ಎಡುವೆಂಚರ್ ಪಿಯು ಕಾಲೇಜಿನಲ್ಲಿ ಸಿ.ಎ ಫೌಂಡೇಶನ್ ಹಾಗೂ ಕಾಮರ್ಸ್ ಅಸೋಸಿಯೇಷನ್ ಉದ್ಘಾಟನೆ

Coastal Bulletin
ಎಡುವೆಂಚರ್ ಪಿಯು ಕಾಲೇಜಿನಲ್ಲಿ ಸಿ.ಎ ಫೌಂಡೇಶನ್ ಹಾಗೂ ಕಾಮರ್ಸ್ ಅಸೋಸಿಯೇಷನ್ ಉದ್ಘಾಟನೆ

ಬಂಟ್ವಾಳ :ತಾಲೂಕಿನ ಕಳ್ಳಿಗೆ ಗ್ರಾಮದ ನೆತ್ತರಕೆರೆ ಎಡುವೆಂಚರ್ ಪದವಿ ಪೂರ್ವ ಕಾಲೇಜಿನಲ್ಲಿ  ಸಿ.ಎ ಫೌಂಡೇಶನ್ ಹಾಗೂ ಕಾಮರ್ಸ್ ಅಸೋಸಿಯೇಷನ್ ಉದ್ಘಾಟನಾ ಕಾರ್ಯಕ್ರಮ ಜು.01 ರಂದು ಯಶಸ್ವಿಯಾಗಿ ನೆರವೇರಿತು.

ಕಾರ್ಯಕ್ರಮ “ಆರಂಭ – ಯಶಸ್ಸಿನ ಅಡಿಪಾಯ” ಎಂಬ ಶೀರ್ಷಿಕೆಯೊಂದಿಗೆ ಕಾಮರ್ಸ್ ಅಸೋಸಿಯೇಷನ್‌ಗೆ ಚಾಲನೆ ನೀಡಲಾಯಿತು. ಕಾಮರ್ಸ್ ವಿಭಾಗದ ಕಾರ್ಯಕ್ರಮ ಸಂಯೋಜನೆಯೊಂದಿಗೆ ವಿದ್ಯಾರ್ಥಿಗಳಲ್ಲಿ ನಾಯಕತ್ವ, ಸಂಘಟನೆ ಹಾಗೂ ವೃತ್ತಿ ಕೌಶಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಕಾರ್ಯಕ್ರಮ ರೂಪುಗೊಂಡಿತು.

ಪ್ರಾಂಶುಪಾಲ ಮಹೇಶ್ ಕೆ. ಎನ್. ಅವರು ವಿದ್ಯಾರ್ಥಿ ನಾಯಕರಿಗೆ ಪ್ರತಿಜ್ಞಾ ವಿಧಿಯನ್ನು ಬೋಧಿಸಿದರು. ವಿದ್ಯಾರ್ಥಿ ನಾಯಕರು ತಮ್ಮ ಜವಾಬ್ದಾರಿಗಳನ್ನು ನಿಷ್ಠೆಯಿಂದ ನಿರ್ವಹಿಸುವುದಾಗಿ ಪ್ರತಿಜ್ಞೆ ಸ್ವೀಕರಿಸಿದರು.

ಈ ಸಂದರ್ಭದಲ್ಲಿ ಕಾಮರ್ಸ್ ವಿಭಾಗದಿಂದ ಪ್ರಜ್ವಲ್ ಪೂಜಾರಿ ಮತ್ತು ಕೃಷ್ಮಾ ಶೆಟ್ಟಿ ಅವರನ್ನು ಪ್ರತಿನಿಧಿಗಳಾಗಿ ಘೋಷಿಸಲಾಯಿತು. ವಿದ್ಯಾರ್ಥಿಗಳಲ್ಲಿ ತಂಡ ಮನೋಭಾವ ಹಾಗೂ ಸೃಜನಶೀಲತೆಯನ್ನು ಉತ್ತೇಜಿಸಲು ಐಕ್ಯ, ಓಜಸ್, ಲಕ್ಷ್ಯ, ಸೃಜನ, ನಿವೇಶ ಮತ್ತು

ತರಂಗ ಎಂಬ ಆರು ತಂಡಗಳನ್ನು ರಚಿಸಲಾಯಿತು.

ಕಾರ್ಯದರ್ಶಿ ರಕ್ಷಿತಾ ಅಮೃತ್ ರೈ ಮಾತನಾಡಿ, ಕಾಮರ್ಸ್ ಶಿಕ್ಷಣದ ಪ್ರಾಮುಖ್ಯತೆಯನ್ನು ವಿವರಿಸಿ, ವಿದ್ಯಾರ್ಥಿಗಳು ಭವಿಷ್ಯದಲ್ಲಿ ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ಸಾಧಿಸಲು ಸಿ.ಎ ಫೌಂಡೇಶನ್ ಒಂದು ಬಲವಾದ ಹೆಜ್ಜೆಯಾಗಿದೆ ಎಂದು ತಿಳಿಸಿದರು.

ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಹಾಜರಾದ ಸಿ.ಎ ಸೃಜನ್ ಅವರು ತಮ್ಮ ಅನುಭವಗಳನ್ನು ಹಂಚಿಕೊಂಡು ಸಿ.ಎ ವೃತ್ತಿಯ ಅವಕಾಶಗಳು, ಸವಾಲುಗಳು ಹಾಗೂ ಯಶಸ್ಸಿನ ಮಾರ್ಗಗಳ ಕುರಿತು ವಿದ್ಯಾರ್ಥಿಗಳಿಗೆ ವಿಸ್ತೃತ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಟ್ರಸ್ಟಿ ಸಮತಾ ಕಿಶೋರ್ ಅವರು ಸೇರಿದಂತೆ ಬೋಧಕ ಹಾಗೂ ಬೋಧಕೇತರ ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು.

ಕೀರ್ತನಾ ರಾವ್ ಧನ್ಯವಾದವಿತ್ತು, ವಜ್ರಾಕ್ಷಿ  ನಿರೂಪಿಸಿದರು. ಕಾಮರ್ಸ್ ವಿಭಾಗ ಕಾರ್ಯಕ್ರಮ ಸಂಯೋಜಿಸಿತು.

Leave a Comment