Coastal Bulletin

ಮೇಷ ರಾಶಿ : ಚಂದ್ರ ಎಂಟನೇ ಮನೆಯಲ್ಲಿ ರಂಧ್ರವನ್ನು ಮುಚ್ಚುತ್ತಾನೆ ಅಂದರೆ ಅಪಾಯದಿಂದ ರಕ್ಷಣೆ ಕೊಡುತ್ತಾನೆ. ನೀವು ಯಾವುದಾದರೂ ತೊಂದರೆ ಎದುರಿಸುತ್ತಿದ್ದರೆ ಅದಕ್ಕೆ ವಾರದ ಮೊದಲಲ್ಲೇ ಪರಿಹಾರ ಸಿಗುತ್ತದೆ. ಮೂರನೇ ಮನೆಯಲ್ಲಿ ಶುಕ್ರ ಸಹೋದರಿಯರಿಂದ ಲಾಭ ಕೊಡಿಸುತ್ತಾನೆ. ನಿಮ್ಮ ರಾಶಿಯಲ್ಲೇ ಗುರು‌ಇರುವುದರಿಂದ ಖರ್ಚು ಹೆಚ್ಚು.‌ ಶನಿಯ ಪ್ರಭಾವದಿಂದ ಹಣದ ಹರಿವು‌ ಉತ್ತಮವಾಗಿದೆ.‌

ವೃಷಭ ರಾಶಿ : ವಾರದ ಮೊದಲಲ್ಲಿ ಸಂಗಾತಿಗೆ ಲಾಭ ಹಾಗೂ ಸಂಗಾತಿಯಿಂದ ನಿಮಗೆ ಪ್ರಶಂಸೆ. ಮೂರನೇ ಮನೆಯಲ್ಲಿ ಕುಜ ಧೈರ್ಯ ಪರಾಕ್ರಮ ಕೊಟ್ಟು ಮುನ್ನಡೆಸುತ್ತಾನೆ. ಎರಡನೇ ಮನೆಯಲ್ಲಿ‌ ಶುಕ್ರ ಕುಟುಂಬ ಸೌಖ್ಯವನ್ನು ವೃದ್ಧಿ ಮಾಡುವುದರ ಜೊತೆಗೆ ಧನಲಾಭವನ್ನೂ ಕೊಡುತ್ತಾನೆ. 12ರ ಗುರು ಧರ್ಮ ಕಾರ್ಯಕ್ಕೆ ದೇವತಾ ಕಾರ್ಯಕ್ಕೆ ಖರ್ಚು ಮಾಡಿಸುತ್ತಾನೆ.

ಮಿಥುನ ರಾಶಿ : ಈಗ ನಾಲ್ಕು ಗ್ರಹಗಳು ನಿಮಗೆ ಲಾಭ ಸ್ಥಾನದಲ್ಲಿ ಇದ್ದು ಭಾಗ್ಯೋದಯವಾಗುವಂತ ಸಮಯ. ಯಾವ ಕೆಲಸಕ್ಕೆ ಕೈ ಹಾಕಿದರೂ ಲಾಭ. ಎಲ್ಲವೂ ಸುಲಭ.‌ ಸರ್ಕಾರದಿಂದಲೂ ಕೆಲಸಗಳು ಸಿಗುತ್ತದೆ. ನಿಮ್ಮ‌ ಬಾಕಿ ಹಣ ಬರುವುದಿದ್ದರೆ ಬರುತ್ತದೆ. ರಾಜಕೀಯ ವ್ಯಕ್ತಿಗಳಿಗೂ ಈಗ ಬಹಳ ಲಾಭದ ಸಮಯ. ಅವಕಾಶಗಳು ಬೊಗಸೆ ತುಂಬಾ ಸಿಗುವ ಸಮಯ. ಯಾವುದನ್ನೂ‌ ಚೆಲ್ಲಬೇಡಿ.

