ಮೇಷ : ಮಕ್ಕಳಿಗೆ ವಿದ್ಯಾಭ್ಯಾಸದ ಬಗ್ಗೆ ತಿಳಿ ಹೇಳುವುದರ ಜೊತೆಗೆ ಪ್ರೋತ್ಸಾಹವೂ ಸಿಗುತ್ತದೆ. ವಾಹನ ಚಾಲನೆ ಮಾಡುವವರು ಚಾಲನೆ ಮಾಡುವಾಗ ಜಾಗರೂಕರಾಗಿರುವುದು ಉತ್ತಮ. ಕೃಷಿ ಕಾರ್ಯಗಳ ವೆಚ್ಚಕ್ಕಾಗಿ ಹಣಕಾಸು ಸಂಸ್ಥೆಗಳ ಮೊರೆ ಹೋಗುವಿರಿ. ಬಹಳ ದಿನಗಳಿಂದ ನನೆಗುದಿಗೆ ಬಿದ್ದಿದ್ದ ವಿಷಯವೊಂದನ್ನು ಬಹಳ ದೃಢ ನಿರ್ಧಾರ ಮಾಡಿ ಕೈಗೆತ್ತಿಕೊಳ್ಳುವಿರಿ. ಉದ್ಯೋಗಸ್ಥ ಮಹಿಳೆಯರಿಗೆ ವರಮಾನ ಹೆಚ್ಚಿಗೆ ಮಾಡಿಕೊಳ್ಳಲು ಹೆಚ್ಚು ಅವಕಾಶ ಇರುವುದಿಲ್ಲ.
ವೃಷಭ : ಹಿತಶತ್ರುಗಳಿಂದ ಉದ್ಯೋಗ ಕ್ಷೇತ್ರದಲ್ಲಿ ತೊಂದರೆ ಬರುವ ಸಾಧ್ಯತೆ ಇದೆ. ವ್ಯವಹಾರಕ್ಕೆ ತಾಯಿಯಿಂದ ಮಾರ್ಗದರ್ಶನದ ಜೊತೆಗೆ ಸ್ವಲ್ಪ ಧನಸಹಾಯವೂ ದೊರೆಯುವುದು. ಸಂಬಂಧಿಕರೊಡನೆ ಸುಧೀರ್ಘ ಸಮಾಲೋಚನೆಯಿಂದ ಬಾಂಧವ್ಯದಲ್ಲಿ ವೃದ್ಧಿ ಕಾಣಬಹುದು. ಸಹಕಾರ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಉತ್ತಮ ಹೆಸರು ಬರುತ್ತದೆ. ಮನೆಯ ಹಿರಿಯರ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿಯನ್ನು ವಹಿಸಬೇಕಾದೀತು. ಮಕ್ಕಳ ಉನ್ನತ ವ್ಯಾಸಂಗಕ್ಕಾಗಿ ಹೆಚ್ಚಿನ ಹಣ ತೊಡಗಿಸುವಿರಿ.
ಮಿಥುನ : ಮಹಿಳೆಯರು ಸಾಮಾಜಿಕ ಕ್ಷೇತ್ರಗಳಲ್ಲಿ ದುಡಿಯುವ ಸಾಮರ್ಥ್ಯವನ್ನು ಹೊಂದುತ್ತಾರೆ. ಹಣದ ಹರಿವು ನಿಮ್ಮ ಅಗತ್ಯದಷ್ಟು ಇರುತ್ತದೆ. ಹಣಕಾಸಿನ ವ್ಯವಹಾರಗಳಲ್ಲಿ ಸ್ವಲ್ಪ ಎಚ್ಚರಿಕೆ ಇರಲಿ. ನೆರೆಹೊರೆಯವರೊಂದಿಗೆ ಇದ್ದ ಮುನಿಸುಗಳು ದೂರವಾಗುತ್ತವೆ. ವೈಯಕ್ತಿಕ ವಿಚಾರಗಳತ್ತ ಹೆಚ್ಚಿನ ಗಮನವನ್ನು ಕೊಡಿರಿ. ಕೋರ್ಟ್ ಕಚೇರಿ ವ್ಯವಹಾರಗಳಲ್ಲಿ ದೃಢ ಮನಸ್ಸಿನಿಂದ ಹೋರಾಡಿದರೆ ನಿಮಗೆ ಯಶಸ್ಸು ಇರುತ್ತದೆ. ಸಹೋದರಿಯರಿಗೆ ಉಡುಗೊರೆಯನ್ನು ಕೊಟ್ಟು ಸಂತಸಪಡೆಯುವಿರಿ.
