ಬೆಂಗಳೂರು: 6 ವರ್ಷಗಳ ಹಳೆಯ ಬಿಟ್ ಕಾಯಿನ್ ಹಗರಣದಲ್ಲಿ (Karnataka Bitcoin Scam) ಕಾಂಗ್ರೆಸ್ ಶಾಸಕ ಹ್ಯಾರಿಸ್ ಪುತ್ರ, ಯೂತ್ ಕಾಂಗ್ರೆಸ್ ಮುಖಂಡ ಮೊಹಮ್ಮದ್ ನಲಪಾಡ್‌ಗೆ (Mohammed Nalapad) ಸಂಕಷ್ಟ ಎದುರಾಗಿದೆ.
ವಿಶೇಷ ತನಿಖಾ ದಳ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಸಲ್ಲಿಸಿದೆ. ಹಗರಣದಲ್ಲಿ ನಲಪಾಡ್ ಕೂಡ ಪಾಲುದಾರ, ಆತನಿಗೂ ಹಣ ಸಂದಾಯವಾಗಿದೆ ಅಂತ ಉಲ್ಲೇಖಿಸಿದೆ. ಮತ್ತೊಂದ್ಕಡೆ, ತನಿಖೆ ಮಾಡ್ತಿರುವ ಇ.ಡಿ ಕೂಡ ಶೀಘ್ರವೇ ವಿಚಾರಣೆಗೆ ಹಾಜರಾಗುವಂತೆ 3ನೇ ನೊಟೀಸ್ ಕೂಡ ಕೊಟ್ಟಿದೆ.
ಎಸ್‌ಐಟಿ ಚಾರ್ಜ್‌ಶೀಟ್‌ನಲ್ಲೇನಿದೆ?
* ಶ್ರೀಕೃಷ್ಣ@ ಶ್ರೀಕಿ, ರಾಬಿನ್ ಖಂಡೇವಾಲ, ನಲಪಾಡ್ ಸೇರಿ ಇತರರ ವಿರುದ್ಧ ಎಸ್‌ಐಟಿ ಚಾರ್ಜ್‌ಶೀಟ್
* ಬಿಟ್‌ಕಾಯಿನ್ ಹಗರಣದ ಮಾಸ್ಟರ್ ಮೈಂಡ್ ಶ್ರೀಕಿ ಜೊತೆ ನಲಪಾಡ್‌ಗೆ ನಂಟು
*
ಬಿಟ್‌ಕಾಯಿನ್ ನಗದೀಕರಣಕ್ಕಾಗಿ ನಲಪಾಡ್ ಸಂಪರ್ಕಿಸಿದ್ದ ಹ್ಯಾಕರ್ ಶ್ರೀಕಿ
* ಮುಂಬೈ ಮೂಲದ ಸ್ನೇಹಿತ, ಖಂಡೇವಾಲ ಮೂಲಕ ಹವಾಲಾ ರೂಪದಲ್ಲಿ ನಗದೀಕರಣ ಮಾಡಿರುವ ನಲಪಾಡ್
* ನಗದೀಕರಣ ಪ್ರಕ್ರಿಯೆಯಲ್ಲಿ ನಲಪಾಡ್‌ಗೂ ಕಮಿಷನ್ ರೂಪದಲ್ಲಿ ಹಣ ಸಂದಾಯ
* ವಿಚಾರಣೆಗೆ ಹಾಜರಾಗುವಂತೆ 3ನೇ ಬಾರಿಗೆ ಇಡಿ ನೋಟಿಸ್
* ಈಗಾಗಲೇ ಶ್ರೀಕಿ, ರಾಬಿನ್ ಖಂಡೇವಾಲ, ಸುನೀಶ್ ಹೆಗ್ಡೆ ವಿಚಾರಣೆ ಮಾಡಿರುವ ಇ.ಡಿ
* 16 ಗಂಟೆಗಳ ಕಾಲ ಮೂವರನ್ನೂ ವಿಚಾರಣೆ ನಡೆಸಿರುವ ಇ.ಡಿ