ಕಟಕ ರಾಶಿ : 12ನೇ ಮನೆಯಲ್ಲಿ ಶುಕ್ರ ಇರುವುದರಿಂದ ಖರ್ಚು ಹೆಚ್ಚು. ದುಬಾರಿ ಖರ್ಚುಗಳೇ ಬರುವ ಸಮಯ. ವಾಹನ ರಿಪೇರಿ ಮುಂತಾದ ಖರ್ಚುಗಳು ಬರುತ್ತದೆ. ಹತ್ತನೇ ಮನೆಯಲ್ಲಿ ನಾಲ್ಕು ಗ್ರಹಗಳು ಇದ್ದು ವೃತ್ತಿಯಲ್ಲಿ ಒತ್ತಡ ಇರುತ್ತದೆ. ಸಮಾಧಾನದಿಂದ ನಿಭಾಯಿಸಿ. ನಿಮ್ಮ ರಾಶಿಯಲ್ಲೇ ಕುಜನಿದ್ದು ನಿಮಗೆ ಕಾರಣವಿಲ್ಲದೆ ಕೋಪ ಸಿಡುಕು ತರಿಸುತ್ತಾನೆ. 

ಸಿಂಹ ರಾಶಿ : ಈ ವಾರ ಚಂದ್ರ 4,5,6,7 ನೇ ಮನೆಯಲ್ಲಿ ಸಂಚರಿಸುತ್ತ ನಿಮಗೆ ಶುಭ ಸಂತೋಷಗಳನ್ನು ತರುತ್ತಾನೆ. ಒಂಬತ್ತನೇ ಮನೆಯಲ್ಲಿ ನಾಲ್ಕು ಗ್ರಹಗಳ ಸಂಯೋಗ ನಿಮಗೆ ಒಂದು ರಾಜಯೋಗವನ್ನು ದೊರಕಿಸಿಕೊಡುತ್ತದೆ. ರಾಜಕೀಯ ನಾಯಕರಿಗೆ ದೊಡ್ಡ ಅಧಿಕಾರ ಸಿಗಬಹುದು.‌ ವೃತ್ತಿಯಲ್ಲಿ ಇರುವವರಿಗೆ ಬಡ್ತಿ ಇದೆ. ಹನ್ನೊಂದರ ಶುಕ್ರ ವಾಹನದಿಂದ ಲಾಭ, ನಾನಾ ರೀತಿಯ ಲಾಭಗಳನ್ನು ಕೊಡುತ್ತಾನೆ. 12 ಕುಜ ನಿಮಗೆ ಈಗ ನಕಾರಾತ್ಮಕ. 

ಕನ್ಯಾ ರಾಶಿ :ಒಂದು ಪ್ರಾಣಾಪಾಯದಿಂದ ಪಾರಾಗುತ್ತೀರಿ.‌ ಎಂಟನೇ ಮನೆಯಲ್ಲಿ ನಾಲ್ಕು ಗ್ರಹಗಳು ಇದ್ದು ನಿಮಗೆ ಅಪಾಯ ಇದ್ದರೂ ದೈವಬಲ ನಿಮ್ಮನ್ನು ಕಾಪಾಡಲಿದೆ. ಒಂಬತ್ತರ ಹಾಗೂ ಎರಡನೇ ಮನೆಯ ಶುಕ್ರ ವೃತ್ತಿಸ್ಥಾನದಲ್ಲಿ ಇದ್ದು‌ ನಿಮಗೆ ಶ್ರೇಯಸ್ಸನ್ನು ಉಂಟುಮಾಡುತ್ತಾನೆ. ಅಪಾಯಗಳಿಂದ ಪಾರು ಮಾಡುತ್ತಾನೆ. ದೇವಿ‌ಪೂಜೆ ಮಾಡಿ. ಭೂಮಿಯಿಂದ ಅಲ್ಪ ಲಾಭ ಇದೆ. ವೃತ್ತಿಯಲ್ಲಿ ಅಲ್ಪ ಯಶಸ್ಸು ಇದೆ.‌

