ಬಂಟ್ವಾಳ :ಮತದಾರರ ಪಟ್ಟಿಯ ಸಮಗ್ರ ಪರಿಶೀಲನೆಗೆ ಚಾಲನೆ.

Coastal Bulletin
ಬಂಟ್ವಾಳ :ಮತದಾರರ ಪಟ್ಟಿಯ ಸಮಗ್ರ ಪರಿಶೀಲನೆಗೆ ಚಾಲನೆ.

ಬಂಟ್ವಾಳ :ಮತದಾರರ ಪಟ್ಟಿಯ ಸಮಗ್ರ ಪರಿಶೀಲನೆ ಕಾರ್ಯಕ್ರಮವನ್ನು ಬಂಟ್ವಾಳ ತಾಲೂಕಿನಲ್ಲಿ ಜೂ 30ರಂದು ರಂದು ಪ್ರಾರಂಭಿಸಲಾಯಿತು.

ಬಂಟ್ವಾಳ ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ 130 ರಲ್ಲಿಯ ಬಿ.ಮೂಡ ಗ್ರಾಮದ ಬಸ್ತಿಪಡ್ಪು ಚೆನ್ನಮ್ಮ ಕುಟೀರ ನಿವಾಸದಲ್ಲಿ ವಾಸ್ತವ್ಯ ಇರುವ  ಬಿ.ಜನಾರ್ಧನ ಪೂಜಾರಿ , ಮಾಜಿ ಕೇಂದ್ರದ ಹಣಕಾಸು ಸಚಿವರು ನಿವಾಸದಲ್ಲಿ ಮೊದಲನೇ ಎನಿಮೇಷನ್ ಫಾರ್ಮ್ ಅನ್ನು ವಿತರಿಸಲಾಯಿತು.ಸದ್ರಿ ಸಮೀಕ್ಷೆ ಯ ಬಗ್ಗೆ ಜನಾರ್ದನ ಪೂಜಾರಿಯವರು ಬಹಳ

ಮೆಚ್ಚುಗೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಬಂಟ್ವಾಳ ತಹಶೀಲ್ದಾರರಾದ  ಮಂಜುನಾಥ. ಚುನಾವಣೆ ಶಾಖೆಯ ಉಪತಹಸೀಲ್ದಾರ್ ನವೀನ್ ಕುಮಾರ್ ಬೆಂಜನಪದವು, ಬಿ ಎಲ್ ಎ ಸುನೀಲ್ ಕುಮಾರ್ ಭಂಡಾರಿಬೆಟ್ಟು , ಮೇಲ್ವಿಚಾರಕರಾದ ಗ್ರಾಮ ಆಡಳಿತ ಅಧಿಕಾರಿ ಯಶ್ವಿತಾ ಮತಗಟ್ಟೆ ಅಧಿಕಾರಿಯವರಾದ  ದಾಮೋದರ ಪಡಿಯಾರ್ ಕಚೇರಿ ಸಿಬ್ಬಂದಿಯವರಾದ ಸದಾಶಿವ ಕೈಕಂಬ, ಅಕ್ಷತ್ ವಿಟ್ಲ ಉಪಸ್ಥಿತರಿದ್ದರು.

Leave a Comment