Coastal Bulletin

ಮೇಷ ರಾಶಿ : ಮೇಷ ರಾಶಿಯಲ್ಲೇ ಇರುವ ಬುಧ ರಾಹು ಗುರುವಿನಿಂದ ಕಿರಿಕಿರಿಗಳೇ ಹೆಚ್ಚು. ಎರಡನೇ ಮನೆ ಸೂರ್ಯ ಕುಟುಂಬದಲ್ಲಿ ಒತ್ತಡವನ್ನು ಕೊಡುತ್ತಾನೆ. ಮೂರರ ಶುಕ್ರನಿಂದ ಹಣಕಾಸಿಗೆ ಅನುಕೂಲವಾಗುತ್ತದೆ. ಪ್ರಿಯ ವಾರ್ತೆ ಕೇಳುತ್ತೀರಿ. ನಾಲ್ಕರ ಕುಜ ನೀಚನಾಗಿರುವುದರಿಂದ ಉಪಯೋಗ ಇಲ್ಲ. ತಾಯಿಯ ಆರೋಗ್ಯಕ್ಕೆ ತೊಂದರೆ ಇದೆ.

ವೃಷಭ ರಾಶಿ : ಈಗ ವ್ಯಯಸ್ಥಾನದಲ್ಲಿ ಮೂರು ಗ್ರಹಗಳು ಸೇರಿ ಖರ್ಚು ಹೆಚ್ಚಾಗುವ ಸಮಯ. ಆದರೆ ಧರ್ಮ ದೇವರು ಮುಂತಾದ ಪುಣ್ಯದ ಕೆಲಸಕ್ಕೆ ಖರ್ಚಾಗುತ್ತದೆ. ಎರಡನೇ ಮನೆಯಲ್ಲಿ ಶುಕ್ರ ಹಣದ ಹರಿವನ್ನು ಹೆಚ್ಚು ಮಾಡುತ್ತಾನೆ. ಅಲಂಕಾರ ಸಾಮಗ್ರಿಗಳಿಗೆ ಖರ್ಚು ಮಾಡುತ್ತೀರಿ. ಗೃಹಾಲಂಕಾರಕ್ಕೆ ಖರ್ಚು ಮಾಡುತ್ತೀರಿ.‌ ಕುಟುಂಬ ಸೌಖ್ಯ ಚೆನ್ನಾಗಿದೆ.

ಮಿಥುನ ರಾಶಿ : ಲಾಭಸ್ಥಾನದಲ್ಲಿ ಮೂರು ಗ್ರಹಗಳು ನಿಮಗೆ ಅಧಿಕ ಧನ ಲಾಭವನ್ನು ತರುತ್ತದೆ. ನೀವು ಅಂದುಕೊಂಡ ಕೆಲಸಗಳು‌ ಯಾವುದೇ ತೊಂದರೆ ಇಲ್ಲದೇ ಮುನ್ನಡೆಯಲು ಈ ಗ್ರಹಗಳು ಸಹಾಯ ಮಾಡುತ್ತವೆ. ನಿಮ್ಮ ರಾಶಿಯಲ್ಲೇ ಇರುವ ಶುಕ್ರ ನಿಮಗೆ ತಂಪಿನ ಅನುಭವ ಕೊಡುತ್ತಾನೆ.‌ ಒತ್ತಡಗಳನ್ನು ಕಡಿಮೆ ಮಾಡುತ್ತಾನೆ. ‌

ಕಟಕ ರಾಶಿ : ವ್ಯಯ ಸ್ಥಾನದಲ್ಲಿ ಶುಕ್ರ ಐಷಾರಾಮಿ ಹಾಗೂ ಅಲಂಕಾರ ವಸ್ತುಗಳಿಗೆ ಖರ್ಚು ಮಾಡಿಸುತ್ತಾನೆ. ಹನ್ನೊಂದರ ಸೂರ್ಯ ನಿಮಗೆ ಸರ್ಕಾರದಿಂದ ಲಾಭವನ್ನು ಕೊಡಿಸುತ್ತಾನೆ. ದೊಡ್ಡ ಅಧಿಕಾರಿಗಳಿಗೆ ಯಶಸ್ಸಿದೆ. ಹತ್ತರ ಗುರು ಬುಧ ರಾಹು ನೌಕರಿಯಲ್ಲಿ ಒತ್ತಡವನ್ನು ಕೊಡುತ್ತಾರೆ. ಕೋಪ ಕಿರಿಕಿರಿ ಇರುತ್ತದೆ.