ತುಲಾ ರಾಶಿ :ಏಳನೇ ಮನೆಯಲ್ಲಿ ನಾಲ್ಕು ಗ್ರಹಗಳು ಸೇರಿ‌ಒಂದು ರಾಜಯೋಗ ಆಗಿದೆ. ಕಳೆದ ಒಂದೆರಡು ವರ್ಷದಿಂದ ಪಟ್ಟಿರುವ ಕಷ್ಟಗಳನ್ನು ಮರೆಸುವಂತೆ ಈಗ

ನಿಮಗೆ ಭಾಗ್ಯದ ಬಾಗಿಲು ತೆಗೆಯುವ ಸಮಯ.‌ ಅಧಿಕಾರ ಸಿಗಬಹುದು ರಾಜಕೀಯ ವ್ಯಕ್ತಿಗಳು ತಮ್ಮ ಗುರಿಯ ಬಗ್ಗೆ ಸಫಲತೆ ಪಡೆಯಬಹುದು. ವೃತ್ತಿಯಲ್ಲಿ ಬಡ್ತಿ ಮುಂತಾದ ಶುಭಫಲಗಳು ಇದೆ. ಆದರೆ ವೃಥಾ ಅಲೆದಾಟ ಒತ್ತಡವನ್ನೂ ಸಹಿಸಬೇಕಾಗುವುದು. 

ವೃಶ್ಚಿಕ ರಾಶಿ :ಗುರು ಬಲ ಇಲ್ಲದಿರುವುದರಿಂದ ಗುರುಪೀಠಕ್ಕೆ ಹೋಗಿ ಆಶೀರ್ವಾದ ಪಡೆಯಿರಿ. ಕುಲದೇವತಾ ದರ್ಶನ ಮಾಡಿ. ಆರರ ರಾಹು ನಿಮಗೆ ಶಕ್ತಿ ಸಾಮರ್ಥ್ಯ ವನ್ನು ಕೊಡುತ್ತಾನೆ. ಎಂಟರ ಶುಕ್ರ ಸೌಖ್ಯವನ್ನು ವೃದ್ಧಿ ಮಾಡುತ್ತಾನೆ. ಸಾಲ ತೀರಿಸಲು ನಿಮಗೆ ಅವಕಾಶ ಒದಗಿ ಬರುತ್ತದೆ.‌ ಅದನ್ನು ಸರಿಯಾಗಿ ವಿವೇಚನೆಯಿಂದ ಉಪಯೋಗಿಸಿ. 

ಧನಸ್ಸು ರಾಶಿ :ಈಗ ನಿಮಗೆ ಗುರುಬಲ ಶನಿಬಲ ಎರಡೂ ಇದ್ದು ನಿಮ್ಮ ಕೆಲಸಕಾರ್ಯಗಳು ಯಶಸ್ಸು ಕಾಣುತ್ತದೆ.‌ ರಾಜಕೀಯ ವ್ಯಕ್ತಿಗಳಿಗೆ ನೀವು ಊಹಿಸಲಾರದಂತಹ ಉನ್ನತ ಮಟ್ಟದ ಅಧಿಕಾರ ದೊರೆಯುತ್ತದೆ.‌ ಸರ್ಕಾರಿ‌ ಅಧಿಕಾರಿಗಳಿಗೆ ಬಡ್ತಿ ಪ್ರಶಂಸೆ ದೊರೆಯುತ್ತದೆ. ವಿಧ್ಯಾರ್ಥಿಗಳಿಗೆ ಬಹಳ ಶುಭಕಾಲ.‌

