೆ.
ಧನು
ಬಹಳ ಚುರುಕಾಗಿ ಕೆಲಸ ಮಾಡುವಿರಿ. ನೀವು ಯೋಚಿಸುವ ಕೆಲವು ಕೆಲಸಗಳು ವಿಳಂಬವಾದರೂ ಕೆಲಸದಲ್ಲಿ ಪೂರ್ಣ ಯಶಸ್ಸು ದೊರೆಯುತ್ತದೆ. ಅರಣ್ಯ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಪ್ರಕೃತಿ ಪ್ರಿಯರಿಗೆ ಗೌರವ ದೊರೆಯುವ ಸಾಧ್ಯತೆ ಇದೆ. ಹೊಸ ವ್ಯಕ್ತಿಗಳ ಪರಿಚಯದಿಂದಾಗಿ ಹೊಸ ವ್ಯವಹಾರವನ್ನು ಆರಂಭಿಸುವಿರಿ. ಭೂ ಸಂಬಂಧಿ ವ್ಯವಹಾರ ಮಾಡುವವರಿಗೆ ಆದಾಯ ಹೆಚ್ಚುವ ಸಾಧ್ಯತೆ ಇದೆ.
ಮಕರ
ನಿರುದ್ಯೋಗಿಗಳಿಗೆ ಹಿರಿಯ ಸ್ಥಾನದಲ್ಲಿರುವ ಜನರ ಪರಿಚಯವಾಗಿ ಅವರಿಂದ ಉದ್ಯೋಗ ದೊರೆಯುವ ಸಾಧ್ಯತೆ ಇದೆ. ಹಾಲಿನ ಉತ್ಪನ್ನಗಳನ್ನು ಮಾರಾಟ ಮಾಡುವವರಿಗೆ ಹೆಚ್ಚು ಲಾಭ ಬರುತ್ತದೆ. ರಾಜಕಾರಣಿಗಳಿಗೆ ಕ್ಷೇತ್ರದ ಮೇಲೆ ಹಿಡಿತ ಹೊಂದುವ ಸಾಧ್ಯತೆ ಒದಗಿ ಬರುತ್ತದೆ. ಷೇರು ವ್ಯಾಪಾರಸ್ಥರ ವ್ಯವಹಾರ ಸ್ಥಿರವಾಗಿರುತ್ತದೆ. ವ್ಯಾಪಾರಸ್ಥರು ಜಾಹೀರಾತಿನ ಮೂಲಕ ವ್ಯಾಪಾರವನ್ನು ಹೆಚ್ಚಿಸಿಕೊಳ್ಳಬಹುದು.
ಕುಂಭ
ಕೆಲವು ಮುಖ್ಯ ನಿರ್ಧಾರಗಳನ್ನು ಆಲೋಚಿಸಿ ತೆಗೆದುಕೊಳ್ಳುವುದು ಉತ್ತಮ. ಕೆಲವರಿಗೆ ಉದ್ಯೋಗದಲ್ಲಿ ಸ್ಥಾನಪಲ್ಲಟ ಆಗುವ ಸಾಧ್ಯತೆಗಳಿವೆ. ತಂದೆಯಿಂದ ಮನೆ ನಿರ್ಮಾಣದ ಖರ್ಚಿನ ಬಗ್ಗೆ ಪ್ರಸ್ತಾಪವಾಗಬಹುದು. ಈ ಬಗ್ಗೆ ಮನೆಯಲ್ಲಿ ಕಾವೇರಿದ ಮಾತುಗಳು ಆಗಬಹುದು. ಹಣದ ಒಳಹರಿವು ಸಮಾಧಾನಕರವಾಗಿರುತ್ತವೆ. ಯುವಕರು ಎಲ್ಲಾ ಕೆಲಸಗಳಲ್ಲೂ ಧನಲಾಭವನ್ನು ಆಲೋಚಿಸಬಾರದು.
ಮೀನ
ಬಹಳ ದಿನಗಳಿಂದ ಕಾಡುತ್ತಿದ್ದ ಸಮಸ್ಯೆಯೊಂದು ದೂರವಾಗುತ್ತದೆ. ಸ್ವಯಂ ಉದ್ಯೋಗಿಗಳಿಗೆ ಅಧಿಕ ಪರಿಶ್ರಮದಿಂದ ಹೆಚ್ಚಿನ ಲಾಭವಾಗುವ ಸಾಧ್ಯತೆಗಳಿವೆ. ಸಮಾಜದ ಕೆಲವು ಧುರೀಣರಿಗೆ ಅಪಮಾನಕರ ಘಟನೆಗಳು ಎದುರಾಗಬಹುದು. ನೆರೆಹೊರೆಯವರೊಡನೆ ಸಂಬಂಧ ಸರಿಯಾಗಿ ಇಟ್ಟುಕೊಳ್ಳುವುದು ಬಹಳ ಉತ್ತಮ. ಕೆಲವರಿಗೆ ಉದ್ಯೋಗದ ನಿಮಿತ್ತ ದೂರ ಪ್ರಯಾಣ ಮಾಡುವ ಸಾಧ್ಯತೆ ಇದೆ.
















