Coastal Bulletin

ಮೇಷ ರಾಶಿ : ಸ್ವಲ್ಪ ಖರ್ಚು ಸ್ವಲ್ಪ ಲಾಭ ಸಿಹಿ ಕಹಿ ಎರಡೂ‌ ಇದೆ. ಈ ವಾರದ ಚಂದ್ರನ ಸಂಚಾರ ನಿಮಗೆ ಲಾಭ ತರುತ್ತದೆ. ಎರಡನೇ ತಾರೀಖು ಶುಕ್ರ ಮೂರನೇ ಮನೆಗೆ ಪ್ರವೇಶವಾದಾಗ ನಿಮಗೆ ಇನ್ನೂ ಹೆಚ್ಚಿನ ಲಾಭ ಇದೆ. ಅತ್ತೆಯ ಮನೆಯ ಕಡೆಯಿಂದ ಧನ ಲಾಭ ಇದೆ. ಸಂಗಾತಿಯ ಬೆಂಬಲ‌ಇದೆ. ಹನ್ನೊಂದರ ಶನಿ‌ ಧನ ಲಾಭ ಕಾರ್ಯಸಿದ್ಧಿ ಕೊಡುತ್ತಾನೆ.

ವೃಷಭ ರಾಶಿ : ಈಗ ಗುರುಬಲ ತಪ್ಪಿಹೋದರೂ ಬಾಕಿ ಗ್ರಹಗಳ ಬಲ‌ ಇದೆ. ಎರಡನೇ ಮನೆಯ ಶುಕ್ರ ಮನೆಯಲ್ಲಿ ನೆಮ್ಮದಿಯನ್ನೂ ಧನಲಾಭವನ್ನೂ ಕೊಡುತ್ತಾನೆ. ವೃತ್ತಿಯಲ್ಲಿ ಯಶಸ್ಸು ಇದೆ. ದೇವಿ ದರ್ಶನ ಭಾಗ್ಯ ಇದೆ. ಅಲಂಕಾರ ಸಾಮಗ್ರಿಗಳಿಗೆ ಖರ್ಚು ಮಾಡುತ್ತೀರಿ.‌ ಗೃಹಾಲಂಕಾರ ಮಾಡುತ್ತೀರಿ. ವಿಮಾನ ಪ್ರಯಾಣ ಯೋಗ ಇದೆ. ಕಲಾವಿದರಿಗೆ ತುಂಬಾ ಅನುಕೂಲ ಇದೆ.

ಮಿಥುನ ರಾಶಿ : ಈ ವಾರ ಶುಭಫಲಗಳು ಇವೆ. ಇದನ್ನು ನೀವು ವಿವೇಚನೆಯಿಂದ ಬಳಸಿಕೊಳ್ಳಬೇಕು.‌ ಈ ವಾರದ ಚಂದ್ರನ ಸಂಚಾರ ಕೂಡ ನಿಮಗೆ ಅನುಕೂಲವಾಗಿ ಇದೆ. ರಾಹು ಗುರು ಇಬ್ಬರೂ ಹನ್ನೊಂದನೇ ಮನೆಯಲ್ಲಿ ಇದ್ದು ಹೇರಳ ಧನಲಾಭ ಕೊಡುತ್ತಾರೆ. ಕಾರ್ಯಾನುಕೂಲ ಮಾಡಿಕೊಡುತ್ತಾರೆ. ವೃತ್ತಿಯಲ್ಲಿ ಯಶಸ್ಸು ಇದೆ.‌

ಕಟಕ ರಾಶಿ : ಈಗ ಅಷ್ಠಮಶನಿಯ ಪ್ರಭಾವ ಇರುವುದರಿಂದ ಆರೋಗ್ಯ ಹಾಗೂ ಹಣಕಾಸು ಎರಡೂ ಕೈಕೊಡುತ್ತದೆ. ಆರೋಗ್ಯ ಜಾಗ್ರತೆ.‌ ಸಾಲ ಯಾರಿಗೂ ಕೊಡಬೇಡಿ. ವಸೂಲಾಗುವುದು ಕಷ್ಟ. ವೃತ್ತಿಯಲ್ಲಿ ಒತ್ತಡ ಇರುತ್ತದೆ. ಹಣ ಬರುವ ದಾರಿಗೆ ಅಡೆತಡೆಗಳು ಹೆಚ್ಚು. ಬಂದ ಹಾಗೇ ಕಂಡರೂ ಕೈಗೆ ಸಿಗುವುದು ನಿಧಾನ.‌ ನಾಗರ ಕಲ್ಲಿಗೆ ಎಳನೀರಿನ ಅಭಿಷೇಕ ಮಾಡಿಸಿದರೆ ಕೊಂಚ ಶೀಘ್ರ ಪರಿಹಾರ ಸಿಗುತ್ತದೆ.

