ಲೊರೆಟ್ಟೋ ಹಿಲ್ಸ್  ರೋಟರಿ ಕ್ಲಬ್: ರೂ.30 ಲಕ್ಷ ವೆಚ್ಚದಲ್ಲಿ ಸಾಮಾಜಿಕ ಚಟುವಟಿಕೆ, ಜು.5ರಂದು ಪದಗ್ರಹಣ.

Coastal Bulletin
ಲೊರೆಟ್ಟೋ ಹಿಲ್ಸ್  ರೋಟರಿ ಕ್ಲಬ್: ರೂ.30 ಲಕ್ಷ ವೆಚ್ಚದಲ್ಲಿ ಸಾಮಾಜಿಕ ಚಟುವಟಿಕೆ, ಜು.5ರಂದು ಪದಗ್ರಹಣ.

ಬಂಟ್ವಾಳ:ಕಳೆದ ಎಂಟು ವರ್ಷಗಳ ಹಿಂದೆ ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್ ನೇತೃತ್ವದಲ್ಲಿ ಆರಂಭಗೊಂಡ ಬಂಟ್ವಾಳ ಲೊರೆಟ್ಟೊ ಹಿಲ್ಸ್ ರೋಟರಿ ಕ್ಲಬ್ 2025-26ನೇ ಸಾಲಿನಲ್ಲಿ ರೂ 30 ಲಕ್ಷ ವೆಚ್ಚದಲ್ಲಿ ನಡೆಸಲಾದ ವಿವಿಧ ಸಮಾಜಮುಖಿ ಸೇವಾ ಚಟುವಟಿಕೆ ಮತ್ತು ಕ್ಲಬ್ಬಿನ ಸಾಧನೆ ಪರಿಗಣಿಸಿ ರೋಟರಿ ಜಿಲ್ಲೆ 3181ರಲ್ಲಿ 'ಡೈಮಂಡ್ ಪ್ಲಸ್' ಪ್ರಶಸ್ತಿ ದೊರೆತಿದೆ ಎಂದು ಕ್ಲಬ್ಬಿನ ಅಧ್ಯಕ್ಷ ವಿಜಯ ಫೆರ್ನಾಂಡಿಸ್ ಲೊರೆಟ್ಟೊ ಹೇಳಿದರು.

ಇಲ್ಲಿನ ಬಿ.ಸಿ.ರೋಡಿನಲ್ಲಿ ಗುರುವಾರ ಸಂಜೆ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, 'ಒಟ್ಟು 55 ಮಂದಿ ಸದಸ್ಯರನ್ನು ಹೊಂದಿರುವ ನಮ್ಮ ಕ್ಲಬ್ ಬಂಟ್ವಾಳ ಕ್ಲಬ್ಬಿನ ನೇತೃತ್ವದಲ್ಲಿ ನರಿಕೊಂಬು ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ಅಂಧ ಕಲಾವಿದರ ಮನೆ ನಿರ್ಮಾ ಣಕ್ಕೆ ರೂ 1 ಲಕ್ಷ ಮೊತ್ತದ ಆರ್ಥಿಕ ನೆರವು ಹಸ್ತಾಂತರಿಸಿದೆ ಎಂದರು. ಪ್ರತೀ ವರ್ಷ ಪಲ್ಸ್ ಪೋಲಿಯೋ ಸಹಿತ ರೋಟರಿ ದತ್ತಿ ನಿಧಿಗೆ ಸದಸ್ಯರು ಗರಿಷ್ಟ ಮೊತ್ತದ ದೇಣಿಗೆ ನೀಡುತ್ತಿದ್ದು, ಈಗಾಗಲೇ ಲೊರೆಟ್ಟೋದಲ್ಲಿ ರೂ 1.50 ಲಕ್ಷ ವೆಚ್ಚದಲ್ಲಿ ಉಚಿತ್ ಬಸ್ ತಂಗುದಾಣ ನಿಮರ್ಾಣ ಸಹಿತ ಆರಂಬೋಡಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ರೂ 4.50 ಲಕ್ಷ ವೆಚ್ಚದಲ್ಲಿ ರಂಗಮಂದಿರ ನಿರ್ಮಿಸಿ ಲೋಕಾರ್ಪಣೆಗೊಂಡಿದೆ ಎಂದರು.

