ಮೇಷ ಸಾರ್ವಜನಿಕ ಕಾರ್ಯಕ್ರಮದ ಜವಾಬ್ದಾರಿಯನ್ನು ಹೊತ್ತು ಮುನ್ನಡೆಸುವ ಇರಾದೆ ಇರುತ್ತದೆ. ದೀರ್ಘಕಾಲದಿಂದ ಮಾಡಬೇಕೆಂದು ಇಚ್ಛಿಸಿದ್ದ ಕೆಲಸ ಮಾಡಲು ಸೂಕ್ತ ಮಾರ್ಗದರ್ಶನ ದೊರೆಯುತ್ತದೆ.
ವೃಷಭ
ಮಕ್ಕಳ ವಿದ್ಯಾಭ್ಯಾಸದಲ್ಲಿ ಪ್ರಗತಿ ಕಾಣಬಹುದು. ಮಾತಿನ ಮೇಲೆ ಸ್ವಲ್ಪ ಹಿಡಿತವಿರಲಿ. ರಾಸಾಯನಿಕ ವಸ್ತುಗಳ ವ್ಯಾಪಾರಸ್ಥರಿಗೆ ಸ್ವಲ್ಪಮಟ್ಟಿನ ಹಿನ್ನಡೆ ಇರಲಿದೆ. ಆರ್ಥಿಕ ಸ್ಥಿತಿಯು ನಿಮ್ಮ ನಿರೀಕ್ಷೆಯ ಮಟ್ಟಕ್ಕೆ ಖಂಡಿತಾ ಇರುತ್ತದೆ.
ಮಿಥುನ
ನಿಮ್ಮ ಕೆಲವೊಂದು ಶತ್ರುಗಳು ತಮ್ಮ ತಪ್ಪಿನ ಅರಿವಾಗಿ ಮಿತ್ರರಾಗಿ ಬದಲಾಗುವರು. ಬಂಧುಗಳು ಮತ್ತು ಆಪ್ತರಿಂದ ಸ್ವಲ್ಪ ಕಿರಿಕಿರಿಯನ್ನು ಎದುರಿಸಬೇಕಾದೀತು. ನಿಮ್ಮ ಕೆಲವು ಯೋಜನೆಗಳಿಂದ ಇತರರಿಗೆ ಹೆಚ್ಚಿನ ಅನುಕೂಲತೆ ಒದಗಿಬಂದು ನೀವು ಎಲ್ಲರ ಗೌರವಕ್ಕೆ ಪಾತ್ರರಾಗುವಿರಿ.
ಕಟಕ
ದೂರ ಪ್ರಯಾಣ ಹೋಗಲು ಸಾಕಷ್ಟು ತಯಾರಿ ನಡೆಸುವಿರಿ. ಬಹಳ ದಿನಗಳಿಂದ ಕಾಡುತ್ತಿದ್ದ ಕೆಲವು ತೊಂದರೆ ತಾಪತ್ರಯಗಳು ನಿವಾರಣೆಯಾಗುವ ಲಕ್ಷಣಗಳಿವೆ. ವಿದ್ಯಾರ್ಥಿಗಳಿಗೆ ತಮ್ಮ ಅಧ್ಯಯನದಲ್ಲಿ ಸಾಕಷ್ಟು ಪ್ರಗತಿ ಇರುತ್ತದೆ. ಹಠಬಿಡದೆ ನಿಮ್ಮ ಯೋಜನೆಗಳನ್ನು ಮುಂದುವರೆಸಿದಲ್ಲಿ ಅದಕ್ಕೆ ತಕ್ಕ ಪ್ರತಿಫಲ ಇದ್ದೆ ಇರುತ್ತದೆ.
