Coastal Bulletin

ಮೇಷ ರಾಶಿ :ಎರಡನೇ ಮನೆ ಬುಧ, ಮೂರರಲ್ಲಿ ಸೂರ್ಯ ಇಬ್ಬರೂ ನಿಮಗೆ ಅನುಕೂಲವಾಗಿ‌ ಇದ್ದಾರೆ. ಧನಲಾಭ, ಸರ್ಕಾರದ ಕೆಲಸಗಳಲ್ಲಿ ಯಶಸ್ಸು, ಹಿಡಿದ ಕೆಲಸ ಎಷ್ಟೇ ಕಷ್ಟವಾದರೂ ಜಯಿಸಿಕೊಂಡು ಬರುವ ತಾಕತ್ತು‌ ಇವೆಲ್ಲ ಇರುತ್ತದೆ. ನಾಲ್ಕನೇ ಮನೆಯ ಶುಕ್ರ ವಾಹನದಿಂದ ಲಾಭಕೊಡಿಸುತ್ತಾನೆ.

ವೃಷಭ ರಾಶಿ : 12 ಗುರು ಖರ್ಚುಗಳನ್ನು ಹೆಚ್ವಿಸುತ್ತಾನೆ. ಸ್ವಲ್ಪ ಮಾನಸಿಕ ಅಶಾಂತಿ ಇದೆ. ರಾಶಿಯಲ್ಲೇ ಇರುವ ಬುಧನಿಂದ ಕೊಂಚ ರಕ್ಷಣೆ ಇದೆ.‌ ಎಲ್ಲಿಯಾದರೂ ವಿಹಾರ ಅಥವಾ ಪುಣ್ಯಕ್ಷೇತ್ರ ಕ್ಕೆ ಪ್ರಯಾಣ ಇದೆ. ವ್ಯಾಕುಲಗೊಂಡ ಮನಸ್ಸಿಗೆ ಸ್ವಲ್ಪ ಉಲ್ಲಾಸ ಸಿಗುತ್ತದೆ. ಮೂರರ ಕುಜ ಶುಕ್ರರಿಂದಲೂ ನಿಮಗೆ ಲಾಭ ಇದೆ.

ಮಿಥುನ ರಾಶಿ : ನಿಮ್ಮ ರಾಶಿಯಲ್ಲೇ ಸೂರ್ಯ ಇದ್ದಾನೆ ಕೊಂಚ ಒತ್ತಡದ ಜೀವನ. ರಾಶಿಯ ಅಧಿಪತಿ ಬುಧ ವ್ಯಯಸ್ಥಾನದಲ್ಲಿ ಇದ್ದಾನೆ. ಖರ್ಚುಗಳು ಇವೆ. ಹನ್ನೊಂದರ ಗುರು ನಿಮ್ಮ ರಕ್ಷಣೆಗೆ ಇದ್ದಾನೆ. ಗುರುಬಲ ಇದ್ದಾಗ ಬೇರೆ ಯಾವ ಗ್ರಹಗಳು ಗುರುವನ್ನು ಅತಿಕ್ರಮಿಸಿ ಹೋಗುವುದಿಲ್ಲ. ಹಾಗಾಗಿ ಭಯ ಬೇಡ.

ಕಟಕ ರಾಶಿ : ಹನ್ನೊಂದರಲ್ಲಿ ಬುಧ ಒಳ್ಳೆಯ ಧನಲಾಭ ಹಾಗೂ ಮನಸ್ಸಿಗೆ ಸಂತೋಷ ಕೊಡುತ್ತಾನೆ. ವಾರದ ಮೊದಲಲ್ಲಿ ನೀವು ಕಾಯುತ್ತಿರುವ ಯಾವೋದೂ ಒಂದು ವಿಷಯ ಪಾಸಿಟಿವ್ ಆಗಿ ನಿಮಗೆ ತಲುಪುತ್ತದೆ. ಎಂಟರ ಶನಿಯಿಂದ ಕೊಂಚ ಮಾನಸಿಕ‌ ಕಿರುಕುಳ ಇದೆ. ಹಣಕಾಸು ನೀರಿನಂತೆ ಖರ್ಚಾಗುತ್ತದೆ. 