ಹಲವು ಮಂದಿ ಅನಾರೋಗ್ಯಪೀಡಿತರ ವೈದ್ಯಕೀಯ ಚಿಕಿತ್ಸೆಗಾಗಿ ರೂ 50 ಸಾವಿರ ಮೊತ್ತದ ಆರ್ಥಿಕ ನೆರವು ನೀಡಲಾಗಿದ್ದು, ವಿವಿಧ ಶಾಲೆಗಳಿಗೆ ರೂ 1 ಲಕ್ಷ ವೆಚ್ಚದಲ್ಲಿ ಉಚಿತ ಪುಸ್ತಕ, ಬ್ಯಾಗ್, ಕೊಡೆ, ಸ್ಕ್ವಾಡ್ ಡ್ರೆಸ್, ಕಪಾಟು, ಧ್ವನಿವರ್ಧಕ, ಹಣ್ಣಿನ ಗಿಡ, ಕುಡಿಯುವ ನೀರಿನ ಶುದ್ಧೀಕರಣ ಘಟಕ ವಿತರಿಸಲಾಗಿದೆ.

ವಿವಿಧ ಅಂಗನವಾಡಿ ಕೇಂದ್ರಕ್ಕೆ ರೂ 1 ಲಕ್ಷ ವೆಚ್ಚದಲ್ಲಿ ಧ್ವಜಸ್ತಂಭ, ಕಪಾಟು, ಪೋಡಿಯಂ ಕೊಡುಗೆ ಮತ್ತು ಇಂಟರ್ ಲಾಕ್ ಅಳವಡಿಸಲಾಗಿದೆ. ಜಿಲ್ಲಾ ಮಟ್ಟದ ಚೆಸ್ ಟೂರ್ನಿ, 'ರಸ್ತೆ ಸುರಕ್ಷತೆ' ಬಗ್ಗೆ ತಾಲೂಕು ಮಟ್ಟದ ಚಿತ್ರಕಲಾ ಸ್ಪರ್ಧೆ , ಸರ್ದಾರ್ ವಲ್ಲಭಬಾಯಿ ಪಟೇಲರ ಜನ್ಮ ದಿನಾಚರಣೆ ಪ್ರಯುಕ್ತ ಪೊಲೀಸ್ ಇಲಾಖೆ ಸಹಭಾಗಿತ್ವದಲ್ಲಿ 'ರಾಷ್ಟ್ರೀಯ ಏಕತಾ ದಿವಸ್ ಓಟ', ವಿದ್ಯಾರ್ಥಿಗಳಿಗೆ 'ಮಾದಕ ದ್ರವ್ಯ ಮತ್ತು ದುಶ್ಚಟಮುಕ್ತ ಸಮಾಜ ನಿರ್ಮಾಣ ' ಬಗ್ಗೆ ಜಾಗೃತಿ ಮಾಹಿತಿ ಶಿಬಿರ ನಡೆಸಲಾಗಿದೆ ಎಂದು ಅವರು ವಿವರಿಸಿದರು

