ಮೇಷ ರಾಶಿ : ಈ ವಾರದ ಚಂದ್ರನ ಸಂಚಾರ ನಿಮಗೆ ಮಧ್ಯಮ ಫಲ ಕೊಡುತ್ತದೆ. ವಾರದ ಮೊದಲಲ್ಲಿ ಶುಭಫಲಗಳು, ಧನಲಾಭ ಇದೆ. ವಾರದ ಮಧ್ಯದಲ್ಲಿ ಆರೋಗ್ಯ ಕೆಡಬಹುದು ಜಾಗ್ರತೆ. ಹೊರಗಿನ ಆಹಾರ ಸೇವಿಸುವಾಗ ಎಚ್ಚರಿಕೆ ಇರಲಿ. ಯಾವುದಾದರೂ ನೀವು ಅಂದುಕೊಂಡ ಕೆಲಸಗಳು ಈಗ ಕೊಂಚ ನಿಧಾನವಾಗುತ್ತದೆ. ಬೇಸರ ಬೇಡ. ಮುಂದೆ ಒಳ್ಳೆಯ ಫಲಗಳು ಇವೆ. ವೃತ್ತಿಯಲ್ಲಿ ಸೌಖ್ಯ ಹಾಗೂ ಯಶಸ್ಸು ಇದೆ.
ವೃಷಭ ರಾಶಿ : ಈ ವಾರ ನಿಮಗೆ ಅಂದುಕೊಂಡ ಕೆಲಸಗಳು ನೆರವೇರುತ್ತದೆ. ಮನೆಗೆ ಬಂಧು ಬಾಂಧವರ ಆಗಮನದಿಂದ ಮನಸ್ಸಿಗೆ ಹರ್ಷ. ವೃತ್ತಿ ಹರ್ಷದಾಯಕ ವಾತಾವರಣ ಇದೆ. ಬಡ್ತಿ ಅಥವಾ ವೇತನ ಹೆಚ್ಚಳದಿಂದ ಮನಸ್ಸಿಗೆ ಖುಷಿ ಇದೆ. ದೇವರ ಅಥವಾ ಧರ್ಮದ ಕೆಲಸಗಳಿಗೆ ಖರ್ಚು ಮಾಡುತ್ತೀರಿ. ನಿಮ್ಮ ವಲಯದಲ್ಲಿ ನಿಮಗೆ ಒಂದು ವಿನೂತನ ಸ್ಥಾನಮಾನ ಸಿಗುತ್ತದೆ.
ಮಿಥುನ ರಾಶಿ: ಈ ವಾರ ಮನಸ್ಸಿಗೆ ಸಂತಸ ತರುವಂಥ ಸಂಗತಿಗಳು ನಡೆಯುತ್ತದೆ. ಬಹು ದಿನಗಳಿಂದ ಕಾದಿದ್ದ ಸುದ್ದಿಯೊಂದು ನಿಮ್ಮ ಕಿವಿಗೆ ಬೀಳುತ್ತದೆ. ಹಣದ ಹರಿವು ಉತ್ತಮವಾಗಿದೆ. ಬಾಕಿಯಾಗಿದ್ದ ಹಣ ವಸೂಲಾಗುತ್ತದೆ. ಧರ್ಮ ಕಾರ್ಯಕ್ಕೆ ಹಣ ಸದುಪಯೋಗ ಮಾಡುತ್ತೀರಿ. ಸಂತಾನದಿಂದ ಮನಸ್ಸಿಗೆ ಸಂತಸ ಇದೆ. ಯಾವುದೋ ಬೇಡದ ಖರ್ಚಿಗೆ ಹಣ ಖರ್ಚು ಮಾಡಿ ನಷ್ಟ ಅನುಭವಿಸುವ ಸಾಧ್ಯತೆ ಇದೆ. ಈ ವಾರ ಯಾವುದೇ ಹೂಡಿಕೆ ಬೇಡ.
ಕಟಕ ರಾಶಿ :ಈ ವಾರದ ಮೊದಲಲ್ಲಿ ಅಂದುಕೊಂಡ ಕಾರ್ಯ ಸಫಲವಾಗದೆ ಬೇಸರ ಇದೆ. ವಾರದ ಮಧ್ಯೆ ಧನಲಾಭ ಇದೆ. ಹನ್ನೊಂದರಲ್ಲಿ ಸೂರ್ಯ ಬುಧ ನಿಮಗೆ ಲಾಭವನ್ನು ಕೊಡುತ್ತಾರೆ. ಮಾತಿನಿಂದ ಯಶಸ್ಸು ಇದೆ. ಮಾರ್ಕೆಟಿಂಗ್ ವಿಭಾಗದಲ್ಲಿ ಕೆಲಸ ಮಾಡುವವರಿಗೆ ಲಾಭ ಇದೆ. ಎಲೆಕ್ಟ್ರಾನಿಕ್ ಹಾಗೂ ಅಕೌಂಟ್ಸ್ ವಿಭಾಗದಲ್ಲಿ ಕೆಲಸ ಮಾಡುವವರಿಗೆ ಯಶಸ್ಸು ಇದೆ. ಹೊಸ ಹೊಸ ಪ್ರಾಜೆಕ್ಟ್‌ಗಳು ಬರುವ ಸಮಯ. ಬುದ್ಧಿವಂತಿಕೆಯಿಂದ ನಿಭಾಯಿಸಿ.
