ಬಂಟ್ವಾಳ, ಅ. 23: ಸಜೀಪಮೂಡ ಸುಭಾಷ್ ಯುವಕ ಮಂಡಲ ಹಾಗೂ ಶ್ರೀ ಶಾರದಾ ಪೂಜಾ ಮಹೋತ್ಸವ ಸಮಿತಿ ವತಿಯಿಂದ ಸುಭಾಷ್ ನಗರದ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ವಠಾರದಲ್ಲಿರುವ ದಿ. ಬರಂಗರೆ ಸದಾನಂದ ಪೂಂಜ ವೇದಿಕೆಯಲ್ಲಿ ಆಯೋಜಿಸಲಾಗಿದ್ದ ಸಜೀಪ ದಸರಾ 100ನೇ ವರ್ಷದ ಶತಸಂಭ್ರಮ ಹಾಗೂ ಶ್ರೀ ಶಾರದಾ ಪೂಜಾ ಮಹೋತ್ಸವದ ಕಾರ್ಯಕ್ರಮಗಳು ಅ. 22ರಂದು ಸಮಾಪನಗೊಂಡಿತು.
ಶತಮಾನೋತ್ಸವದ ಅಂಗವಾಗಿ ಹಲವು ದಿನಗಳ ಕಾಲ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ನಡೆದ ಉತ್ಸವದಲ್ಲಿ ಚಿತ್ರರಂಗ, ಧಾರ್ಮಿಕ, ಸಾಮಾಜಿಕ ಹಾಗೂ ರಾಜಕೀಯ ಕ್ಷೇತ್ರಗಳ ಗಣ್ಯರು ಭಾಗವಹಿಸಿದ್ದರು.
ಸಮಾರೋಪದ ದಿನ ಮಧ್ಯಾಹ್ನ ಮಹಾಪೂಜೆ, ಮಹಾಮಂಗಳಾರತಿ, ಪ್ರಸಾದ ವಿತರಣೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಬಳಿಕ ಶಾರದಾದೇವಿಯ ಭವ್ಯ ಶೋಭಾಯಾತ್ರೆ ವೈಭವದಿಂದ ಜರುಗಿತು. ಉತ್ಸವ ವೇದಿಕೆಯಿಂದ ಹೊರಟ ಶೋಭಾಯಾತ್ರೆಯು ಮಾರ್ನಬೈಲಿನಲ್ಲಿ ಪೂಜೆ ಸ್ವೀಕರಿಸಿ, ಸುಭಾಷ್ ನಗರ ಮಾರ್ಗವಾಗಿ ವಿದ್ಯಾನಗರ ತಲುಪಿ ಅಲ್ಲಿಯೂ ಪೂಜೆ ಸ್ವೀಕರಿಸಿತು. ಬಳಿಕ ಶ್ರೀ ಶಾರದಾ ಭಜನಾ ಮಂದಿರದಲ್ಲಿ ಪೂಜೆ ಸ್ವೀಕರಿಸಿ, ಆಲಾಡಿ ಸಮೀಪ ನೇತ್ರಾವತಿ ನದಿ ತೀರದಲ್ಲಿ ವಿಗ್ರಹ ವಿಸರ್ಜನೆ ನೆರವೇರಿಸಲಾಯಿತು.
ಶೋಭಾಯಾತ್ರೆಯಲ್ಲಿ ಮಿತ್ರವೃಂದ ಕೈಮುಗಿಯುವಗೋಳಿ, ಆದರ್ಶ ಸ್ವಯಂಸೇವಾ ಸಂಘ ಕುಕ್ಕುದಕಟ್ಟೆ, ಸಜೀಪಮುನ್ನೂರು ಯುವಕ ಸಂಘ, ಶ್ರೀ ದುರ್ಗಾಪರಮೇಶ್ವರಿ ಸೇವಾ ಸಮಿತಿ ನಾಗನವಳಚ್ಚಿಲ್ ಮಾರ್ನಬೈಲ್, ಶ್ರೀ ಶಾರದಾ ಫ್ರೆಂಡ್ಸ್ ಸರ್ಕಲ್ ವಿದ್ಯಾನಗರ ಹಾಗೂ ಶ್ರೀ ಶಾರದಾ ಯುವಕ ಸಂಘ ಶಾರದಾನಗರ ಸೇರಿದಂತೆ ವಿವಿಧ ಸಂಘ-ಸಂಸ್ಥೆಗಳು ಸಹಕರಿಸಿದವು. ನಾಸಿಕ್ ಬ್ಯಾಂಡ್, ತಂಬೋಲಂ, ಸ್ಥಬ್ಧಚಿತ್ರಗಳು, ಚೆಂಡೆ, ವಯಲಿನ್, ಕುಣಿತ ಭಜನೆ ಹಾಗೂ ಗೊಂಬೆ ಕುಣಿತ ಶೋಭಾಯಾತ್ರೆಗೆ ವಿಶೇಷ ಮೆರುಗು ನೀಡಿದವು.