ಸಿಂಹ
ಅನಾರೋಗ್ಯದಿಂದ ಬಳಲುತ್ತಿರುವವರ ಆರೋಗ್ಯದಲ್ಲಿ ಸುಧಾರಣೆ ಕಾಣಬಹುದು. ವ್ಯವಹಾರದಲ್ಲಿ ಅನಾಸಕ್ತಿ ತೋರಿದಲ್ಲಿ ನಷ್ಟ ಅನುಭವಿಸುವ ಸಾಧ್ಯತೆ ಇದೆ. ನಿಮ್ಮ ಒರಟುತನದಿಂದಾಗಿ ಕೆಲವರು ನಿಮ್ಮನ್ನು ತಿರಸ್ಕರಿಸಬಹುದು. ಸಂಗಾತಿಯ ಆರೋಗ್ಯದ ಬಗ್ಗೆ ಕಾಳಜಿ ವಹಿಸಿರಿ. ನಿಮ್ಮ ಶ್ರಮಕ್ಕೆ ತಕ್ಕಂತೆ ಆದಾಯ ಇರುತ್ತದೆ
ಕನ್ಯಾ
ಬಹಳ ದಿನಗಳ ನಂತರ ಬಾಂಧವರೊಡನೆ ಸಂಬಂಧವನ್ನು ವೃದ್ಧಿಸಿಕೊಳ್ಳಲು ಪ್ರಯತ್ನ ಪಡುವಿರಿ. ವಿವಾಹ ಆಕಾಂಕ್ಷಿಗಳಿಗೆ ಸಂಬಂಧ ಒದಗಿಬರುವ ಸಾಧ್ಯತೆ ಇದೆ. ಒಳಾಂಗಣ ವಿನ್ಯಾಸವನ್ನು ಮಾಡುವವರಿಗೆ ಹೆಚ್ಚಿನ ಕೆಲಸ ದೊರೆತು ಆದಾಯ ಹೆಚ್ಚುತ್ತದೆ. ಉದ್ಯಮ ಕ್ಷೇತ್ರವನ್ನು ವಿಸ್ತರಿಸಬೇಕೆಂದು ಇರುವವರಿಗೆ ಬೇಕಾದ ಅನುಕೂಲತೆಗಳು ದೊರೆಯುತ್ತವೆ.
ತುಲಾ
ನಿಮ್ಮ ಉದ್ದೇಶ ಸಾಧನೆಗಾಗಿ ಕಟ್ಟುನಿಟ್ಟಿನ ಕ್ರಮಗಳನ್ನು ಜರುಗಿಸಿ ಎಲ್ಲರ ನಿಷ್ಟೂರಕ್ಕೆ ಒಳಗಾಗುವಿರಿ. ಹಣದ ಒಳಹರಿವು ಮಂದಗತಿಯಲ್ಲಿ ಇರುತ್ತದೆ. ವಾಹನ ಮಾರಾಟಗಾರರಿಗೆ ವ್ಯಾಪಾರ ಹೆಚ್ಚುತ್ತದೆ. ಷೇರು ವ್ಯವಹಾರಗಳಲ್ಲಿ ಹೆಚ್ಚಿನ ನಷ್ಟ
ಸಂಭವಿಸುವ ಸಾಧ್ಯತೆ ಇದೆ.
ವೃಶ್ಚಿಕ
ಹಿರಿಯರೊಡನೆ ವಾದ-ವಿವಾದಗಳು ಏರ್ಪಡುವ ಸಂಭವವಿದೆ, ಎಚ್ಚರವಹಿಸಿರಿ. ವಸ್ತ್ರ ವಿನ್ಯಾಸ ಮಾಡುವವರಿಗೆ ಹೆಚ್ಚಿನ ಮಾನ್ಯತೆ ದೊರೆತು ಆದಾಯ ಹೆಚ್ಚುತ್ತದೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯಷ್ಟು ಇರುತ್ತದೆ. ಮನೆಯವರ ಆರೋಗ್ಯದಲ್ಲಿ ಸ್ವಲ್ಪಮಟ್ಟಿನ ವ್ಯತ್ಯಾಸವನ್ನು ಕಾಣಬಹುದು. ಕೆಲವು ಮಹಿಳೆಯರ ಅಭಿಲಾಷೆಗಳು ಈಡೇರುವ ಸಾಧ್ಯತೆ ಇದೆ.
ಧನು
ಹೊಸ ವಾಹನ ಖರೀದಿಗೆ ಮುಂದಾಗುವ ಸಾಧ್ಯತೆ ಇದೆ. ಮನೆಯವರ ಒತ್ತಾಯಕ್ಕೆ ಮಣಿದು ದೇವಾಲಯ ದರ್ಶನಕ್ಕಾಗಿ ಹೊರಡುವಿರಿ. ವಿದ್ಯಾರ್ಥಿಗಳು ಅಧ್ಯಯನಕ್ಕಾಗಿ ಮಾಡಿದ ಶ್ರಮ ಉತ್ತಮ ಫಲವನ್ನು ಕೊಡುತ್ತದೆ. ರೇಶ್ಮೆ ನೂಲು ತೆಗೆಯುವವರಿಗೆ ಉತ್ತಮ ಮಾರುಕಟ್ಟೆ ಒದಗಿಬರುತ್ತದೆ.