ಸಿಂಹ ರಾಶಿ : ನೀವು ಅಂದುಕೊಂಡ ಯೋಜನೆಗಳು ತಲೆಕೆಳಗಾಗಬಹುದು. ಅಧೀರರಾಗಬೇಡಿ. ಈಗ ನಿಮಗೆ ಗುರುಬಲ ಇದೆ. ಹೀಗಾಗಿ ಕಾರ್ಯ ತಡವಾದರೂ ಆಗುತ್ತದೆ. ಹನ್ನೊಂದನೇ ಮನೆಯಲ್ಲಿ ಸೂರ್ಯ ಬುಧ ಅಧಿಕ ಧನ ಲಾಭವನ್ನು ಕೊಡುತ್ತಾರೆ. ಸರಕಾರದಿಂದ ಲಾಭ ಇದೆ. ವೃತ್ತಿಯಲ್ಲಿ ಮುನ್ನಡೆ ಇದೆ.
ಕನ್ಯಾ ರಾಶಿ : ಈಗ ನಿಮಗೆ ಅರ್ಧ ಒಳ್ಳೆಯ ಸಮಯ. ಶತಕ ಬಾರಿಸುವ ಹುಮ್ಮಸ್ಸು ಇದ್ದರೂ ಅರ್ಧ ಶತಕಕ್ಕೆ ತೃಪ್ತಿ ಪಟ್ಟುಕೊಳ್ಳಬೇಕಾಗುತ್ತದೆ. ಹಣದ ಹರಿವು ಉತ್ತಮವಾಗಿದ್ದರೂ ಒತ್ತಡ ಇದೆ. ಒಂಬತ್ತರಲ್ಲಿ ಸೂರ್ಯ ಬುಧ ಭಾಗ್ಯಗಳನ್ನು ಕೊಡುತ್ತಾರೆ. ಈ ವಾರದ ಚಂದ್ರನ ಸಂಚಾರ ಸಹ ನಿಮಗೆ ಶುಭ ಫಲಗಳನ್ನು ನೀಡುತ್ತದೆ. ಹನ್ನೊಂದರಲ್ಲಿ ಕುಜ- ಶುಕ್ರ ಸಹ ನಿಮಗೆ ಸಹಕಾರ ಕೊಡುತ್ತಾರೆ.
ತುಲಾ ರಾಶಿ : ವಾರದ
ಮೊದಲಲ್ಲಿ ಧನಲಾಭ. ಸಹೋದರಿಯರಿಂದ ಲಾಭ. ಏಳರಲ್ಲಿ ಗುರು ಇರುವುದು ನಿಮ್ಮ ವೈಯುಕ್ತಿಕ ಬೆಳವಣಿಗೆಗೆ ಬಹಳ ಸಹಕಾರಿ. ನಿಮ್ಮ ಪ್ರತಿಭೆ ನಿಮ್ಮ ಕೆಲಸ ಚಟುವಟಿಕೆಗಳು ಸಮಾಜದ ಗಮನ ಸೆಳೆಯುತ್ತದೆ. ಪ್ರಶಸ್ತಿ ಸನ್ಮಾನಗಳು ಹುಡುಕಿ ಬರುತ್ತದೆ. ವೃತ್ತಿಯಲ್ಲಿ ಯಶಸ್ಸಿದೆ. ಶನಿ ಐದನೇ ಮನೆಯಲ್ಲಿ ಇರುವುದರಿಂದ ಕೆಲಸ ಕಾರ್ಯಗಳು ಕೊಂಚ ನಿಧಾನಗತಿ.
ವೃಶ್ಚಿಕ ರಾಶಿ : ವಾರದ ಮೊದಲಲ್ಲಿ ದೇಹ ಮನಸ್ಸು ಉಲ್ಲಸಿತವಾಗಿರುತ್ತದೆ. ಧನಲಾಭವೂ ಇದೆ. ಆರನೇ ಮನೆಯ ರಾಹು ಶಕ್ತಿ ಸಾಮರ್ಥ್ಯ ಕೊಟ್ಟು ಮುಂದಕ್ಕೆ ನಡೆಸಿಕೊಂಡು ಹೋಗುತ್ತಾನೆ. ಮನೆಯಲ್ಲಿ ಮದುವೆ ಅಥವಾ ಶುಭಕಾರ್ಯದ ತಯಾರಿ ಇದೆ. ಭಾಗ್ಯದಲ್ಲಿ ಶುಕ್ರ ಧನ, ವಸ್ತ್ರ ಚಿನ್ನಾಭರಣ ಮೊದಲಾದ ಸೌಖ್ಯ ಸೌಕರ್ಯಗಳನ್ನು ಕೊಡುತ್ತಾನೆ. ವೃತ್ತಿಯಲ್ಲಿ ಯಶಸ್ಸು ಇದ್ದರೂ ಒತ್ತಡ ಬಹಳಇದೆ. ಸಮಾಧಾನದಿಂದ ನಿಭಾಯಿಸಿ.