ಕಟಕ : ಉನ್ನತ ಹುದ್ದೆಯಲ್ಲಿರುವವರಿಗೆ ಜನರಿಂದ ಅಭಿಮಾನದ ಮಾತುಗಳು ಕೇಳಿಬರುತ್ತವೆ. ಮಹಿಳೆಯರ ಕೆಲವು ಇಷ್ಟಾರ್ಥಗಳು ಪೂರ್ಣಗೊಂಡು ಸಂತಸವಾಗುವುದು. ವಿದೇಶಿ ವ್ಯವಹಾರಗಳನ್ನು ಮಾಡುವವರಿಗೆ ಹೆಚ್ಚಿನ ಅಭಿವೃದ್ಧಿ ಇರುತ್ತದೆ. ಕಚೇರಿ ಕೆಲಸದ ನಿಮಿತ್ತವಾಗಿ ದೂರ ಪ್ರದೇಶದಲ್ಲಿ ಇದ್ದವರಿಗೆ ಹತ್ತಿರಕ್ಕೆ ವರ್ಗಾವಣೆ ಸಿಗುವ ಸಾಧ್ಯತೆ ಇದೆ. ಸಂಬಂಧಿಕರ ಮಧ್ಯಸ್ಥಿಕೆಯಿಂದ ಕುಟುಂಬದ ಕೆಲವು ಸಮಸ್ಯೆಗಳು ದೂರವಾಗುವವು. ಜನಸಾಮಾನ್ಯರಿಗೆ ಉಪಕಾರ ಮಾಡಿ ಸಂತಸಪಡುವಿರಿ.
ಸಿಂಹ : ತುರ್ತು ವಿಷಯಕ್ಕಾಗಿ ಸಂಬಂಧಿಕರ ನೆರವನ್ನು ಪಡೆಯಬೇಕಾಗುತ್ತದೆ. ಅನಗತ್ಯ ಸುತ್ತಾಟದಿಂದ ದೇಹಾಲಸ್ಯ ಆಗಬಹುದು. ಕೆಲವು ಅರೆಕಾಲಿಕ ನೌಕರರಿಗೆ ಕಾಯಂ ನೌಕರಿ ಒದಗುವ ಸಾಧ್ಯತೆ ಇದೆ. ಆತ್ಮಗೌರವ ಸ್ವಲ್ಪ ಹೆಚ್ಚಾಗಿ ವ್ಯಾಪಾರ ವ್ಯವಹಾರಗಳಿಗೆ ಧಕ್ಕೆ ತರಬಹುದು. ಹಣದ ಒಳಹರಿವು ಸಮಾಧಾನಕರವಾಗಿರುತ್ತದೆ. ತಾಂತ್ರಿಕ ಶಿಕ್ಷಣವನ್ನು ಮಾಡುತ್ತಿರುವವರಿಗೆ ಹೆಚ್ಚಿನ ಯಶಸ್ಸು ಇರುತ್ತದೆ. ತಾಯಿಯೊಂದಿಗೆ ನಿಮ್ಮ ಸಂಬಂಧ ಹಳಸುವ ಲಕ್ಷಣವಿದೆ.
ಕನ್ಯಾ : ನೆರೆಹೊರೆಯವರೊಂದಿಗೆ ವಿನಾ ಕಾರಣ ವೈಮನಸ್ಯ ಮೂಡಬಹುದು. ಸಂಯಮದ ಮಾತುಗಳಿಂದಲೇ ಈ ತೊಂದರೆಯನ್ನು ನಿವಾರಿಸಿಕೊಳ್ಳಬಹುದು. ಅಧ್ಯಯನದಲ್ಲಿ ಆಸಕ್ತಿಯು ಸ್ವಲ್ಪ ಕಡಿಮೆಯಾಗುವ ಸಂದರ್ಭವಿದೆ. ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಪ್ರತಿಭೆಗೆ ಗೌರವ ದೊರೆಯುತ್ತದೆ. ರೈತಾಪಿ ವರ್ಗದವರು ಸಾಮಾನ್ಯ ಬೆಳೆಯನ್ನು ಮತ್ತು ಉತ್ತಮ ಬೆಲೆಯ ನಿರೀಕ್ಷೆ ಮಾಡಬಹುದು. ಹಣದ ಒಳಹರಿವು ಕಡಿಮೆ ಮಟ್ಟದಲ್ಲಿರುವುದರಿಂದ ಖರ್ಚನ್ನು ಕಡಿಮೆ ಮಾಡಿಕೊಳ್ಳುವುದು ನಿಮಗೆ ಅನಿವಾರ್ಯ.