ಮಕರ
ಸರ್ಕಾರಿ ಇಲಾಖೆಗಳಲ್ಲಿ ಕೆಲಸ ಮಾಡುತ್ತಿರುವವರಿಗೆ ಸಾಕಷ್ಟು ತುರ್ತಿನ ಕೆಲಸಗಳು ಎದುರಾಗುವ ಸಾಧ್ಯತೆ ಇದೆ. ಜಾಹಿರಾತುಗಳ ಮೂಲಕ ಸರಕುಗಳ ವಹಿವಾಟನ್ನು ಹೆಚ್ಚಿಸಿಕೊಳ್ಳುವಿರಿ. ವಿದೇಶಿ ಉತ್ಪನ್ನಗಳ ಮಾರಾಟದಿಂದ ಹೆಚ್ಚು ಹಣಗಳಿಸುವಿರಿ. ಕಾರ್ಯ ಸ್ಥಳದಲ್ಲಿ ಎಲ್ಲರೊಡನೆ ಹೊಂದಾಣಿಕೆ ಸಾಧಿಸಿಯೇ ಕಾರ್ಯ ಸಾಧನೆ ಮಾಡುವಿರಿ.
ಕುಂಭ
ಯುವಕರು ಮೋಜು-ಮಸ್ತಿಗಾಗಿ ಹೆಚ್ಚು ಹಣ ಖರ್ಚು ಮಾಡುವ ಲಕ್ಷಣಗಳಿವೆ. ಇದರಿಂದಾಗಿ ಮನೆಯಲ್ಲಿ ಮನಸ್ತಾಪ ಮೂಡಬಹುದು. ಕೆಲವು ರಾಜಕಾರಣಿಗಳಿಗೆ ಉನ್ನತ ಹುದ್ದೆ ಒದಗಿಬರುತ್ತದೆ. ಆಮದು ಮತ್ತು ರಫ್ತು ಮಾಡುವವರಿಗೆ ಉತ್ತಮ ವ್ಯವಹಾರ ನಡೆದು ಆದಾಯ ಹೆಚ್ಚುತ್ತದೆ. ಸ್ನೇಹಿತರು ಮತ್ತು ಬಂಧುಗಳ ನಡುವೆ ಸಂಬಂಧ ಗಟ್ಟಿಗೊಳ್ಳುತ್ತದೆ. ಇದಕ್ಕೆ ಮನೆಯ ಎಲ್ಲರ ಸಹಕಾರ ದೊರೆಯುತ್ತದೆ.
ಮೀನ
ಅತ್ಯಂತ ಉತ್ಸಾಹದಿಂದ ಸಾಂಸ್ಕೃತಿಕ ಕಾರ್ಯಗಳಲ್ಲಿ ತೊಡಗಿಕೊಳ್ಳುವಿರಿ. ನೃತ್ಯಪಟುಗಳಿಗೆ ಉತ್ತಮ ವೇದಿಕೆ ದೊರೆತು ಪ್ರದರ್ಶನ ಮಾಡುವ ಅವಕಾಶವಿರುತ್ತದೆ. ಮಕ್ಕಳಿಗಾಗಿ ಹೆಚ್ಚು ಹಣ ಖರ್ಚು ಮಾಡಲೇಬೇಕಾದ ಅನಿವಾರ್ಯತೆ ಇರುತ್ತದೆ. ಪ್ರಭಾವಿ ವ್ಯಕ್ತಿಗಳ ಸಹವಾಸದಿಂದಾಗಿ ಹಮ್ಮು ಬೆಳೆಯುತ್ತದೆ. ಕ್ರೀಡಾಪಟುಗಳಿಗೆ ಉತ್ತಮ ಭವಿಷ್ಯವಿದೆ ಮತ್ತು ಪುರಸ್ಕಾರಗಳು ದೊರೆಯುವ ಸಾಧ್ಯತೆ ಇದೆ.