ಮಕರ ರಾಶಿ : ಅವಕಾಶಗಳಿಗಾಗಿ ಕಾಯುತ್ತಿದ್ದೀರಿ. ಶನಿ ನಿಮ್ಮ ರಾಶಿಯನ್ನು ಬಿಟ್ಟು ಮುಂದೆ ಹೋಗಿದ್ದರೂ ಶನಿ ಪ್ರಭಾವ ಇನ್ನೂ ಇರುವುದರಿಂದ ಅವಕಾಶಗಳು ನಿಮ್ಮ ಪಾಲಿಗೆ ಇನ್ನೂ ದೂರವಾಗಿಯೇ ಇದೆ. ಆದರೂ‌ ಈಗ ನಾಲ್ಕನೇ ಮನೆಯಲ್ಲಿ ನಾಲ್ಕು ಗ್ರಹಗಳು ಸೇರಿ ಅವು ನಿಮ್ಮ ವೃತ್ತಿಸ್ಥಾನವನ್ನು ನೀಡುತ್ತದೆ. ಹಾಗಾಗಿ ವೃತ್ತಿಯಲ್ಲಿ ಹೊಸ ಅವಕಾಶಗಳು ಎದುರಾಗಬಹುದು. ಕೊಂಚ ಒಂಟಿತನ ಏಕತಾನತೆ ಬಾಧಿಸುತ್ತದೆ. ಬೇಸರ ಬೇಡ.

ಕುಂಭ ರಾಶಿ : ಹೊಸ ನಿರೀಕ್ಷೆಯಲ್ಲಿ ಇದ್ದೀರಿ. ಹೊಸ ಕನಸು ಕಾಣುತ್ತಿದ್ದೀರಿ. ಆದರೆ ನಿಮ್ಮ ನಿರೀಕ್ಷೆ ಈಡೇರುವ ದಾರಿ‌ ಕಠಿಣವಿದೆ. ಕುಂಭರಾಶಿಯ ರಾಜಕೀಯ ನಾಯಕರಿಗೂ ದಾರಿ ಅಷ್ಟು ಸುಗಮ ಇಲ್ಲ. ಐದನೇ ಮನೆಯ ಶುಕ್ರ ವಿದ್ಯಾರ್ಥಿಗಳಿಗೆ ಶುಭ ಕೊಡುತ್ತಾನೆ. ಮೂರನೇ ಮನೆಯಲ್ಲಿ ಬಲಿಷ್ಠ ಗ್ರಹಗಳು‌ ಇದ್ದರೂ ಹತ್ತನೇ ಮನೆಯ ಅಧಿಪತಿ ಕುಜ ನೀಚ ಸ್ಥಾನಕ್ಕೆ ಬಂದಿರುವುದರಿಂದ ವೃತ್ತಿಯಲ್ಲಿ ಯಶಸ್ಸು ಕಡಿಮೆ.‌ 

ಮೀನ ರಾಶಿ :ಎರಡನೇ ಮನೆಯಲ್ಲಿ ಗುರು, ಗುರುವಿನ ಜೊತೆ ಮೂರು ಬಲಿಷ್ಠ ಗ್ರಹಗಳು ಸೇರಿ ಹಣದ ಹರಿವನ್ನು‌ಉತ್ತಮ ಪಡಿಸುತ್ತದೆ. ಹಣದ ಮೂಲ ಚೆನ್ನಾಗಿದೆ. ಕುಟುಂಬ ಸೌಖ್ಯ ಚೆನ್ನಾಗಿದೆ. ಈ ರಾಶಿಯ ರಾಜಕೀಯ ನಾಯಕರು ಉತ್ತಮ ಫಲಗಳನ್ನು ನಿರೀಕ್ಷಿಸಬಹುದು. ನಾಲ್ಕನೇ ಮನೆಯ ಶುಕ್ರನಿಂದ ವಾಹನಿಂದ ಲಾಭ, ವಾಹನ ಖರೀದಿಯೋಗ, ಆಸ್ತಿ ಮಾರಾಟದಿಂದ ಲಾಭ ಮೊಸಲಾದ ಶುಭಫಲಗಳು ಇವೆ. 

Leave a Comment