ಪೊಳಲಿ: ಯಕ್ಷದ್ರುವ ಯಕ್ಷ ಶಿಕ್ಷಣದ ನಾಟ್ಯ ತರಬೇತಿ ಕಾರ್ಯಕ್ರಮ.

Coastal Bulletin
ಪೊಳಲಿ: ಯಕ್ಷದ್ರುವ ಯಕ್ಷ ಶಿಕ್ಷಣದ ನಾಟ್ಯ ತರಬೇತಿ ಕಾರ್ಯಕ್ರಮ.

ಬಂಟ್ವಾಳ: ಯಕ್ಷದ್ರುವ ಪಟ್ಲ ಫೌಂಡೇಶನ್ ಟ್ರಸ್ಟ್ ಮಂಗಳೂರು ಇದರ ವತಿಯಿಂದ ನಡೆಯುವ ಯಕ್ಷದ್ರುವ ಯಕ್ಷ ಶಿಕ್ಷಣದ ನಾಟ್ಯ ತರಬೇತಿ ಕಾರ್ಯಕ್ರಮದ ಪ್ರಾರಂಭೋತ್ಸವ ಸರಕಾರಿ ಪ್ರೌಢಶಾಲೆ ಪೊಳಲಿ ಇಲ್ಲಿಯ ಸಭಾಂಗಣದಲ್ಲಿ ದೀಪ ಪ್ರಜ್ವಲನೆಯ ಮೂಲಕ ಪ್ರಾರಂಭಿಸಲಾಯಿತು.

ಟ್ರಸ್ಟಿನ ಸಂಚಾಲಕರಾದ ವಾಸುದೇವ ಆಯ್ತಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಪೊಳಲಿ ಕೈಕಂಬ ಘಟಕದ ಸದಸ್ಯರಾದ ಲೋಕೇಶ್ ಭರಣಿ ಶುಭ ಹಾರೈಸಿದರು. ಎಸ್ ಡಿ ಎಂ ಸಿ ಅಧ್ಯಕ್ಷರಾದ  ವೆಂಕಟೇಶ ನಾವಡ ಅಧ್ಯಕ್ಷತೆಯನ್ನು ವಹಿಸಿದ್ದರು. ಯಕ್ಷಗಾನ ಕರಾವಳಿಯ ಗಂಡು ಕಲೆ. ಇದನ್ನು ಅಭ್ಯಾಸ ಮಾಡುವುದರಿಂದ ಏಕಾಗ್ರತೆ, ವೇದಿಕೆಯಲ್ಲಿ ನೀರರ್ಗಳತೆಯಿಂದ ಮಾತನಾಡುವುದು, ನಮ್ಮ

ಪರಂಪರೆಯ ಬಗ್ಗೆ ಸಂಸ್ಕೃತಿ ಬಗ್ಗೆ ಅರಿವಾಗುತ್ತದೆ ಎಂದು ವಾಸುದೇವ ಐತಾಳ ತಿಳಿಸಿದರು. ಯಕ್ಷ ಗುರುಗಳಾದ ದಿನೇಶ್ ಬಂಗೇರ ವಿದ್ಯಾರ್ಥಿಗಳಿಗೆ ಪ್ರಾರಂಭಿಕ ನಾಟ್ಯ ಹೆಜ್ಜೆಯನ್ನು ಅಭ್ಯಾಸ ಮಾಡಿಸಿದರು. ಸರ್ವರನ್ನು ಮುಖ್ಯ ಶಿಕ್ಷಕರಾದ ಶ್ರೀ ಸುಬ್ರಾಯ ಪೈ ಸ್ವಾಗತಿಸಿ ರಂಜಿತ ಕಾರ್ಯಕ್ರಮ ನಿರೂಪಿಸಿದರು.

ಸತತ ನಾಲ್ಕನೇ ವರ್ಷದಲ್ಲಿ ಈ ಶಾಲೆಯಲ್ಲಿ ಯಕ್ಷ ಶಿಕ್ಷಣದ ಅಭ್ಯಾಸ ನಡೆಯುತಿದೆ.

Leave a Comment