ಬಿ ಸಿ ರೋಡ್ ಸಿಟಿ ರೋಟರಿ ಕ್ಲಬ್ ಗೆ ಅತ್ಯುನ್ನತ ಗೌರವ ಪ್ಲಾಟಿನಮ್ ಪ್ಲಸ್ ಪ್ರಶಸ್ತಿ.

Coastal Bulletin
ಬಿ ಸಿ ರೋಡ್ ಸಿಟಿ ರೋಟರಿ ಕ್ಲಬ್ ಗೆ ಅತ್ಯುನ್ನತ ಗೌರವ ಪ್ಲಾಟಿನಮ್ ಪ್ಲಸ್ ಪ್ರಶಸ್ತಿ.

ಬಂಟ್ವಾಳ :ಮೈಸೂರಿನಲ್ಲಿ ನಡೆದ ರೋಟರಿ ಜಿಲ್ಲೆ 3181 ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರೋಟರಿಯ ಅತ್ಯುನ್ನತ ಗೌರವ ಪ್ಲಾಟಿನಮ್ ಪ್ಲಸ್ ಪ್ರಶಸ್ತಿಯನ್ನು ರೋಟರಿ ಕ್ಲಬ್ ಬಿ ಸಿ ರೋಡ್ ಸಿಟಿ ಗೆ ಜಿಲ್ಲಾ ಗವರ್ನರ್ ರೊ. ಮೇಜರ್ ಡೊನರ್ ರಾಮಕೃಷ್ಣ ಪಿ ಕೆ ಯವರು ಕ್ಲಬ್ ನ ಪರವಾಗಿ ಅಧ್ಯಕ್ಷರಾದ ದಿವಾಕರ ಶೆಟ್ಟಿ ಯವರಿಗೆ  ಪ್ರಧಾನ ಮಾಡಿದರು.

ಈ ಸಂದರ್ಭದಲ್ಲಿ ನಿಯೋಜಿತ ಡಿ ಜಿ ಯವರಾದ ಸತೀಶ್ ಬೋಳಾರ್, ಯಶಸ್ವಿ ಸೋಮಶೇಖರ್, ಪಿ ಡಿ ಜಿ ವಿಕ್ರಮ್ ದತ್ತ,ಎ ಜಿ ಪದ್ಮನಾಭ ರೈ,

ನಿಕಟ ಪೂರ್ವ ಅಧ್ಯಕ್ಷ ರಾದ ಶೇಷಪ್ಪ ಮೂಲ್ಯ ಸದಸ್ಯರಾದ ಜೋತಿಂದ್ರ ಶೆಟ್ಟಿ, ದಯಾನಂದ ರೈ, ಸುಂದರ್ ಬಂಗೇರ, ಪ್ರಶಾಂತ್ ಕಾರಂತ್, ಗಣೇಶ್ ಶೆಟ್ಟಿ ಉಪಸ್ಥಿತರಿದ್ದರು.

Leave a Comment