ಸಿಂಹ ರಾಶಿ : ಒಂಬತ್ತರಲ್ಲಿ ಗುರು ಇದ್ದರೂ ರಾಹುವಿನ ಜೊತೆ ಇರುವುದರಿಂದ ಗುರುಚಂಡಾಲ ಯೋಗ. ಯಾವ ಕೆಲಸಗಳೂ ಬೇಗ ಆಗುವುದಿಲ್ಲ. ನಿಧಾನ ಪ್ರಗತಿ. ಹತ್ತರಲ್ಲಿ ಬುಧ ವೃತ್ತಿಯನ್ನು ಅಲುಗಾಡದಂತೆ ಕಾಪಾಡುತ್ತಾನೆ. ಏರಿಳಿತಗಳು ಬರದಂತೆ ನಡೆಸಿಕೊಂಡು ಹೋಗುತ್ತಾನೆ. ರಾಹು ಮೀನರಾಶಿಗೆ ಪ್ರವೇಶವಾದಾಗ ನಿಮಗೆ ಸಂಪೂರ್ಣ ಗುರುಬಲ ಸಿಗುತ್ತದೆ.

ಕನ್ಯಾ ರಾಶಿ : ಗುರುಬಲ ಇಲ್ಲದಿದ್ದರೂ ಶನಿಬಲ ಇದೆ. ಹಣಕಾಸಿಗೆ ಅಧಿಕಾರಕ್ಕೆ ಯಾವುದೇ ತೊಂದರೆ ಇಲ್ಲ ಆದರೆ ಗುರು ಮತ್ತು ರಾಹು ಎಂಟನೇ ಮನೆಯಲ್ಲಿ‌ಇರುವುದು ಕೊಂಚ ದೋಷಕರವಾಗಿದೆ. ಆರೋಗ್ಯ ಸಮಸ್ಯೆ ಕಾಣಿಸಬಹುದು. ವಾಹನ ಚಲಾಯಿಸುವಾಗ ಕೊಂಚ ಜಾಗ್ರತೆ ಇರಲಿ. ಯಂತ್ರಗಳ ಜೊತೆ ಕೆಲಸ ಮಾಡುವವರು ಕೊಂಚ ಜಾಗ್ರತೆ ವಹಿಸಬೇಕು.

ತುಲಾ ರಾಶಿ : ಏಳು ಗುರು ರಾಹು ಇದ್ದು, ಗುರುಬಲ ಇದ್ದರೂ ರಾಹುವಿನ ಜೊತೆ ಗುರು ಇರುವುದರಿಂದ

ಫಲ ಕಡಿಮೆ ನಿಧಾನಗತಿ.‌ ಎಂಟರ ಬುಧನಿಂದ ಕಾರ್ಯಾನುಕೂಲ ಇದೆ. ಒಂಬತ್ತರ ಸೂರ್ಯ ಪಿತ್ರಾರ್ಜಿತ ಆಸ್ತಿ ಬರಲು ಸಹಾಯ ಮಾಡುತ್ತಾನೆ. ಹತ್ತರ ಶುಕ್ರ ಮತ್ತು ಕುಜನಿಂದ ವೃತ್ತಿಯಲ್ಲಿ ಯಶಸ್ಸಿದೆ. 

ವೃಶ್ಚಿಕ ರಾಶಿ : ಈಗ ನೀವು ಸ್ವಲ್ಪ ಎಚ್ಚರಿಕೆಯ ನಡೆ ಅನುಸರಿಸಬೇಕು. ಗುರು ಬಲ ಇಲ್ಲದಿರುವುದರಿಂದ ಕೆಲಸಗಳು ನಿಧಾನ ಮನಸ್ಸಿಗೆ ಕಿರಿಕಿರಿ. ‌ನೀವಿರುವ ವೇಗದಷ್ಟು ನಿಮ್ಮ ಕೆಲಸ ನಡೆಯುತ್ತಿಲ್ಲ. ಹತ್ತನೇ ಮನೆ ಅಧಿಪತಿ ಎಂಟನೇ ಮನೆಯಲ್ಕಿ ಇರುವುದರಿಂದ ವೃತ್ತಿಯಲ್ಲಿ ಒತ್ತಡ ಇರುತ್ತದೆ.‌ ನಿಮ್ಮ ಕೆಲಸವನ್ನು ಗುರ್ತಿಸಲು ಸಮಯ ಬೇಕಾಗುತ್ತದೆ. ಸ್ವಲ್ಪ ಕಷ್ಟಪಡಬೇಕು.

