ಮೇಷ : ಪ್ರಭಾವಿ ವ್ಯಕ್ತಿಯೊಬ್ಬರ ಸಹಾಯದಿಂದ ನಿಮ್ಮ ವೈಯಕ್ತಿಕ ಕೆಲಸಗಳನ್ನು ಮಾಡಿಕೊಳ್ಳುವಿರಿ. ಸಂಸ್ಥೆಯ ಸಲಹೆಗಾರರು ಆಗಿರುವವರಿಗೆ ಒತ್ತಡ ಹೆಚ್ಚಾಗಬಹುದು. ಜನರನ್ನು ನೀವು ನೋಡುವ ರೀತಿ ಬದಲಾದಾಗ ಜನರು ನಿಮಗೆ ಒಳ್ಳೆಯವರಂತೆ ಕಾಣುವರು. ಹಿತಶತ್ರುಗಳ ಬಗ್ಗೆ ಹೆಚ್ಚು ಎಚ್ಚರವಹಿಸಿರಿ. ಹಣದ ಒಳಹರಿವು ಕಡಿಮೆ ಇದ್ದು ಆದಾಯಕ್ಕಿಂತ ಖರ್ಚು ಹೆಚ್ಚಾಗುವ ಸಂದರ್ಭವಿದೆ. ಕೃಷಿಯಿಂದ ಆದಾಯವಿರುತ್ತದೆ.
ವೃಷಭ : ಉದ್ಯೋಗ ಆಕಾಂಕ್ಷಿಗಳಿಗೆ ಸಂದರ್ಶನದ ಕರೆಗಳು ಬರಬಹುದು. ಅದಕ್ಕೆ ಬೇಕಾದ ತಯಾರಿ ಮಾಡಿಕೊಳ್ಳಿ. ನಿಮ್ಮ ಅಂತಃಚಕ್ಷುವಿನ ಕೆಲವು ಸ್ಪಷ್ಟ ತೀರ್ಮಾನಗಳು ಗೆಲುವು ತರುತ್ತವೆ. ವೃತ್ತಿಯಲ್ಲಿ ಕಾರ್ಯಸಾಧನೆ ಮಾಡಿ ಹೆಸರು ಗಳಿಸುವಿರಿ. ತಾಯಿ ಆರೋಗ್ಯದಲ್ಲಿ ಚೇತರಿಕೆ ಕಾಣಬಹುದು. ಬರಹಗಾರರು ತಮ್ಮ ಹೊಸ ಬರವಣಿಗೆಯನ್ನು ಆರಂಭ ಮಾಡುವರು. ಕೆಲವೊಂದು ಸಮಸ್ಯೆಗಳಿಂದ ಹೊರಬಂದು ನೆಮ್ಮದಿ ಕಾಣುವಿರಿ.
ಮಿಥುನ : ಉದ್ದಿಮೆದಾರರು ಹೊಸ ಯಂತ್ರೋಪಕರಣಗಳನ್ನು ಖರೀದಿ ಮಾಡುವ ಸಂದರ್ಭವಿದೆ. ವಾಹನದ ಬಿಡಿಭಾಗಗಳನ್ನು ಮಾರಾಟ ಮಾಡುವವರ ವ್ಯವಹಾರ ಸಾಕಷ್ಟು ವಿಸ್ತರಣೆಯಾಗಿ ಲಾಭ ಹೆಚ್ಚುತ್ತದೆ. ಲಲಿತ ಕಲೆಯನ್ನು ಕಲಿಯುತ್ತಿರುವವರಿಗೆ ಸೂಕ್ತ ಗುರುಗಳ ಜೊತೆ ಸಫಲತೆ ದೊರೆಯುತ್ತದೆ. ರಬ್ಬರಿನಿಂದ ತಯಾರಿಸುವ ಉಪ ಉತ್ಪಾದನೆಗಳನ್ನು ಮಾರಾಟ ಮಾಡುವವರಿಗೆ ವ್ಯವಹಾರ ಸಾಕಷ್ಟು ನಡೆಯುತ್ತದೆ.