ಸಿಂಹ ರಾಶಿ : ಈಗ ನಿಮಗೆ ಗುರುವಿನ ಅನುಗ್ರಹದಿಂದ ಎಲ್ಲ ಕೆಲಸಗಳೂ ಸುಸೂತ್ರವಾಗಿ ನಡೆಯುತ್ತದೆ. ಧರ್ಮಕಾರ್ಯ ಮಾಡುತ್ತೀರಿ.‌ ವೃತ್ತಿಯಲ್ಲಿ ವ್ಯಾಪಾರದಲ್ಲಿ ಯಶಸ್ಸನ್ನು ಸಾಧಿಸುತ್ತೀರಿ. ಸರ್ಕಾರದ ಕೆಲಸಗಳು ಈಗ ಸುಸೂತ್ರವಾಗಿ ಆಗುತ್ತದೆ.‌ ಎರಡನೇ ತಾರೀಕಿನ ನಂತರ ಶುಕ್ರ ಲಾಭ ಸ್ಥಾನಕ್ಕೆ ಬಂದಾಗ ಇನ್ನಷ್ಟು ಶುಭ ಫಲಗಳು ಸಿಗುತ್ತದೆ. ಸಿಂಹರಾಶಿಯ ಗಂಡಸರಿಗೆ ಅಪವಾದಗಳು ಬರುವ ಸಾಧ್ಯತೆ ಇದೆ ಎಚ್ಚರಿಕೆಯಿಂದ ವರ್ತಿಸಿ. ಭೂಮಿಯಿಂದ ಲಾಭ ಇದೆ. ರಾಜಕೀಯ ವ್ಯಕ್ತಿಗಳಿಗೂ ಶುಭಫಲ‌ಇದೆ.

ಕನ್ಯಾ ರಾಶಿ : ನಾಲ್ಕು ಗ್ರಹಗಳು ಎಂಟನೇ ಮನೆಯಲ್ಲಿ ಕುಳಿತಿವೆ. ಈಗ ನೀವು ಎಚ್ಚರಿಕೆಯಿಂದ ವರ್ತಿಸಬೇಕು. ಹತ್ತನೇ ಮನೆಯಲ್ಲಿ ಮಂಗಳ ಇರುವುದು ವೃತ್ತಿಗೆ ಲಾಭ.‌ ಭೂವ್ಯವಹಾರ ಮಾಡುವವರಿಗೆ ಲಾಭ. ಎರಡನೇ ತಾರೀಕಿನಂದು ಒಂಬತ್ತನೇ ಮತ್ತು ಎರಡನೇ ಮನೆ ಅಧಿಪತಿ ಹತ್ತನೇ ಮನೆಗೆ ಪ್ರವೇಶವಾಗುತ್ತಾನೆ. ಇದು ಇನ್ನೂ ಹೆಚ್ವಿನ ಲಾಭ ತಂದುಕೊಡುತ್ತದೆ. ಕಲಾವಿದರಿಗೆ ಶುಭಫಲಗಳು ಇವೆ. ಅರ್ಹರಿಗೆ ಪ್ರಶಸ್ತಿ ಸನ್ಮಾನಗಳು ದೊರೆಯುತ್ತದೆ.