ಧನಸ್ಸು ರಾಶಿ : ಸಣ್ಣಪುಟ್ಟ ಆರೋಗ್ಯದ ತೊಂದರೆಗಳು ಕಾಡಿಸಬಹುದು. ಹಣದ ಹರಿವು ಉತ್ತಮವಾಗಿದೆ. ಯಾವುದೋ ನೀವು ಬಹು ದಿನಗಳಿಂದ ಕಾಯುತ್ತಿದ್ದ ಹಣ ಕೈಸೇರಲಿದೆ. ಆರರಲ್ಲಿ ಬುಧ ಲಾಭವನ್ನೇ ಕೊಡಿಸುತ್ತಾನೆ. ಆರರ ಅಧಿಪತಿ ಶುಕ್ರ ಎಂಟನೇ ಮನೆಯಲ್ಲಿ ಇದ್ದು ಪರಾಕ್ರಮದಿಂದ ನಿಮ್ಮ‌ ಕೆಲಸ ಆಗುವ ಹಾಗೆ ಮಾಡಿಸುತ್ತಾನೆ.

ಮಕರ ರಾಶಿ : ನಿಮಗೆ ಈಗ ಆರನೇ ಮನೆಯಲ್ಲಿ ಸೂರ್ಯ ಇದ್ದಾನೆ. ಇವನೊಬ್ಬನೇ ಈಗ ನಿಮಗೆ ರಕ್ಷೆ.‌ ನಾಲ್ಕರಲ್ಲಿ ಗುರು ಮತ್ತು ರಾಹು ಇಬ್ಬರೂ ನಷ್ಟವನ್ನೇ ಉಂಟು ಮಾಡುತ್ತಾರೆಯೇ ವಿನಹಃ ಏನೂ ಪ್ರಯೋಜನ ಇಲ್ಲ. ಚೂಪಾದ ವಸ್ತು ಆಯುಧಗಳಿಂದ ದೇಹದ ಮೇಲೆ ಗಾಯಗಳಾಗುವ ಸಂಭವ ಇದೆ. ಚಾಕು ಬ್ಲೇಡ್, ಇಂಥವುಗಳನ್ನು ಉಪಯೋಸುವಾಗ ಜಾಗ್ರತೆ ವಹಿಸಿ.

ಕುಂಭ ರಾಶಿ : ನಾಲ್ಕರಲ್ಲಿ ಬುಧ ಜ್ಞಾನವೃದ್ಧಿ ಕೊಡುತ್ತಾನೆ. ವಿದ್ಯಾರ್ಥಿಗಳಿಗೆ ಶುಭ. ಪ್ರವಚನ ಕೇಳುವುದು, ಸತ್ಸಂಗದಲ್ಲಿ ಭಾಗವಹಿಸುವುದು ಮುಂತಾದ ಜ್ಞಾನಾರ್ಜನೆಯ ಯೋಗ ಇದೆ. ಮೂರರ ರಾಹು ನಿಮ್ಮ ಶಕ್ತಿ‌ ಪರಾಕ್ರಮವನ್ನು ಹೆಚ್ಚಿಸುತ್ತಾನೆ. 

ಮೀನ ರಾಶಿ : ಈಗ ಗುರುಬಲ‌ ಇರುವುದರಿಂದ ನಿಮ್ಮ ಕೆಲಸ ಕಾರ್ಯಗಳು ಅಡತಡೆಯಿಲ್ಲದೆ ಸಾಗುತ್ತದೆ. ಕುಟುಂಬ ಸೌಖ್ಯ ಚೆನ್ನಾಗಿದೆ. ಮನೆಯಲ್ಲಿ ಶಾಂತಿ ನೆಮ್ಮದಿ ಇದೆ. ಮೂರರ ಬುಧ ಸ್ವಲ್ಪ ಒತ್ತಡಗಳನ್ನು ಕೊಡುತ್ತಾನೆ. ನಾಲ್ಕರ ಸೂರ್ಯನಿಂದ ವಾಹನದಿಂದ ನಷ್ಟ ಇದೆ.

Leave a Comment