ಬಂಟ್ವಾಳ:ಸಾಮಾಜಿಕ ಧಾರ್ಮಿಕ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಮಾಜಮುಖಿಯಾಗಿ ಜೀವನ ಪೂರ್ತಿ ತೊಡಗಿಸಿಕೊಂಡಿರುವ ಕೃಷ್ಣ ಕುಮಾರ್ ಪೂಂಜರವರು ಸೇವಾಂಜಲಿಯ ಮೂಲಕ ಕೇಂದ್ರ ಸರಕಾರದ ಮಹತ್ವದ ನಿಕ್ಷಯ್ ಮಿತ್ರ ಯೋಜನೆಯನ್ನು ಅರ್ಹರಿಗೆ ತಲುಪಿಸುವ ಕಾರ್ಯ ಮಾಡುತ್ತಿದ್ದಾರೆ ಇದನ್ನು ಸದ್ಭಳಕೆ ಮಾಡಿ ಆರೋಗ್ಯಕರ ಸಮಾಜಕ್ಕಾಗಿ ಪ್ರಯತ್ನಿಸಿ ಎಂದು ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ. ತುಕರಾಂ ಪೂಜಾರಿ ಹೇಳಿದರು.
ಅವರು ಕೇಂದ್ರ ಸರಕಾರದ ನಿಕ್ಷಯ್ ಮಿತ್ರ ಯೋಜನೆಯಡಿ ಸೇವಾಂಜಲಿ ಪ್ರತಿಷ್ಠಾನದ ವತಿಯಿಂದ ಫರಂಗಿಪೇಟೆಯ ಸೇವಾಂಜಲಿ ಸಭಾಗ್ರಹದಲ್ಲಿ ಕ್ಷಯ ರೋಗಗಳಿಗೆ ಪೌಷ್ಟಿಕಾಹಾರದ ಕಿಟ್ ವಿತರಿಸಿ ಮಾತನಾಡಿದರು.
ಕೈಕಂಬದ ಸೂರ್ಯವಂಶ ಫೌಂಡೇಶನ್ ಅಧ್ಯಕ್ಷ ಡಾ. ಗೋವರ್ಧನ ರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿ ಸೇವಾಂಜಲಿಯ ಮೂಲಕ ಕೃಷ್ಣಕುಮಾರ್ ಪೂಂಜ ಅವರು ಯಾವುದೇ ಪಲಾಪೇಕ್ಷೆ ಇಲ್ಲದೆ ಸೇವೆ ನೀಡುತ್ತಿದ್ದಾರೆ, ಇಂತಹ ಸಂಸ್ಥೆ ಗಳು ಹಾಗೂ ಸಮಾಜದಲ್ಲಿ ಉಳ್ಳವರು ಬಡವರಿಗೆ ನೀಡಿದಾಗ ಬಡತನ ನಿರ್ಮೂಲನವಾಗಲು ಸಾಧ್ಯವಿದೆ. ಎಂದರು.
ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ
ಪ್ರಾಸ್ತಾವಿಕವಾಗಿ ಮಾತನಾಡಿ ಕಳೆದ 46 ತಿಂಗಳುಗಳಿಂದ ಸೇವಾಂಜಲಿ ಕ್ಷಯ ರೋಗಿಗಳಿಗೆ ಆಹಾರದ ಕಿಟ್ ವಿತರಿಸುತ್ತಿದ್ದು ಈವರೆಗೆ ಒಟ್ಟು 16 ಲಕ್ಷ ರೂ. ಖರ್ಚು ಮಾಡಿ 245 ಮಂದಿ ಕ್ಷಯ ರೋಗಿಗಳಿಗೆ ವಿತರಿಸಿದೆ ಎಂದು ತಿಳಿಸಿದರು.
ವೇದಿಕೆಯಲ್ಲಿ ಉಮಾ ಗೋವರ್ಧನ್ ರಾವ್, ಸೇವಾಂಜಲಿ ಪ್ರತಿಷ್ಠಾನದ ಟ್ರಸ್ಟಿ ನಾರಾಯಣ ಬಢ್ಡೂರು ಉಪಸ್ಥಿತರಿದ್ದರು
ಪ್ರಮುಖರಾದ ದೇವದಾಸ್ ಶೆಟ್ಟಿ ಕೊಡ್ಮಾಣ್, ಪ್ರಶಾಂತ್ ತುಂಬೆ, ಪದ್ಮನಾಭ ಶೆಟ್ಟಿ ಪುಂಚಮೆ, ದಿನೇಶ್ ಪ್ರಗತಿ,ಶಿವರಾಜ್ ಸುಜೀರ್,ಮೋಹನ್ ಸಾಲ್ಯಾನ್ ಬೆಂಜನಪದವು, ಮಧುರಾಜ್ ಶೆಟ್ಟಿ ಉಪಸ್ಥಿತರಿದ್ದರು. ಸುಕೇಶ್ ಶೆಟ್ಟಿ ತೇವು ಕಾರ್ಯಕ್ರಮ ನಿರೂಪಿಸಿದರು.