ತುಲಾ ರಾಶಿ : ಈಗ ಗುರುಬಲ ಇರುವುದರಿಂದ ನಿಮ್ಮ ಎಲ್ಲಾ ಕೆಲಸಗಳಿಗೂ ಜಯ ಸಿಗುತ್ತದೆ. ಏಳನೇ ಮನೆಯಲ್ಲಿ ನಾಲ್ಕು ಗ್ರಹಗಳು ಇವೆ. ಸಂಗಾತಿಯೊಡನೆ ವೈಮನಸ್ಯ ಬರಬಹುದು ತಾತ್ಕಾಲಿಕ. ಹೆದರಬೇಡಿ.‌ ಎರಡನೇ ತಾರೀಖಿನ ನಂತರ ಶುಕ್ರ ಭಾಗ್ಯ

ಸ್ಥಾನಕ್ಕೆ ಬಂದಾಗ ನಿಮಗೆ ಒಳ್ಳೆಯ ಫಲಗಳು ಸಿಗುತ್ತದೆ. ಅವಿವಾಹಿತರಿಗೆ ವಿವಾಹದ ಮಾತುಕತೆಗಳು ನಡೆಯಬಹುದು.

ವೃಶ್ಚಿಕ ರಾಶಿ : ಎಲ್ಲ ವಿಷಯಗಳಲ್ಲೂ ಸ್ವಲ್ಪ ನಿಧಾನ ನಿಮ್ಮ ಅನುಭವಕ್ಕೆ ಬಂದಿರಬಹುದು. ನೀವು ಕೂಡ ಯೋಚಿಸಿ ಮುಂದೆ ಹೆಜ್ಜೆ ಇಡಿ. ದುಡುಕಬೇಡಿ. ಮುಖ್ಯ ನಿರ್ಧಾರಗಳನ್ನು ಈಗ ಯಾವುದೂ ತೆಗೆದುಕೊಳ್ಳಬೇಡಿ.‌ ವಿದ್ಯಾರ್ಥಿಗಳಿಗೆ ಕೊಂಚ ಹಿನ್ನಡೆ ಇದೆ. ಸರ್ಕಾರಿ ಅಧಿಕಾರಿಗಳು ಕೊಂಚ ಎಚ್ಚರಿಕೆಯಿಂದ ಇರಬೇಕು. ರಾಜಕೀಯ ನಾಯಕರಿಗೂ ಕೊಂಚ ಹಿನ್ನಡೆ ಇದೆ. ಪ್ರೇಮಿಗಳಿಗೆ ಈಗ ಒಳ್ಳೆಯ ಸಮಯ. ಹಣಕಾಸು ಸ್ಥಿತಿ ಮಧ್ಯಮ.

ಧನಸ್ಸು ರಾಶಿ : ಏಳೂವರೆ ವರ್ಷದಿಂದ ಬರೀ ಕಹಿಯನ್ನೇ ಉಂಡಿದ್ದೀರಿ ಈಗ ನಿಮ್ಮ ಅಷೃಷ್ಟದ ಬಾಗಿಲು ತೆರೆದಿದೆ. ಗುರು ಬಲ ಶನಿಬಲ ಇದ್ದಾಗ ಸಾಮ್ರಾಜ್ಯವನ್ನೇ ವಿಸ್ತರಿಸಬಹುದು. ಬಡವನೂ ಬಲ್ಲಿದನಾಗುತ್ತಾನೆ. ಸಮಾಜದಲ್ಲಿ ಮರ್ಯಾದೆ ಗೌರವಗಳಿಗೆ ಪಾತ್ರರಾಗುತ್ತೀರಿ.‌ ಪ್ರಶಸ್ತಿ ಸನ್ಮಾನ ಸಿಗುವ ಯೋಗ. ಆಸ್ತಿ ಕೊಳ್ಳುವ ಬಗ್ಗೆ ಯೋಚಿಸುತ್ತೀರಿ. ವಿಧ್ಯಾರ್ಥಿಗಳಿಗೆ ಬಹಳ ಒಳ್ಳೆಯ ಸಮಯ. ರಾಜಕೀಯ ವ್ಯಕ್ತಿಗಳಿಗೆ ಅಧಿಕಾರ ಸಿಗುವ ಸಮಯ. ಅವಿವಾಹಿತರಿಗೆ ವಿವಾಹ ಯೋಗ ಇದೆ. ಉನ್ನತ ಶಿಕ್ಷಣ ಯೋಗ ಇದೆ

