ಮೇಷ ವೃತ್ತಿರಂಗದ ಬಗ್ಗೆ ಸಂತೋಷವಿರುತ್ತದೆ. ಗುತ್ತಿಗೆ ವ್ಯವಹಾರಸ್ತರಿಗೆ ಹಣದ ಹರಿವು ಚೆನ್ನಾಗಿರುತ್ತದೆ. ನೆರೆಹೊರೆಯವರೊಡನೆ ನಿಷ್ಠುರವಾಗಿ ಅವರಿಂದ ದೂರವಾಗುವ ಸಾಧ್ಯತೆಗಳಿವೆ. ನಿಮ್ಮ ಸ್ವಂತ ವಿವೇಚನೆಯಿಂದ ಕೆಲವೊಂದು ಅಂತ ಕಲಹಗಳನ್ನು ನಿವಾರಣೆ ಮಾಡಿಕೊಳ್ಳುವಿರಿ.
ವೃಷಭ
ಕೆಲಸ ಕಾರ್ಯಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆಯನ್ನು ಕಾಣಬಹುದು. ಅನಿಶ್ಚಿತತೆಯಿಂದ ವ್ಯವಹಾರಗಳಲ್ಲಿ ಲಾಭ ಕಡಿಮೆ. ವಿದ್ಯಾರ್ಥಿಗಳಿಗೆ ಓದಿನಲ್ಲಿ ಸ್ವಲ್ಪ ಮಟ್ಟಿನ ಮುನ್ನಡೆ ಇರುತ್ತದೆ. ದೈಹಿಕ ಕೆಲಸಗಳನ್ನು ಮಾಡುವ ಕೆಲವರಿಗೆ ಕೆಲಸದೊತ್ತಡ ಕಡಿಮೆಯಾಗುವುದು. ರಾಜಕೀಯ ವ್ಯಕ್ತಿಗಳಿಗೆ ಸ್ವಲ್ಪ ಮಟ್ಟಿನ ಕಿರಿಕಿರಿ ಉಂಟಾಗಬಹುದು.
ಮಿಥುನ
ಆರ್ಥಿಕ ಸ್ಥಿತಿಯಲ್ಲಿ ಸ್ವಲ್ಪಮಟ್ಟಿನ ಏರುಪೇರುಗಳು ಕಂಡುಬಂದರೂ ಅಂತಹ ತೊಂದರೆಯಿರುವುದಿಲ್ಲ. ನಿಶ್ಚಿತ ಆದಾಯಕ್ಕೆ ಕೊರತೆಯಿರುವುದಿಲ್ಲ. ಮಹಿಳೆಯರ ಮನೋಭಿಲಾಷೆಗಳು ಈಡೇರುವ ಸಂದರ್ಭವಿದೆ. ಬೇರೆಯವರ ವಾದ ವಿವಾದಗಳಲ್ಲಿ ಮಧ್ಯಸ್ಥಿಕೆ ವಹಿಸಬೇಕಾದ ಸಂದರ್ಭವಿದೆ, ಎಚ್ಚರವಹಿಸಿ ಮಾತನಾಡಿರಿ.
ಕಟಕ
ಸ್ವಲ್ಪಮಟ್ಟಿನ ಹಣಕಾಸಿನ ತೊಂದರೆಗಳು ಪರಿಹಾರವಾಗುತ್ತವೆ. ನಿರೀಕ್ಷಿತ ಮೂಲಗಳಿಂದ ಹಣದ ಒಳಹರಿವು ಇರುತ್ತದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಸ್ವಲ್ಪ ಮಟ್ಟಿನ ಹಿನ್ನಡೆಯನ್ನು ಕಾಣಬಹುದು. ಕೆಲಸಕಾರ್ಯಗಳಲ್ಲಿ ಪ್ರಗತಿಯನ್ನು ಕಾಣಬಹುದು. ವ್ಯವಹಾರಗಳಲ್ಲಿ ನಿಮ್ಮ ಶ್ರಮ ಫಲ ನೀಡುವುದು.