.ಮಂಗಳೂರು ಎ.ಜೆ.ಆಸ್ಪತ್ರೆ ಸಹಭಾಗಿತ್ವದಲ್ಲಿ ವಿವಿಧ ಸರ್ಕಾರಿ ಮತ್ತು

ಖಾಸಗಿ ಪದವಿ ಪೂರ್ವ ಮತ್ತು ಪದವಿ ಕಾಲೇಜಿನಲ್ಲಿ 'ಹೃದಯಾಘಾತ ಬಗ್ಗೆ ಮುನ್ನೆಚ್ಚರಿಕೆ' ಮತ್ತು ಪ್ರಥಮ ಚಿಕಿತ್ಸೆ', ಬೇಸಿಕ್ ಲೈಫ್ ಸಪೋರ್ಟರ್ ಮತ್ತು ಸಿಪಿಆರ್ ಬಗ್ಗೆ ಪ್ರತ್ಯೇಕ ಮಾಹಿತಿ ಶಿಬಿರ ಹಾಗೂ ಪ್ರಾತ್ಯಕ್ಷಿಕೆ ನಡೆಸಲಾಗಿದೆ. ಸಿದ್ಧಕಟ್ಟೆ, ನರಿಕೊಂಬು ಮತ್ತು ರಾಯಿ ಯಲ್ಲಿ ವಿವಿಧ ಸಂಘ ಸಂಸ್ಥೆಗಳ ಸಹಭಾಗಿತ್ವದಲ್ಲಿ ಬೃಹತ್ ರಕ್ತದಾನ ಶಿಬಿರ ಮತ್ತು ವೈದ್ಯಕೀಯ ತಪಾಸಣೆ ಶಿಬಿರ ನಡೆಸಲಾಗಿದ್ದು, ಗರಿಷ್ಟ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ವಿತರಣೆ, ವಿವಿಧ ಕಾಲೇಜುಗಳಲ್ಲಿ 'ಶೈಕ್ಷಣಿಕ ಮತ್ತು ವೃತ್ತಿ ಮಾರ್ಗದರ್ಶನ' ಶಿಬಿರ ನಡೆಸಲಾಗಿದೆ. ಮಾತ್ರವಲ್ಲದೆ ಅವಿಭಜಿತ ಜಿಲ್ಲಾ ಮಟ್ಟದಲ್ಲಿ 'ರೋಟರಿ ಕಂಬಳ' ಆಯೋಜನೆ, ಪಾಳುಬಿದ್ದ 10 ಎಕರೆ ಗದ್ದೆಯಲ್ಲಿ ಭತ್ತದ ಬೇಸಾಯ ನಡೆಸುವ ಮೂಲಕ ಗಮನ ಸೆಳೆದಿದೆ. ಒಟ್ಟು 8 ವರ್ಷಗಳ ಅವಧಿಯಲ್ಲಿ ಸುಮಾರು ರೂ 2 ಕೋಟಿಗೂ ಮಿಕ್ಕಿ ಮೊತ್ತದ ವಿವಿಧ ಸೇವಾ ಚಟುವಟಿಕೆ ನಡೆಸಲಾಗಿದ್ದು, ಸತತ ಎರಡು ಬಾರಿ 'ಡೈಮಂಡ್ ಪ್ಲಸ್' ಪ್ರಶಸ್ತಿ ದೊರೆತಿದೆ ಎಂದು ಅವರು ತಿಳಿಸಿದರು.

ಜು.5ರಂದು ಪದಗ್ರಹಣ:

ನಮ್ಮ ಕ್ಲಬ್ಬಿನ ಸಭಾಂಗಣದಲ್ಲಿ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ಜು.5ರಂದು ಸಂಜೆ ಗಂಟೆ 6.30ಕ್ಕೆ ನಡೆಯಲಿದ್ದು, ಮಾಜಿ ಜಿಲ್ಲಾ ಗವರ್ನರ್ ಡಾ.ಕೆ.ರವಿ ಅಪ್ಪಾಜಿ ಅವರು ಪದಗ್ರಹಣ ನೆರವೇರಿಸುವರು ಎಂದು ನಿಯೋಜಿತ ಅಧ್ಯಕ್ಷೆ ಗೀತಾ ಪಿ.ಬಲ್ಲಾಳ್ ಮಾವಂತೂರು ಹೇಳಿದರು. ಮಾಜಿ ಜಿಲ್ಲಾ ಗವರ್ನರ್ ಎನ್.ಪ್ರಕಾಶ್ ಕಾರಂತ್, ಸಹಾಯಕ ಗವರ್ನರ್ ಶ್ರುತಿ ಮಾಡ್ತಾ, ವಲಯ ಸೇನಾನಿ ಗಣೇಶ ಶೆಟ್ಟಿ ಗೋಳ್ತಮಜಲು, ಸ್ಥಾಪಕಾಧ್ಯಕ್ಷ ಅವಿಲ್ ಮಿನೇಜಸ್ ಮತ್ತಿತರ ಗಣ್ಯರು ಭಾಗವಹಿಸುವರು ಎಂದು ಅವರು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ವಲಯ ಸೇನಾನಿ ರಾಮಚಂದ್ರ ಶೆಟ್ಟಿಗಾರ್ ಅಣ್ಣಳಿಕೆ, ಕಾರ್ಯದರ್ಶಿ ಮೋಹನ್ ಕೆ.ಶ್ರೀಯಾನ್ ರಾಯಿ, ನಿಯೋಜಿತ ಕಾರ್ಯದರ್ಶಿ ರೂಪಾ ರಾಜೇಶ್ ಶೆಟ್ಟಿ ಸೀತಾಳ ಇದ್ದರು.

Leave a Comment