ಕಟಕ : ನ್ಯಾಯಾಲಯದ ಹೋರಾಟಗಳಲ್ಲಿ ಸ್ವಲ್ಪಮಟ್ಟಿನ ಹಿನ್ನಡೆಯಾಗುವ ಸಂದರ್ಭವಿದೆ. ಆದರೆ, ನಿಮ್ಮ ನಿಲುವಿನಿಂದ ಹಿಂದೆ ಸರಿದಲ್ಲಿ ಸಂಪೂರ್ಣ ನಷ್ಟವಾಗುತ್ತದೆ. ಉನ್ನತ ವಿದ್ಯಾಭ್ಯಾಸ ಮಾಡಬೇಕೆಂದಿರುವವರಿಗೆ ಪರಿಚಿತರ ಮೂಲಕ ಧನಸಹಾಯ ಸಿಗುವ ಸಾಧ್ಯತೆಗಳಿವೆ. ಕೈಮಗ್ಗದ ವಸ್ತುಗಳನ್ನು ತಯಾರಿಸಿ ಮಾರಾಟ ಮಾಡುವವರಿಗೆ ವ್ಯವಹಾರ ಹೆಚ್ಚಾಗುತ್ತದೆ. ಕೆಲಸಗಳಲ್ಲಿ ಯಶಸ್ಸು ಸಾಕಷ್ಟು ಖಚಿತವೆಂದಿದ್ದರೂ ಮೈಮರೆಯುವುದು ಬೇಡ.
ಸಿಂಹ : ನಿಮ್ಮ ಸಂಕಷ್ಟಗಳಿಗೆ ಹಿರಿಯರಿಂದ ನೆರವು ಸಿಗಲಿದೆ. ಉಳಿತಾಯದ ವಿಷಯದಲ್ಲಿ ಹಣ ಹೆಚ್ಚು ಕಡಿಮೆಯಾಗಿ ನಷ್ಟ ಆಗಬಹುದು. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ರಾಜಕೀಯದಲ್ಲಿರುವವರಿಗೆ ಮೇಲುಗೈ ಸಾಧಿಸಲು ಪೂರಕವಾದ ವಾತಾವರಣವೂ ದೊರೆಯುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಸ್ವಲ್ಪ ಹಿನ್ನಡೆ ಆಗಬಹುದು. ಸ್ವಂತ ವ್ಯಾಪಾರದಲ್ಲಿ ತಕ್ಷಣದಲ್ಲಿ ಲಾಭವಿಲ್ಲದಿದ್ದರೂ ನಂತರ ಲಾಭ ದೊರೆಯುತ್ತದೆ. ಅವಶ್ಯಕತೆಗಿಂತ ಹೆಚ್ಚು ಮಾತಾಡುವುದು ನಿಮಗೆ ಒಳಿತಲ್ಲ.
ಕನ್ಯಾ : ಬದುಕಿನಲ್ಲಿ ಅತಿ ವಿಲಾಸಿತನ ಬೇಡ. ಕೆಲಸಗಳ ಮೇಲುಸ್ತುವಾರಿಯನ್ನು ನೋಡಿಕೊಳ್ಳುತ್ತಿರುವವರಿಗೆ ಕಾರ್ಮಿಕರ ಅಸಹಕಾರ ಬಹಳ ಕಷ್ಟ ತರಬಹುದು. ಹಣದ ಒಳಹರಿವು ಮಂದಗತಿಯಲ್ಲಿರುತ್ತದೆ. ಬಂಧುಗಳ ಸಹಾಯ ನಿಮ್ಮ ಕಷ್ಟದಲ್ಲಿ ಒದಗಿ ಬರುತ್ತದೆ. ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಯಶಸ್ಸು ದೊರೆಯುತ್ತದೆ. ಅವರಿಗೆ ಬರಬೇಕಾದ ಸಹಾಯಧನ ಹರಿದು ಬರುತ್ತದೆ. ಮೂತ್ರ ಸಂಬಂಧಿ ಕಾಯಿಲೆ ಇರುವವರು ಚಿಕಿತ್ಸೆ ಪಡೆಯುವುದು ಒಳ್ಳೆಯದು.
