ಬಂಟ್ವಾಳ :ತಾಲೂಕಿನ ಬೆಂಜನಪದವು ಶ್ರೀ ಭದ್ರಕಾಳಿ ದೇವಸ್ಥಾನದಲ್ಲಿ ಮೇ.20 ರಿಂದ 25ರವರೆಗೆ ನಡೆಯಲಿರುವ ಶ್ರೀ ಭದ್ರಕಾಳಿ ದೇವರ ಹಾಗೂ ಸಪರಿವಾರ ದೈವದೇವರುಗಳ ಪುನರ್ ಪ್ರತಿಷ್ಟಾ ಬ್ರಹ್ಮಕಲಶದ ಪೂರ್ವಭಾವಿಯಾಗಿ ಮೇ 21ರಂದು ಭಾನುವಾರ ಸಂಜೆ ವೈಭವದ ಹಸಿರು ಹೊರೆಕಾಣಿಕೆ ಮೆರವಣಿಗೆ ನಡೆಯಿತು.
ಕಲ್ಪನೆ ಜಂಕ್ಷನ್ನಿಂದ ವಿವಿಧ ವಾದ್ಯಘೋಷಗಳೊಂದಿಗೆ ಹೊರಟ ಮೆರವಣಿಗೆಯಲ್ಲಿ, ಕಳಶ ಹೊತ್ತ ಸಮವಸ್ತ್ರದಾರಿ ಮಾತೆಯರ ಸಹಿತ ಕುಣಿತಭಜನೆ, ಗೊಂಬೆ, ಕೀಲುಕುದುರೆ, ಚೆಂಡೆ,ಕೊಂಬು,ತಾಲಿಮು, ಊರ ಪರವೂರ ಸಾವಿರಾರು ಭಕ್ತರು, ಸುಮಾರು 50ಕ್ಕೋ ಹೆಚ್ಚು ಹೊರೆಕಾಣಿಕೆ ಹೊತ್ತ ವಾಹನಗಳು ಪಾಲ್ಗೊಂಡು ಮೆರವಣಿಗೆಯ ಮೆರಗನ್ನು ಇನ್ನಷ್ಟು ಹೆಚ್ಚಿಸಿದರು.
ಕಲ್ಪನೆ ಜಂಕ್ಷನ್ನಿನಲ್ಲಿ ಕೆನರಾ ಪದವಿ ಪೂರ್ವ ಕಾಲೇಜಿನ ನಿವೃತ್ತ ಪ್ರಾಚಾರ್ಯರಾದ ಜಿ ಶಂಕರ್ ಶೆಟ್ಟಿ ಗುಂಡೀಲಗುತ್ತು ಮೆರವಣಿಗೆಗೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಪುನರ್ನಿರ್ಮಾಣ ಸಮಿತಿ ಅಧ್ಯಕ್ಷರಾದ ಕೆ ಪಿ ಶೆಟ್ಟಿ, ಪ್ರ.ಕಾರ್ಯಧ್ಯಕ್ಷ ಉಮೇಶ್ ಸಾಲಿಯಾನ್ ಬ್ರಹ್ಮಕಲಶೋತ್ಸವ
ಸಮಿತಿ ಅಧ್ಯಕ್ಷರಾದ ಭುವನೇಶ್ ಪಚ್ಚಿನಡ್ಕ, ಧರ್ಮದರ್ಶಿ ರಮೇಶ್ ಬಿ.ಬೆಂಜನಪದವು, ಪ್ರದಾನ ಕಾರ್ಯದರ್ಶಿ ಪ್ರವೀಣ್ ಬಾಬಾ, ಪ್ರಧಾನ ಸಂಚಾಲಕರಾದ ತಾರಾನಾಥ ಕೊಟ್ಟಾರಿ ತೇವು,ಶ್ರೀ ಭದ್ರಕಾಳೀ ಸೇವಾಸಮಿತಿ ಗೌರವಾಧ್ಯಕ್ಷ ಈಶ್ವರ ಬೆಳ್ಚಡ ಬೆಂಜನಪದವು, ಪ್ರ.ಕಾರ್ಯದರ್ಶಿ ಬಿ.ಜರ್ನಾಧನ ಅಮ್ಮುಂಜೆ, ಪ್ರ.ಕಾರ್ಯದರ್ಶಿ ಚಂದ್ರಶೇಖರ ಸುವರ್ಣ, ಶ್ರೀ ಗುಳಿಗಪಾತ್ರಿ ಬಾಬುಕೊಟ್ಟಾರಿ ವಳಚ್ಚಿಲ್, ಮಹಿಳಾ ಸಮಿತಿ ಅಧ್ಯಕ್ಷೆ ರೇಖಾ ಉಮೇಶ್ ಸಾಲ್ಯಾನ್, ವಿಜಯ ಕೊರಗಜ್ಜ ಸನ್ನಿದಿ,ರಾಮದಾಸ್ ಸಾಲ್ಯಾನ್, ಸುರೇಶ ಸಾಲ್ಯಾನ್, ,ಯುವ ವೇದಿಕೆಯ ಸಂದೀಪ್ ಬಿ,ಸಮಿತಿ ಯ ರಾಮಚಂದ್ರ ಮಾರಿಪಲ್ಲ, ದಾಮೋದರ ಕೋಟ್ಯಾನ್ ತುಂಗ, ಹಾಗೂ ವಿವಿಧ ಘಟಕಗಳ ಹಾಗೂ ಉಪಸಮಿತಿ ಪದಾಧಿಕಾರಿಗಳು ಪಾಲ್ಗೊಂಡಿದ್ದರು.