ತುಲಾ : ಆಸ್ತಿ
ವಿಷಯಕ್ಕೆ ಸಂಬಂಧಿಸಿದಂತೆ ಮನಃಸ್ತಾಪ ಎದುರಾಗುವ ಸಂದರ್ಭವಿದೆ. ಮಹಿಳೆಯರಿಗೆ ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಅವಕಾಶಗಳಿವೆ. ಜಮೀನಿನಲ್ಲಿ ಹೆಚ್ಚಿನ ಕೃಷಿ ಕೆಲಸಗಳನ್ನು ಆರಂಭಿಸುವಿರಿ. ಅಪೇಕ್ಷಿಸಿದ್ದ ಸಾಲ ಇದೀಗ ಹಣಕಾಸು ಸಂಸ್ಥೆಗಳಿಂದ ದೊರೆಯುತ್ತದೆ. ವಿದೇಶಿ ಕಂಪನಿಯೊಂದು ನಿಮಗೆ ಪಾಲುದಾರಿಕೆಗೆ ಆಹ್ವಾನ ನೀಡಬಹುದು. ಹಣದ ಒಳಹರಿವು ಸಮಾಧಾನಕರವಾಗಿ ಇರುತ್ತದೆ. ರಾಜಕೀಯ ವ್ಯಕ್ತಿಗಳಿಗೆ ನಿರೀಕ್ಷಿಸಿದ್ದ ಸ್ಥಾನಮಾನ ವ್ಯತ್ಯಾಸವಾಗಬಹುದು.
ವೃಶ್ಚಿಕ : ಸ್ಥಿರಾಸ್ತಿಯ ಬೆಲೆಯಲ್ಲಿ ಏರಿಕೆಯನ್ನು ಕಾಣಬಹುದು. ಹೂ ವ್ಯಾಪಾರಿಗಳಿಗೆ ವ್ಯಾಪಾರ ವೃದ್ಧಿಸಿ ಆದಾಯ ಹೆಚ್ಚುತ್ತದೆ. ನೌಕರಿಯಲ್ಲಿರುವವರು ಅಧಿಕಾರಿಗಳ ಸೂಚನೆಯಂತೆ ಹೆಚ್ಚಿನ ಜವಾಬ್ದಾರಿಯನ್ನು ವಹಿಸಿಕೊಳ್ಳಬೇಕಾಗುತ್ತದೆ. ಹಿತ ಮಿತವಾದ ಮಾತುಗಳಿಂದ ನೆರೆಹೊರೆಯವರನ್ನು ಗೆಲ್ಲುವಿರಿ. ಸಗಟು ವ್ಯಾಪಾರಗಾರರ ವ್ಯವಹಾರಗಳಲ್ಲಿ ಏರಿಕೆ ಕಂಡುಬರುತ್ತದೆ. ಮಕ್ಕಳಿಗಾಗಿ ಹೆಚ್ಚಿನ ಹಣ ಖರ್ಚು ಮಾಡಬೇಕಾಗುತ್ತದೆ.
ಧನು : ಉದ್ಯೋಗದಲ್ಲಿ ಅಭಿವೃದ್ಧಿಗೊಂಡು ಆರ್ಥಿಕವಾಗಿ ಚೇತರಿಸಿಕೊಳ್ಳುವಿರಿ. ಉದ್ದಿಮೆದಾರರು ತಾಂತ್ರಿಕ ಯಂತ್ರೋಪಕರಣಗಳನ್ನು ಖರೀದಿ ಮಾಡುವ ಯೋಗವಿದೆ. ಹಿರಿಯ ಅಧಿಕಾರಿಗಳಿಗೆ ಹೆಚ್ಚಿನ ರೀತಿಯ ಅಧಿಕಾರ ದೊರೆಯುವ ಹಾಗೂ ಇರುವಲ್ಲೇ ಮೇಲ್ದರ್ಜೆಗೇರುವ ಸಂದರ್ಭವಿದೆ. ಯೋಗ್ಯ ವಯಸ್ಕರಿಗೆ ವಿವಾಹ ಸಂಬಂಧ ಒದಗುವ ಸಾಧ್ಯತೆ ಇದೆ. ಪರಿಚಯದ ಗಣ್ಯರೊಂದಿಗೆ ಅನಿರೀಕ್ಷಿತವಾಗಿ ವೇದಿಕೆಯನ್ನು ಹಂಚಿಕೊಳ್ಳುವಂತಹ ಸಾಧ್ಯತೆ ಇದೆ.