ತುಲಾ : ಬಂದ ಅವಕಾಶಗಳನ್ನು ಯುವಕರು ಸಮರ್ಥವಾಗಿ ಬಳಸಿಕೊಳ್ಳಿರಿ. ಉನ್ನತ ವಿದ್ಯಾಭ್ಯಾಸ ಮಾಡಬೇಕೆನ್ನುತ್ತಿರುವವರಿಗೆ ಸೂಕ್ತ ಮಾರ್ಗದರ್ಶನ ದೊರೆಯುತ್ತದೆ. ಸಂಗಾತಿಯೊಡನೆ ಸಾಮರಸ್ಯ ಕಾಪಾಡಿಕೊಳ್ಳುವುದು ಉತ್ತಮ. ನ್ಯಾಯಾಲಯದಲ್ಲಿನ ದಾವೆಗಳು ನಿಮ್ಮ
ವಿರುದ್ಧವಾಗಬಹುದು, ಸ್ವಲ್ಪ ಎಚ್ಚರವಹಿಸಿರಿ. ಕಾರ್ಮಿಕರಿಗೆ ಶ್ರಮಕ್ಕೆ ತಕ್ಕ ಫಲ ಈಗ ದೊರೆಯುತ್ತದೆ.
ವೃಶ್ಚಿಕ : ವ್ಯವಹಾರದಲ್ಲಿ ಒದಗಿ ಬಂದ ಹೊಸ ಅವಕಾಶಗಳನ್ನು ಸಮರ್ಥವಾಗಿ ಬಳಸಿಕೊಳ್ಳಿರಿ. ಆರೋಗ್ಯ ವೃದ್ಧಿಗಾಗಿ ದೇಹದಂಡನೆಯ ಅಗತ್ಯವಿದೆ. ವ್ಯಾಪಾರ ವ್ಯವಹಾರಗಳನ್ನು ವಿಸ್ತರಿಸಲು ಸಾಕಷ್ಟು ದೂರ ಪ್ರಯಾಣ ಮಾಡುವಿರಿ. ವ್ಯವಹಾರದ ವಿಷಯದಲ್ಲಿ ಹೆಚ್ಚಿನ ಜಾಗ್ರತೆ ಅಗತ್ಯ. ಹಣದ ಒಳಹರಿವು ಉತ್ತಮವಾಗಿರುತ್ತದೆ. ಹೊಗಳುಭಟ್ಟರನ್ನು ನಿಮ್ಮಿಂದ ದೂರವಿಡಿರಿ. ನಿಮ್ಮ ಮಕ್ಕಳ ಬಗ್ಗೆ ಶುಭ ವಾರ್ತೆಗಳನ್ನು ಕೇಳುವಿರಿ.
ಧನು : ಕಚೇರಿಯಲ್ಲಿ ನೀವು ಮಾಡುವ ಹೆಚ್ಚಿನ ದುಡಿಮೆ ಮತ್ತು ನಿಸ್ವಾರ್ಥ ಸೇವೆಯನ್ನು ನಿಮ್ಮ ಅಧಿಕಾರಿಗಳು ಪರಿಗಣಿಸುತ್ತಾರೆ. ಸರ್ಕಾರಿ ಸಂಸ್ಥೆಗಳಲ್ಲಿ ವ್ಯಾಪಾರ, ವ್ಯವಹಾರಗಳನ್ನು ನೋಡಿಕೊಳ್ಳುವ ಅಧಿಕಾರಿಗಳಿಗೆ ಹೆಚ್ಚಿನ ಒತ್ತಡ ಇರುತ್ತದೆ. ಯಾವುದೇ ಹೊಸ ಜವಾಬ್ದಾರಿಗಳನ್ನು ತೆಗೆದುಕೊಳ್ಳುವ ಮುನ್ನ ಅದರ ಬಗ್ಗೆ ಸರಿಯಾಗಿ ತಿಳಿಯಿರಿ. ಧನ ಆದಾಯವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ. ವಿದ್ಯಾರ್ಥಿಗಳು ತಮ್ಮ ಗುರಿ ಮುಟ್ಟುವಲ್ಲಿ ಹೆಚ್ಚಿನ ಪ್ರಯತ್ನ ಮತ್ತು ಶ್ರಮ ಹಾಕಲೇಬೇಕು.