ಸಿಂಹ ರಾಶಿ : ಭಾಗ್ಯಸ್ಥಾನದಲ್ಲಿ ಮೂರು ಗ್ರಹಗಳು ಇದ್ದು ಪರಸ್ಪರ ವೈರಿಗಳಾಗಿರುವುದರಿಂದ ನಿಮಗೆ ಕೊಂಚ ಮಟ್ಟಿಗೆ ಕಿರಿಕಿರಿಯನ್ನು ಕೊಡುತ್ತಾರೆ. ಆಗ ಬೇಕಾದ ಕೆಲಸಕ್ಕೆ ಹತ್ತಾರು ವಿಘ್ನಗಳು. ರಾಹು ಮೇಷರಾಶಿ ಬಿಟ್ಟು ಮೀನ ರಾಶಿಗೆ ಹೋಗುವವರೆಗೂ ನಿಮ್ಮ ಭಾಗ್ಯ ಸಂಪೂರ್ಣ ತೆರೆಯುವುದಿಲ್ಲ. ಗುರು ಇದ್ದರೂ ಎರಡು ವೈರಿ ಗ್ರಹಗಳ ಜೊತೆ ಗುರು ಅಸಹಾಯಕನಾಗಿದ್ದಾನೆ.

ಕನ್ಯಾ ರಾಶಿ : ಈಗ ನಿಮಗೆ ಕೈಗೆ ಬಂದ ತುತ್ತು ಬಾಯಿಗೆ ಬರುವುದಿಲ್ಲ ಎನ್ನುವಂತಹ ಪರಿಸ್ಥಿತಿ. ಆರೋಗ್ಯವೂ ಕೈ ಕೊಡುತ್ತದೆ. ಮೂರು ಪರಸ್ಪರ ವೈರಿ ಗ್ರಹಗಳು ಎಂಟನೇ ಮನೆಯಲ್ಲಿ ನಿಮ್ಮ ವಿರುದ್ಧ ಸಂಚು ರೂಪಿಸುತ್ತಿದ್ದಾರೆ. ದತ್ತಾತ್ರೇಯ ಪೂಜೆ ಮಾಡಿ. ಮನೆ ದೇವರಿಗೆ ಹೋಗಿಬನ್ನಿ.‌ ಒಂಬತ್ತರಲ್ಲಿ ಸೂರ್ಯ ಹತ್ತರಲ್ಲಿ ಶುಕ್ರ ಅಲ್ಪ ಬಲವನ್ನು ನೀಡುತ್ತಾರೆ.

ತುಲಾ ರಾಶಿ : ನಿಮಗೆ ಈಗ ಗುರು ಬಲ ಇದೆ. ವೈರಿ ಗ್ರಹಗಳು ಮೂರು ಏಳನೇ ಮನೆಯಲ್ಲಿ ಇದ್ದರೂ ಬುಧ ರಾಹು ತುಲಾ ರಾಶಿಗೆ ಆಪ್ತರು. ಹಾಗಾಗಿ ಮೂರೂ ಗ್ರಹಗಳೂ ನಿಮಗೆ ಒಳಿತನ್ನೇ ಬಯಸುತ್ತದೆ.

ಕಳೆದುಕೊಂಡ ಅಧಿಕಾರ ಮರಳಿ ಸಿಗುತ್ತದೆ. ಅವಿವಾಹಿತರಿಗೆ ವಿವಾಹ ಯೋಗ ಇದೆ. ಪ್ರಶಸ್ತಿ ಸನ್ಮಾನ ಅರ್ಹರಿಗೆ ಸಿಗುತ್ತದೆ. ವಿದ್ಯಾರ್ಥಿಗಳಿಗೂ ಶುಭವಿದೆ. ನಿಮಗೆ ಬೇಕೆನಿಸಿದ ಕೋರ್ಸ್ ಓದಲು ಇದು ಸಕಾಲ. 

ವೃಶ್ಚಿಕ ರಾಶಿ : ಆರನೇ ಮನೆಯ ಗುರು ನಿಮಗೆ ಪ್ರಯೋಜನಕಾರನಲ್ಲ. ಆದರೆ ಆರರ ರಾಹು ಮತ್ತು ಬುಧ ನಿಮಗೆ ಉಪಕಾರಿ ಆಗಿದ್ದಾರೆ. ‌ರಾಹು ಮತ್ತು ಬುಧ ಇಬ್ಬರೂ ಹಣದ ಹರಿವನ್ನು ಉತ್ತಮ ಪಡಿಸುತ್ತಾರೆ. ಎಂಟರ ಶುಕ್ರ ನಿಮಗೆ ಪ್ರಿಯ ವಾರ್ತೆಯನ್ನು ಕೇಳಿಸುತ್ತಾನೆ.