ಮಕರ : ಕೆಲಸಗಾರರ ಕೊರತೆಯಿಂದಾಗಿ ಉದ್ದಿಮೆಗಳಲ್ಲಿ ತಯಾರಿಕೆಗೆ ಬಹಳ ಅಡಚಣೆ ಉಂಟಾಗುತ್ತದೆ. ಕೃಷಿ ಕ್ಷೇತ್ರದಲ್ಲಿನ ಯಂತ್ರೋಪಕರಣಗಳನ್ನು ತಯಾರಿಸುವವರಿಗೆ ಅಭಿವೃದ್ಧಿ ಇರುತ್ತದೆ. ಚಿನ್ನಾಭರಣಗಳ ವ್ಯಾಪಾರವನ್ನು ಆರಂಭಿಸಬೇಕೆಂದು ಇಚ್ಛಿಸುವವರು ಈಗ ಆರಂಭಿಸುವುದು ಬೇಡ. ತೆರಿಗೆ ತಜ್ಞರು ಲೆಕ್ಕಪತ್ರಗಳ ಪರಿಶೀಲನೆಯಲ್ಲಿ ಹೆಚ್ಚಿನ ಕಾಲ ಕಳೆಯಬೇಕಾಗಬಹುದು ಹಾಗೂ ಹೆಚ್ಚಿನ ಆದಾಯವನ್ನು ಪಡೆಯಬಹುದು.
ಕುಂಭ : ಹೊಸದಾಗಿ ಕಟ್ಟಿಸುತ್ತಿರುವ ಮನೆಯ ಕೆಲಸ ಪೂರ್ಣಗೊಂಡು ಮನಸ್ಸಿಗೆ ನೆಮ್ಮದಿ ಕೊಡುತ್ತದೆ. ಮಕ್ಕಳ ವಿವಾಹದ ವಿಷಯದಲ್ಲಿ ನಿಮ್ಮ ಸಂಬಂಧಿಕರಿಂದ ಕೆಲವು ಒತ್ತಾಯಗಳು ಬರಬಹುದು. ಸಮಾಜಮುಖಿ ಕೆಲಸಗಳನ್ನು ಮಾಡುತ್ತಿರುವವರಿಗೆ ಜನರಿಂದ ಸಹಾಯಹಸ್ತಗಳು ದೊರೆಯುತ್ತವೆ. ಪ್ರೀತಿಪಾತ್ರರ ಭೇಟಿಯಿಂದ ಬಾಲ್ಯದ ನೆನಪುಗಳನ್ನು ಮೆಲುಕು ಹಾಕುವಿರಿ. ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ.
ಮೀನ : ಧಾನ್ಯಗಳ ಸಗಟು ವ್ಯಾಪಾರವನ್ನು ಮಾಡುತ್ತಿರುವವರಿಗೆ ವ್ಯವಹಾರದಲ್ಲಿ ಅಭಿವೃದ್ಧಿ ಇದ್ದೇ ಇರುತ್ತದೆ. ಕೈಗೆತ್ತಿಕೊಂಡ ಕೆಲಸಗಳನ್ನು ಶಕ್ತ್ಯಾನುಸಾರ ಮಾಡಿ ಪೂರೈಸುವಿರಿ. ಸರ್ಕಾರದಿಂದ ಆಗಬೇಕಾದ ಕೆಲಸಗಳಲ್ಲಿ ಮುನ್ನಡೆಯನ್ನು ಕಾಣುವಿರಿ. ಶೀತ ಬಾಧೆ ನಿಮ್ಮನ್ನು ಬಾಧಿಸಬಹುದು. ಹಣದ ಒಳಹರಿವು ತೃಪ್ತಿದಾಯಕವಾಗಿರುತ್ತದೆ. ತೈಲ ವ್ಯಾಪಾರಿಗಳಿಗೆ ಸ್ವಲ್ಪ ಹಿನ್ನಡೆ ಕಂಡರೂ ನಂತರ ಮುನ್ನಡೆಯುತ್ತದೆ.