ಮಕರ : ಹೊಸ ವಸ್ತ್ರಗಳನ್ನು ಖರೀದಿ ಮಾಡುವ ಯೋಗವಿದೆ. ರಾಜಕೀಯದಲ್ಲಿರುವವರು ವರಿಷ್ಠರ ಮಾತಿನಂತೆ ನಡೆಯುವುದು ಉತ್ತಮ. ನೂತನ ಆಸ್ತಿ ಸಂಪಾದನೆ ಬಗ್ಗೆ ಹೆಚ್ಚು ಆಲೋಚನೆ ಮಾಡುವಿರಿ. ಹೊಸ ಅವಕಾಶವೊಂದು ನಿಮ್ಮ ವೃತ್ತಿಯಲ್ಲಿ ಬರುತ್ತದೆ. ಅದನ್ನು ಸರಿಯಾಗಿ ಬಳಸಿಕೊಳ್ಳಿರಿ. ಹಣದ ಒಳಹರಿವು ಸಾಮಾನ್ಯವಾಗಿರುತ್ತದೆ. ಹಿರಿಯರಿಂದ ಸೂಕ್ತ ಮಾರ್ಗದರ್ಶನ ಮತ್ತು ಆಶೀರ್ವಾದ ನಿಮಗೆ ಸದಾ ದೊರೆಯುತ್ತದೆ.
ಕುಂಭ : ದೈಹಿಕ ಕೆಲಸವನ್ನು ಮಾಡಿ ದುಡಿಯುತ್ತಿರುವವರಿಗೆ ಹೆಚ್ಚಿನ ಕೆಲಸ ದೊರೆಯುತ್ತದೆ. ಅಸೂಯೆ ಪಡುವ ಸಹೋದ್ಯೋಗಿಗಳ ನಡುವೆ ನೀವು ಎಚ್ಚರಿಕೆಯಿಂದ ಕೆಲಸ ಮಾಡಬೇಕಾದ ಪರಿಸ್ಥಿತಿ ಇದೆ. ಹಣದ ಒಳಹರಿವು ನಿರೀಕ್ಷೆಯ ಮಟ್ಟಕ್ಕೆ ಇರುತ್ತದೆ. ವೃತ್ತಿಯಲ್ಲಿ ನಿಮ್ಮ ಆಲಸಿತನವು ನಿಮಗೆ ಮುಳುವಾಗುವ ಸಾಧ್ಯತೆ ಇದೆ. ಕಚೇರಿಯಲ್ಲಿನ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಈಗ ತೆಗೆದುಕೊಳ್ಳುವವರು ಹೆಚ್ಚು ಶ್ರಮ ಹಾಕಲೇಬೇಕು.
ಮೀನ : ಅತಿಯಾದ ಆತ್ಮಾಭಿಮಾನ ನಿಮ್ಮನ್ನು ಕಾಡಬಹುದು. ಮಾತುಗಳ ಕಾಠಿಣ್ಯತೆಯನ್ನು ಕಡಿಮೆ ಮಾಡಿಕೊಳ್ಳುವುದು ಒಳ್ಳೆಯದು. ವೈಯಕ್ತಿಕ ಅಭಿವೃದ್ಧಿಗಾಗಿ ನೀವು ಮಾಡುವ ಕೆಲಸಗಳನ್ನು ಜನರು ಗಮನಿಸುವರು. ಆರೋಗ್ಯ ಸಲಹೆಗಾರರಿಗೆ ಬೇಡಿಕೆ ಹೆಚ್ಚಾಗಿ ಸಂಪಾದನೆ ಕೂಡ ಹೆಚ್ಚುತ್ತದೆ. ರಿಯಲ್ ಎಸ್ಟೇಟ್ ವ್ಯವಹಾರ ನಡೆಸುವವರಿಗೆ ಆದಾಯ ಹೆಚ್ಚುತ್ತದೆ. ಸರ್ಕಾರಿ ವ್ಯವಹಾರಗಳ ಮಧ್ಯವರ್ತಿಯಾಗಿ ಕೆಲಸ ಮಾಡುವವರಿಗೆ ಕಮಿಷನ್ ಹೆಚ್ಚುತ್ತದೆ.














