Coastal Bulletin

ಬಿಜೆಪಿ ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ರೈತ ಮೋರ್ಚಾ ವತಿಯಿಂದ 26/11/2008 ಇದೆ ದಿನ ಮುಂಬೈನ ಹೊಟೆಲ್ ತಾಜ್ ‍ನಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಹುತಾತ್ಮರಾದ ವೀರ ಯೋಧರನ್ನು ಭಾವಚಿತ್ರ ಹಿಡಿದು ಸ್ಮರಿಸಿದರು.

ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ರೈತ ಮೋರ್ಚಾ ಉಪಾಧ್ಯಕ್ಷರಾದ ನಾಗರಾಜುರವರು  ನನ್ನ ಯೋಧ ನನ್ನ ಹೆಮ್ಮೆ 26/11/2008 ಇದೇ ದಿನ ಮುಂಬೈನ ಹೊಟೆಲ್ ತಾಜ್ ‍ನಲ್ಲಿ ನಡೆದ ಬಾಂಬ್ ದಾಳಿಯು ಇಡೀ ಭಾರತೀಯರಲ್ಲಿ ಒಂದು ಕ್ಷಣ ಭಯದ ವಾತಾವರಣ ಸೃಷ್ಟಿಸಿದಂತು ನಿಜ. ಆದರೆ ನಾವು ಗಮನಿಸಲೇ ಬೇಕಾದ ವಿಚಾರ ನಮ್ಮ ದೇಶದ ಸೈನಿಕರು ಹಾಗೂ ಪೊಲೀಸ್

ಇಲಾಖೆಯು ಉಗ್ರರನ್ನು ಮಟ್ಟಹಾಕುವಲ್ಲಿ ಯಶಸ್ವಿಯಾದರು. ಇವರುಗಳ ಧೈರ್ಯ, ಶೌರ್ಯವನ್ನು ಮೆಚ್ಚಲೇ ಬೇಕು. ಈ ಯಶಸ್ವಿ ಕಾರ್ಯಾಚರಣೆಯಲ್ಲಿ ವೀರ ಮರಣವನ್ನು ಅಪ್ಪಿದ ವೀರಯೋಧರಿಗೆ ನಮ್ಮ ಅನಂತ ಪ್ರಣಾಮಗಳು ಎಂದು ತಿಳಿಸಿದರು.

ಈ ಕಾರ್ಯಕ್ರಮದಲ್ಲಿ ಚಾಮುಂಡೇಶ್ವರಿ ಕ್ಷೇತ್ರದ ರೈತ ಮೋರ್ಚಾ ಉಪಾಧ್ಯಕ್ಷರಾದ ಹೂಟಗಳ್ಳಿ ನಾಗರಾಜು, ಬೂತ್ ಕಾರ್ಯದರ್ಶಿ ಜಯಂತ್, ಕಾರ್ಯಕರ್ತರಾದ ಮಂಜು, ಹರೀಶ್ ಗೌಡ, ಮುಂತಾದ ಕಾರ್ಯಕರ್ತರು ಉಪಸ್ಥಿತರಿದ್ದರು.

Leave a Comment