ಪೊಳಲಿ:ಅ.24ರಂದು ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನ ಮತ್ತು ಮಾಹಿತಿ ಕಾರ್ಯಾಗಾರ.

Coastal Bulletin
ಪೊಳಲಿ:ಅ.24ರಂದು ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನ ಮತ್ತು ಮಾಹಿತಿ ಕಾರ್ಯಾಗಾರ.

ಬಂಟ್ವಾಳ :ದ ಕ ಜಿಲ್ಲಾ ಪಂಚಾಯತ್ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆ ದ.ಕ. ಜಿಲ್ಲೆ ಹಾಗೂ ದ ಕ ಸಹಕಾರಿ ಹಾಲು ಉತ್ಪಾದಕರ ಒಕ್ಕೂಟ ನಿ. ಮಂಗಳೂರು ಇವರ ಸಹಭಾಗಿತ್ವದಲ್ಲಿ ಪೊಳಲಿ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ವಠಾರದಲ್ಲಿ ಮಿಶ್ರ ತಳಿ ಹೆಣ್ಣು ಕರುಗಳ ಪ್ರದರ್ಶನ ಮತ್ತು ಮಾಹಿತಿ ಶಿಬಿರವು ಅ.24 ರಂದು ಶನಿವಾರ ಗೋ ಪೂಜೆಯೊಂದಿಗೆ ಕಾರ್ಯಕ್ರಮ ನಡೆಯಲಿದೆ.

.ಹೈನಿಗಾರಿಕೆ ಮಾಹಿತಿ ಕಾರ್ಯಗಾರ:

ಸಂಪನ್ಮೂಲ ವ್ಯಕ್ತಿಗಳಾಗಿ ಬೆಳ್ತಂಗಡಿ ಮುಖ್ಯ ಪಶುವೈದ್ಯಾಧಿಕಾರಿ ಡಾ। ರವಿ ಕುಮಾರ್ ಎಂ.  ಭಾಗವಹಿಸಿ   ವೈಜ್ಞಾನಿಕ ರೀತಿಯಲ್ಲಿ ಕರುಗಳ ಪೋಷಣೆ ಮತ್ತು ಹೈನುಗಾರಿಕೆಯಲ್ಲಿ ಹಸಿರು ಮೇವಿನ ಮಹತ್ವವನ್ನು ತಿಳಿಸಲಿದ್ದಾರೆ.

ರೈತರಿಗೆ ತೋಟಗಾರಿಕ ಮಾಹಿತಿ:

ರೈತರಿಗೆ ತೋಟಗಾರಿಕ ಮಾಹಿತಿಯನ್ನು   ಶ್ರೀ ಜೋ ಪ್ರದೀಪ್ ಡಿ’ಸೋಜ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ನೀಡಲಿದ್ದಾರೆ.

1. ಮಿಶ್ರತಳಿ ಹೆಣ್ಣು ಕರುಗಳ ಪ್ರದರ್ಶನದಲ್ಲಿ ಭಾಗವಹಿಸಿದ ಕರುಗಳನ್ನು 3 ತಿಂಗಳು, 3-6ತಿಂಗಳು, 6-12 ತಿಂಗಳು        ವಿಂಗಡಿಸಿ, ಪ್ರತಿ ವರ್ಗದಲ್ಲಿಯೂ ಪ್ರಥಮ, ದ್ವಿತೀಯ, ತೃತೀಯ ಬಹುಮಾನ ನೀಡಲಾಗುವುದು.

2. ಉತ್ತಮ ಕರುಗಳ ಆಯ್ಕೆ ತೀರ್ಪುಗಾರರ ಮುಖಾಂತರ ಆಗುವುದು ಮತ್ತು ತೀರ್ಪುಗಾರರ ತಿರ್ಮಾನವೇ           ಅಂತಿಮವಾಗಿರುತ್ತದೆ.

3. ಪ್ರದರ್ಶನದಲ್ಲಿ ಭಾಹವಹಿಸುವ ಎಲ್ಲಾ ಕರುಗಳಿಗೂ ಪ್ರೋತ್ಸಾಹಕ ಬಹುಮಾನ ಮತ್ತು ಆಹಾರ ಕಿಟ್ ಗಳನ್ನು ನೀಡಲಾಗುವುದು.

ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಬಂಟ್ವಾಳ ಶಾಸಕ ರಾಜೇಶ್ ನ್ಯಾಕ್ ಉಳಿಪಾಡಿಗುತ್ತು ವಹಿಸಲಿದ್ದಾರೆ.ದಕ್ಷಿಣ ಕನ್ನಡ ಸಹಕಾರಿ ಹಾಲು

ಉತ್ಪಾದಕರ ಒಕ್ಕೂಟದ  ಅಧ್ಯಕ್ಷ  ರವಿರಾಜ ಹೆಗ್ಡೆ, ದ.ಕ. ಮಂಗಳೂರು  ಹಾಲು ಒಕ್ಕೂಟದ ನಿರ್ದೇಶಕರಾದ  ಸವಿತಾ ಎನ್. ಶೆಟ್ಟಿ ,ನಂದರಾಮ್ ರೈ ,ಉಪನಿರ್ದೇಶಕ   ದ.ಕ. ಹಾಲು ಒಕ್ಕೂಟ, ಮಂಗಳೂರು ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆ ಉಪನಿರ್ದೇಶಕ  ಡಾ. ಅರುಣ ಕುಮಾರ ಶೆಟ್ಟಿ ಎನ್. ದ.ಕ. ಹಾಲು ಒಕ್ಕೂಟ, ಮಂಗಳೂರು ವ್ಯವಸ್ಥಾಪಕ ನಿರ್ದೇಶಕ  ರಂಗಸ್ವಾಮಿ ಶ್ರೀ ಕ್ಷೇತ್ರ ಪೊಳಲಿ  ಆಡಳಿತ ಮೊತ್ತೇಸರ ಡಾ. ಎ. ಮಂಜಯ್ಯ ಶೆಟ್ಟಿ ಅಮ್ಮುಂಜೆ ಗುತ್ತು ಉಪಸ್ಥಿತರಿರುವರು.

ವಿಶೇಷ ಆಹ್ವಾನಿತರು:

ಕರಿಯಂಗಳ ಗ್ರಾಮ ಪಂಚಾಯತ್ ಆಡಳಿತಾಧಿಕಾರಿ ಜೋ ಪ್ರದೀಪ್ ಡಿ’ಸೋಜ, ಪೊಳಲಿ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿ  ಕೆ.ಪಿ ಚಂದ್ರ ಮೋಹನ್‌ ಪೊಳಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ವೆಂಕಟೇಶ್ ನಾವಡ, ಪುಂಚಮೆ ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ  ವಾಮನ ಪೂಜಾರಿ ಸೂರ್ಲ,ಅಮ್ಮುಂಜೆ   ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಎ.ಎಚ್. ರಂಗನಾಥ ಶೆಟ್ಟಿ ಭಾಗವಹಿಸಲಿದ್ದಾರೆ.

Leave a Comment