ಮಕರ ರಾಶಿ : ಈಗ ನಿಮಗೆ ಗುರುಬಲ ಇಲ್ಲದಿದ್ದರೂ ಶುಕ್ರ ಮತ್ತು ಕುಜ ಅನುಕೂಲವಾಗಿ‌ ಇದ್ದಾರೆ.‌ ನಾಲ್ಕನೇ ಮನೆಯಲ್ಲಿ ನಾಲ್ಕು ಗ್ರಹಗಳು ಸೇರಿವೆ. ಈ ಗ್ರಹಗಳು ಹತ್ತನೇ ಮನೆಯನ್ನು ನೋಡುವುದರಿಂದ ವೃತ್ತಿ ಸ್ಥಾನದಲ್ಲಿ ಏನಾದರೂ ಬದಲಾವಣೆ ನಿರೀಕ್ಷಿಸಬಹುದು.‌ ಶನಿ ಎರಡನೇ ಮನೆಯಲ್ಲಿ ಇರುವುದು ಕೊಂಚ ಮಾನಸಿಕ ಕಿರಿಕಿರಿಗೆ ಕಾರಣವಾಗುತ್ತದೆ. ಮನೆಯಲ್ಲಿ ಅಶಾಂತಿ ವೈಮನಸ್ಸಿಗೆ ಕಾರಣವಾಗಬಹುದು. ಯಾವುದಕ್ಕೂ ಮೌನ ಧರಿಸಿ. ರಿಯಾಕ್ಷನ್ ಕಡಿಮೆ ಇರಲಿ. ಹಣಕಾಸಿನ ಸ್ಥಿತಿ ಮಧ್ಯಮ.

ಕುಂಭ ರಾಶಿ : ಮೂರನೇ ಮನೆಯಲ್ಲಿ ನಾಲ್ಕು ಗ್ರಹಗಳು ಸೇರಿದ್ದು ಧೈರ್ಯ ಪರಾಕ್ರಮ ಹೆಚ್ಚಾಗಲಿದೆ. ಕಳೆದುಕೊಂಡೆ ಎಂಬಂತಹ ವಸ್ತುವೊಂದು‌ ಮರಳಿ ಸಿಗುವ ಸಾಧ್ಯತೆ ಇದೆ. ನಾಲ್ಕನೇ ಮನೆಯ ಶುಕ್ರ ವಾಹನದಿಂದ ಲಾಭ ಕೊಡಿಸುತ್ತಾನೆ. ಐದನೇ ಮನೆಯ ಕುಜ ಭೂಮಿಯಿಂದ ಲಾಭ ಕೊಡಿಸುತ್ತಾನೆ. ಸರ್ಕಾರದ ಕೆಲಸಗಳು ಈಗ ಸುಲಭವಾಗಿ ನೆರವೇರುತ್ತದೆ. ಯಾತ್ರಾಸ್ಥಳಗಳನ್ನು ಭೇಟಿ ಮಾಡುತ್ತೀರಿ. ದಾನಧರ್ಮ ಮಾಡುವ ಯೋಗ ಇದೆ.

ಮೀನ ರಾಶಿ : ಎರಡನೇ ಮನೆಯಲ್ಲಿ ನಾಲ್ಕು ಗ್ರಹಗಳು ಸೇರಿ ಒಂದು ರಾಜಯೋಗ ಆಗಿದೆ. ಇದು ಹಣಕಾಸಿನ ಹರಿವನ್ನು ಉತ್ತಮಗೊಳಿಸುತ್ತದೆ. ಮನೆಯಲ್ಲಿ ಸೌಖ್ಯ ಸಮೃದ್ಧಿ ಉಂಟಾಗುತ್ತದೆ. ಕೆಲವೇ ದಿನಗಳಲ್ಲಿ ಶುಕ್ರ ನಾಲ್ಕನೇ ಮನೆಗೆ ಬಂದಾಗ ನಿಮಗೆ ಇನ್ನಷ್ಟು ಲಾಭದ ಸಂಗತಿಗಳು ನಡೆಯಲಿವೆ. ವೃತ್ತಿಯಲ್ಲಿ ಗೌರವ ಪಡೆಯುತ್ತೀರಿ. ಬಡ್ತಿ ಯೋಗ ಇದೆ.

Leave a Comment