ಬೆಂಗಳೂರಿನ ಹಲವೆಡೆ ಬೆಸ್ಕಾಂ EV ಚಾರ್ಜಿಂಗ್ ಸ್ಟೇಷನ್‌ ಬಂದ್; ಖಾಸಗಿ ಕೇಂದ್ರಗಳ ದುಬಾರಿ ಶುಲ್ಕಕ್ಕೆ ಇವಿ ಸವಾರರು ಹೈರಾಣು!

Coastal Bulletin
ಬೆಂಗಳೂರಿನ ಹಲವೆಡೆ ಬೆಸ್ಕಾಂ EV ಚಾರ್ಜಿಂಗ್ ಸ್ಟೇಷನ್‌ ಬಂದ್; ಖಾಸಗಿ ಕೇಂದ್ರಗಳ ದುಬಾರಿ ಶುಲ್ಕಕ್ಕೆ ಇವಿ ಸವಾರರು ಹೈರಾಣು!

ಬೆಂಗಳೂರು: ಬೆಂಗಳೂರಿನಲ್ಲಿ ಇವಿ ವಾಹನಗಳು ಹೆಚ್ಚಾದರೂ ಚಾರ್ಜಿಂಗ್ ಕೇಂದ್ರಗಳ ಕೊರತೆ ಇದೆ. ಬೆಸ್ಕಾಂನ ಹಲವು ಚಾರ್ಜರ್‌ಗಳು ನಿರ್ವಹಣೆ, ನವೀಕರಣದ ನೆಪದಲ್ಲಿ ಬಂದ್ ಆಗಿವೆ ಎಂದು ಸವಾರರು ಆರೋಪಿಸಿದ್ದಾರೆ.

ರಾಜ್ಯದಲ್ಲಿ 8,608 ಇವಿ ಚಾರ್ಜಿಂಗ್ ಕೇಂದ್ರಗಳಿದ್ದು, 6,230 ಖಾಸಗಿಯದ್ದು. ಬೆಂಗಳೂರಿನಲ್ಲಿ ಬೆಸ್ಕಾಂನ 209, ಇತರೆ ಸರ್ಕಾರಿ ಸಂಸ್ಥೆಗಳ 2,099 ಕೇಂದ್ರಗಳಿವೆ. ಬೆಸ್ಕಾಂ 71+ ಕೇಂದ್ರ ಸ್ಥಾಪಿಸಿದ್ದರೂ ಹೆಚ್ಚಿನ ಸಾಮರ್ಥ್ಯದ ಸ್ಟೇಷನ್‌ಗಳು ಕಾರ್ಯನಿರ್ವಹಿಸುತ್ತಿಲ್ಲ. ಬ್ಯಾಟರಾಯನಪುರ ಕೇಂದ್ರ 6 ತಿಂಗಳಿಂದ ಬಂದ್ ಆಗಿದೆ. ಕೆಲವು ಕೇಂದ್ರಗಳು ಒಂದು ದಿನ ಓಪನ್, ಮತ್ತೊಂದು ದಿನ ಬಂದ್ ಆಗುತ್ತವೆ ಎನ್ನುತ್ತಾರೆ ಸವಾರರು.

ಖಾಸಗಿ ಕೇಂದ್ರಗಳ ದುಬಾರಿ ಶುಲ್ಕ

ಬೆಸ್ಕಾಂ ಕೇಂದ್ರದಲ್ಲಿ ಪ್ರತಿ ಯೂನಿಟ್‌ಗೆ ₹7.10-7.90. ಖಾಸಗಿ ಕೇಂದ್ರಗಳಲ್ಲಿ ₹22.25-25. ಜೂನ್ 13ರಂದು ಖಾಸಗಿ ಕೇಂದ್ರದಲ್ಲಿ 8.72 ಯೂನಿಟ್‌ಗೆ ₹236.36 ತೆತ್ತಿದ್ದು, ಬೆಸ್ಕಾಂನಲ್ಲಿ

₹120+ ಉಳಿತಾಯವಾಗುತ್ತಿತ್ತು ಎಂದು ವಕೀಲ ಜಿ. ಪ್ರಕಾಶ್ ಹೇಳಿದ್ದಾರೆ.

ಬೆಸ್ಕಾಂ ಅಧಿಕಾರಿಗಳು ಹೇಳುವುದೇನು?

4-5 ವರ್ಷ ಹಳೆಯ ಪಾಯಿಂಟ್‌ಗಳನ್ನು ತೆಗೆದು ಹೊಸ ಪಾಯಿಂಟ್ ಅಳವಡಿಸಲು ಸಿದ್ಧತೆ ನಡೆದಿದೆ. 184 ಕೇಂದ್ರ ನವೀಕರಣ, ದ್ವಿಚಕ್ರ ವಾಹನಗಳಿಗೆ 100 ಹೊಸ ಕೇಂದ್ರ ತೆರೆಯುವ ಯೋಜನೆ ಇದೆ. 25 ಕಿ.ವ್ಯಾ ಕೇಂದ್ರಗಳನ್ನು 50 ಕಿ.ವ್ಯಾ ಗೆ ಅಪ್‌ಗ್ರೇಡ್ ಮಾಡಲಾಗುವುದು. 14 ಕೇಂದ್ರಗಳನ್ನು ಗುರುತಿಸಿ ಒಂದು ತಿಂಗಳಲ್ಲಿ ಟೆಂಡರ್ ಕರೆದು ಸರಿಪಡಿಸಲಾಗುವುದು ಎಂದು ಬೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ. ಮಳೆಯಿಂದ ಕೆಲ ಕೇಂದ್ರಗಳು ತಾತ್ಕಾಲಿಕ ಬಂದ್ ಆಗುತ್ತವೆ, ವಾರಗಟ್ಟಲೆ ಬಂದ್ ಇಲ್ಲ ಎಂದಿದ್ದಾರೆ.

Leave a Comment