ಧನಸ್ಸು ರಾಶಿ : ಗುರು ಐದನೇ ಮನೆಗೆ ಬಂದಿದ್ದರೂ ಗುರುವಿನಿಂದ ಅರ್ಧ ಪ್ರಯೋಜನ ಸಿಗುತ್ತಿದೆ. ಗುರುವಿನ‌ ಜೊತೆ ರಾಹು ಬುಧ ಇದ್ದಾರೆ. ಗುರು ಮುಂದೆ ತಳ್ಳಿದರೂ ರಾಹು ಹಿಂದಕ್ಕೆ ಎಳೆಯುತ್ತಾನೆ. ಹೀಗೆ ಹಗ್ಗಜಗ್ಗಾಟದಲ್ಲಿ ಸಾಗಿದೆ. ಆದರೆ ಶನಿ ಬಲ ಇರುವುದರಿಂದ ಹಣದ ಹರಿವು ಮತ್ತು ಅಭಿವೃದ್ಧಿಗೆ ಉತ್ತಮ ಅವಕಾಶಗಳು ಇವೆ.‌ ಏಳರಲ್ಲಿ ಶುಕ್ರ ಇರುವುದರಿಂದ ಅವಿವಾಹಿತರಿಗೆ ವಿವಾಹದ ಮಾತುಕತೆಗಳು ನಡೆಯಬಹುದು, ಪ್ರೇಮ ನಿವೇದನೆಗೆ ಜಯ ಸಿಗಬಹುದು. 

ಮಕರ ರಾಶಿ : ಈಗ ಒಂದು ಬದಲಾವಣೆಯ ಯೋಗ ಇದೆ. ಇದನ್ನು ನೀವು ನಿಮಗೆ ಅನುಕೂಲವಾಗುವಂತೆ ಪರಿವರ್ತಿಸಿಕೊಂಡರೆ ಯಶಸ್ಸಿದೆ. ನಾಲ್ಕರಲ್ಲಿ ಮೂರು ಗ್ರಹಗಳು ಸೇರಿ‌ ಸ್ವಲ್ಪ ಕಿರಿಕಿರಿ ಇದೆ. ಕೆಳ ಸ್ಥಾನದಲ್ಲಿ ಇರುವ ಕುಜ ಕೂಡ ಸಂಗಾತಿಯೊಡನೆ ಮನಸ್ತಾಪ ಮಾಡಿಸಬಹುದು.‌ ಆದಷ್ಟು ವಾಗ್ವಾದಕ್ಕೆ ಅವಕಾಶ ಕೊಡಬೇಡಿ. ಸ್ತ್ರೀ ಸಹಾಯ ಒದಗಿಬರುತ್ತದೆ.

ಕುಂಭ ರಾಶಿ : ಹಿಡಿದ ಪಟ್ಟು ಬಿಡದಂಥ ಮನಸ್ಸು ನಿಮ್ಮದು. ಸುಲಭಕ್ಕೆ ಯಾವುದನ್ನೂ ಬಿಟ್ಟುಕೊಡುವವರಲ್ಲ. ನೀವು ಬಯಸಿದ್ದೇ ಆಗಬೇಕೆಂಬ ಹಠ. ಅದನ್ನು ಸಾಧಿಸಿಕೊಳ್ಳುತ್ತೀರಿ ಕೂಡ. ನಿಮ್ಮ ಅಭಿಪ್ರಾಯಕ್ಕೆ ಎಲ್ಲರೂ ತಲೆಬಾಗಬೇಕು ಹಾಗೆ ಪಟ್ಟುಗಳನ್ನು ಹಿಡಿಯುತ್ತೀರಿ. ಈಗ ರಾಹುಬಲ ಇದೆ. ನಿಮ್ಮ‌ ಧೈರ್ಯ ಸಾಹಸಕ್ಕೆ ರಾಹು ಸಾಥ್ ಕೊಡುತ್ತಾನೆ. 

ಮೀನ ರಾಶಿ : ಒಂದು ದೊಡ್ಡ ಜವಾಬ್ದಾರಿ ನಿಮ್ಮ ಹೆಗಲೇರುತ್ತದೆ. ಎಂತಹ ಇಕ್ಕಟ್ಟಿನ ಪರಿಸ್ಥಿತಿಯಲ್ಲೂ ನಿಮಗೆ ಕೇಡಾಗದಂತೆ ನುಣುಚಿಕೊಳ್ಳುತ್ತೀರಿ. ಈಗ ಗುರುಬಲ ನಿಮಗೆ ಸಾಥ್ ಕೊಡುತ್ತಿದೆ. ಕುಟುಂಬದಲ್ಲಿ ಸಮಾಧಾನ ಸಂತೋಷ ನೆಲೆಸಿರುತ್ತದೆ. ‌ಪ್ರಯಾಣ ಮಾಡುವಾಗ ಕೊಂಚ ಎಚ್ಚರಿಕೆ ಇರಲಿ. ನಾಲ್ಕರ ಶುಕ್ರ ವಾಹನದಿಂದ ಲಾಭ ಕೊಡುತ್ತಾನೆ.

Leave a Comment