ಸಿಂಹ
ನಿಮ್ಮ ಅಭಿವೃದ್ಧಿಗೆ ಪೂರಕವಾದ ಅವಕಾಶಗಳು ಒದಗಿಬರುತ್ತವೆ. ಅವುಗಳನ್ನು ಸರಿಯಾಗಿ ಬಳಸಿಕೊಳ್ಳಿರಿ. ಆರ್ಥಿಕ ತೊಂದರೆಗಳಿಂದ ಸ್ವಲ್ಪಮುಕ್ತಿಯನ್ನು ಕಾಣಬಹುದು. ಕೋರ್ಟ್ ಕಚೇರಿಯ ವ್ಯಾಜ್ಯಗಳು ಪರಿಹಾರದತ್ತ ಸಾಗಿ ನಿಮಗೆ ಅನುಕೂಲವಾಗುತ್ತದೆ. ವಸ್ತ್ರಾಭರಣಗಳ ಖರೀದಿಯನ್ನು ಮಾಡಲು ಮುಂದಾಗುವಿರಿ.
ಕನ್ಯಾ
ಹೊಸ ಸಂಬಂಧಿಗಳಿಂದ ಹೊಸ ಯೋಜನೆಗಳಿಗೆ ಅನುಕೂಲ ದೊರೆಯುವಂತಾದರೂ ಕೊನೆಗೆ ದೊರೆಯುವುದು ಕಷ್ಟ. ಕುಟುಂಬದಲ್ಲಿ ಎಲ್ಲರ ಬೆಂಬಲಗಳಿಸಿ ಲಾಭ ಪಡೆಯಲು ಯತ್ನಿಸುವಿರಿ. ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸದಲ್ಲಿ ಸ್ವಲ್ಪ ಮಟ್ಟಿನ ಹಿನ್ನಡೆಯನ್ನು ಕಾಣಬಹುದು. ಹಣದ ಒಳಹರಿವು ಅಷ್ಟೇನೂ ಹಿತಕರವಾಗಿ ಇರುವುದಿಲ್ಲ. ಮಹಿಳಾ ಸಂಘಗಳಿಂದ ಸಾಲಗಳು ಸಿಗುವ ಸಾಧ್ಯತೆ ಇದೆ.
ತುಲಾ
ಅವಿವಾಹಿತರಿಗೆ ವಿವಾಹ ಒದಗುವ ಸಂದರ್ಭವಿದೆ. ಸಾಮಾಜಿಕ ಕ್ಷೇತ್ರದಲ್ಲಿ ಜನಮನ್ನಣೆ ದೊರೆತರೂ ನಿಮ್ಮ ಬಗ್ಗೆ ಸಣ್ಣ ಮಾತುಗಳು ಕೇಳಿಬರುತ್ತವೆ. ಮನರಂಜನಾ ಕಾರ್ಯಕ್ರಮಗಳನ್ನು ನಡೆಸಿ ಕೊಡುವವರಿಗೆ
ಬೇಡಿಕೆ ಬರಲಾರಂಭಿಸುತ್ತದೆ. ಮಕ್ಕಳ ವಿಷಯದಲ್ಲಿ ಸ್ವಲ್ಪಮಟ್ಟಿನ ವ್ಯಥೆ ಉಂಟಾಗುತ್ತದೆ. ಸ್ನೇಹಿತರೊಂದಿಗೆ ಆರ್ಥಿಕ ವಿಷಯಗಳಲ್ಲಿ ವಿರಸ ಬರಬಹುದು.
ವೃಶ್ಚಿಕ
ರಾಜಕೀಯ ಕ್ಷೇತ್ರದಲ್ಲಿ ಇರುವವರಿಗೆ ಉತ್ತಮ ಕಾಲ. ತಮ್ಮನ್ನು ಜನಾನುರಾಗಿಗಳೆಂದು ಬಿಂಬಿಸಿಕೊಳ್ಳಲು ಅವಕಾಶವೊಂದು ದೊರೆಯುವ ಸಾಧ್ಯತೆಗಳಿವೆ. ವಿದ್ಯಾರ್ಥಿಗಳಿಗೆ ಹೆಚ್ಚಿನ ಅನುಕೂಲಗಳು ದೊರೆತು ಅಧ್ಯಯನಕ್ಕೆ ಅನುಕೂಲವಾಗುತ್ತದೆ. ಹಣಕಾಸಿನ ವಿಷಯದಲ್ಲಿ ಸ್ವಲ್ಪಮಟ್ಟಿನ ಸುಧಾರಣೆ ಇರುತ್ತದೆ. ಸರ್ಕಾರಿ ಅಧಿಕಾರಿಗಳಿಗೆ ವೃತ್ತಿಯಲ್ಲಿ ಇದ್ದ ಕಿರಿಕಿರಿಗಳು ಕಡಿಮೆಯಾಗುತ್ತವೆ.