ಧನಸ್ಸು ರಾಶಿ : ವಾರದ ಮೊದಲಲ್ಲಿ ನಿಮ್ಮದೇ ಯಾವುದೋ ಕೆಲಸಕ್ಕೆ ಹಣ ಖರ್ಚು ಮಾಡಬೇಕಾಗಿ ಬರುತ್ತದೆ. ವಾರದ ಕೊನೆಯಲ್ಲಿ ಧನಲಾಭ ಇದೆ. ಸಂತಾನದಿಂದ ಕೊಂಚ ಮನಸ್ಸಿಗೆ ಇರಿಸುಮುರಿಸು. ಅಂದುಕೊಂಡ ಕೆಲಸಗಳು ಸುಸೂತ್ರವಾಗಿ ನಡೆಯುತ್ತದೆ. ಪ್ರವಾಸ ವಿಹಾರ ಹೋಗುವಿರಿ.
ಮಕರ ರಾಶಿ : ವ್ಯವಸಾಯೋತ್ಪನ್ನಗಳಿಂದ ಹಣ ಬರುವ ಸಾಧ್ಯತೆ ಇದೆ. ಅವಕಾಶಗಳು ಕೈಗೆಟುಕಿದಂತೆ ಇದ್ದು ನುಣುಚಿಕೊಳ್ಳುತ್ತಿದೆ. ಗಾಬರಿಬೇಡ. ಸ್ವಲ್ಪ ದಿನಗಳು ಕಳೆಯಲಿ ಖಂಡಿತಾ ಬದಲಾವಣೆ ಇದೆ. ಈಗ ಐದರ ಸೂರ್ಯ ಬುಧ ನಿಮಗೆ ಬೆಂಬಲವಾಗಿ ಇದ್ದಾರೆ. ಬಂಧುಗಳಿಂದ ಸಹಕಾರ ಸಿಗುತ್ತದೆ. ಸ್ರ್ತೀ ಮೂಲದಿಂದ ಬೆಂಬಲ ಸಹಾಯ ಇದೆ.
ಕುಂಭ ರಾಶಿ :ಪ್ರಯತ್ನದಿಂದ ಫಲ. ಅಲ್ಪ ಪ್ರಯತ್ನದಿಂದಲೂ ಫಲ ದೊರೆಯುತ್ತದೆ. ಸಹೋದರ ವರ್ಗದಿಂದ ಸಹಾಯ ಇದೆ. ಕೊಂಚ ನೆಮ್ಮದಿಕೆಡಿಸುವಂತ ಕಿರಿಕಿರಿ ಆಗುವಂತ ಸಂಗತಿಗಳು ನಡೆದರೂ ನೀವು ಎದೆಗುಂದುವುದಿಲ್ಲ. ಅವೆಲ್ಲ ದಾಟಿಕೊಂಡು ಮುನ್ನಡೆಯುತ್ತೀರಿ. ಜ್ಞಾನವೃದ್ಧಿಗೆ ಅವಕಾಶ ಇದೆ. ಸಜ್ಜನರ ಜೊತೆ ಮಾತುಕತೆ ಅವಕಾಶ ಇದೆ. ಹಣದ ಹರಿವು ಉತ್ತಮವಾಗಿದೆ.
ಮೀನ ರಾಶಿ : ಈಗ ನಿಮ್ಮ ಇಷ್ಟಾರ್ಥ ಸಿದ್ಧಿಯಾಗುವ ಸಮಯ. ಕಳೆದ ವರ್ಷದ ನಿಂತುಹೋದ ಕೆಲಸಗಳೆಲ್ಲ ಈಗ ಮರುಚಾಲನೆ ಪಡೆದು ಚುರುಕಾಗುತ್ತದೆ. ಸಂಗಾತಿಯೊಡನೆ ವಿಹಾರ ಪ್ರವಾಸ ಮೊದಲಾದ ಉಲ್ಲಾಸಕರ ಸಂಗತಿಗಳು ಇವೆ. ಮೂರರ ಸೂರ್ಯ ಪರಾಕ್ರಮ ಕೊಡುತ್ತಾನೆ. ಈ ಶಕ್ತಿಯನ್ನು ಉಪಯೋಗ ಮಾಡಿಕೊಳ್ಳಿ. ಐದರಲ್ಲಿ ಶುಕ್ರ ಧನಲಾಭ ಆಭರಣ ಲಾಭ ಕೊಡಿಸುತ್ತಾನೆ.