ಧನು
ಕೈಗೆತ್ತಿಕೊಂಡ ಕೆಲಸಗಳು ನಿಮ್ಮ ಸತತ ಪ್ರಯತ್ನದಿಂದಾಗಿ ಯಶಸ್ವಿಯಾಗಲಿವೆ. ಶುಭ ಸಮಾರಂಭಗಳಲ್ಲಿ ಭಾಗಿಯಾಗಲು ದೂರ ಪ್ರಯಾಣ ಮಾಡಬೇಕಾಗಬಹುದು. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಹೊಣೆಗಾರಿಕೆಯನ್ನು ಸಮರ್ಥವಾಗಿ ನಿರ್ವಹಣೆ ಮಾಡಿ ಎಲ್ಲರ ಗಮನ ಸೆಳೆಯುವಿರಿ. ಗೃಹ ನಿರ್ಮಾಣ ಅಥವಾ ನವೀಕರಣವನ್ನು ಕೈಗೆತ್ತಿಕೊಳ್ಳುವ ಸಂದರ್ಭವಿದೆ.
ಮಕರ
ಸಮಾಧಾನದಿಂದ ವ್ಯವಹಾರ ಮಾಡುವುದರಿಂದ ಎಲ್ಲ ಕೆಲಸಗಳು ಕೈಗೂಡುತ್ತವೆ. ಗೃಹ ನಿರ್ಮಾಣ ಕಾರ್ಯದಲ್ಲಿ ಸ್ವಲ್ಪ ಹಿನ್ನಡೆಯಾದರೂ ನಂತರ ಪೂರ್ಣಗೊಳ್ಳುತ್ತದೆ. ಅನವಶ್ಯಕ ವ್ಯವಹಾರಗಳಲ್ಲಿ ಹಣ ತೊಡಗಿಸುವುದು ಬೇಡ. ಹೊಸ ಯೋಜನೆಯೊಂದನ್ನು ನಿರೂಪಿಸುವಲ್ಲಿ ಬಹಳ ಯಶಸ್ಸನ್ನು ಕಾಣುವಿರಿ. ಸ್ನೇಹಿತರೊಂದಿಗೆ ವ್ಯವಹಾರಕ್ಕೆ ಸಂಬಂಧವಿರುವ ಹಲವಾರು ವಿಷಯಗಳನ್ನು ವಿನಿಮಯ ಮಾಡಿಕೊಳ್ಳುವಿರಿ.
ಕುಂಭ
ಸಾಹಸ ಕಲಾವಿದರುಗಳಿಗೆ ಹೆಚ್ಚಿನ ಅವಕಾಶಗಳು ದೊರೆತು ಹೆಚ್ಚು ಸಂಪಾದನೆಯಾಗುತ್ತದೆ. ಕ್ರೀಡಾಪಟುಗಳಿಗೆ ನಿರೀಕ್ಷಿತ ಸಹಾಯ ದೊರೆತು ಸಾಧನೆ ಮಾಡುವ ಅವಕಾಶ ದೊರೆಯುತ್ತದೆ. ಆರ್ಥಿಕ ಅಭಿವೃದ್ಧಿಯತ್ತ ಹೆಚ್ಚಿನ ಗಮನ ಕೊಡುವಿರಿ. ವೈದ್ಯಕೀಯ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿರುವವರಿಗೆ ಉತ್ತಮ ಹೆಸರು ಬರುತ್ತದೆ.
ಮೀನ
ಸರ್ಕಾರಿ ಉದ್ಯೋಗಿಗಳಿಗೆ ವರ್ಗಾವಣೆಯಾಗುವ ಸಾಧ್ಯತೆ ಇದೆ. ನಿಮ್ಮ ಜೀವನ ಶೈಲಿಯನ್ನು ಬದಲಾವಣೆ ಮಾಡಿಕೊಳ್ಳಲು ಪ್ರಯತ್ನ ಪಡುವಿರಿ. ಸಾಮಾಜಿಕ ಕಾರ್ಯಕರ್ತರುಗಳಿಗೆ ಹೆಚ್ಚಿನ ರೀತಿಯ ಪ್ರೋತ್ಸಾಹ ಮತ್ತು ಜನ ಸಹಾಯ ದೊರೆಯುತ್ತದೆ.