ಶತಮಾನೋತ್ಸವ ಶ್ರೀ ಶಾರದಾ
ಪೂಜಾ ಸಮಿತಿ ಅಧ್ಯಕ್ಷ ನಗ್ರಿಗುತ್ತು ವಿವೇಕ್ ಶೆಟ್ಟಿ, ಶ್ರೀ ಶಾರದಾ ಪೂಜಾ ಸಮಿತಿ ಅಧ್ಯಕ್ಷ ಬಿ. ಶೋಭಿತ್ ಪೂಂಜ, ಸುಭಾಷ್ ಯುವಕ ಮಂಡಲ ಅಧ್ಯಕ್ಷ ಎಸ್. ಶ್ರೀಕಾಂತ್ ಶೆಟ್ಟಿ, ಸಜೀಪ ಮಾಗಣೆ ತಂತ್ರಿ ಎಂ. ಸುಬ್ರಹ್ಮಣ್ಯ ಭಟ್, ಶ್ರೀ ಶಾರದಾ ಪೂಜಾ ಮಹಿಳಾ ಸಮಿತಿ ಅಧ್ಯಕ್ಷೆ ಪುಷ್ಪಾವತಿ ರಮೇಶ್ ಪೆರ್ವ ಸೇರಿದಂತೆ ವಿವಿಧ ಸಮಿತಿಗಳ ಪದಾಧಿಕಾರಿಗಳು ಹಾಗೂ ಸದಸ್ಯರು ವಿವಿಧ ಕಾರ್ಯಕ್ರಮಗಳಲ್ಲಿ ಉಪಸ್ಥಿತರಿದ್ದರು.
ಸದಾನಂದ ಶೆಟ್ಟಿ ಕಾಂತಾಡಿಗುತ್ತು, ಎಂ. ಮಹಾಬಲ ಕೊಟ್ಟಾರಿ, ಗಿರೀಶ್ ಕುಮಾರ್ ಪೆರ್ವ, ಗಂಗಾಧರ ಕೊಲ್ಯ, ಅಶ್ವಿತ್ ಬೆಂಕ್ಯ, ಪ್ರಹ್ಲಾದ್ ಬೆಂಕ್ಯ, ಕಿಶೋರ್ ಪೂಜಾರಿ, ರೊನಾಲ್ಡ್ ಮಾರ್ಟಿಸ್, ರವೀಂದ್ರ ಕಂಬಳಿ, ಪ್ರವೀಣ್ ಕುಮಾರ್ ಶೆಟ್ಟಿ, ವಿಜೇಶ್ ಲೂಯಿಸ್, ಕಾರ್ತಿಕ್ ಶೆಟ್ಟಿ ಬೆಂಕ್ಯ, ಯೋಗೀಶ್ ವಿದ್ಯಾನಗರ, ಜಯಶಂಕರ ಬಾಪ್ರಿತ್ತಾಯ, ಕೀರ್ತನ್ ಆಳ್ವ ಕಾಂತಾಡಿಗುತ್ತು, ಶ್ರೀನಾಥ್ ಅರಸ ಮಿತ್ತಮಜಲು, ಸುಜೀತ್ ಕುಮಾರ್ ಬೆಂಕ್ಯ, ಶುಭಪ್ರಸಾದ್ ಶೆಟ್ಟಿ ಕುಚ್ಚಿಗುಡ್ಡೆ, ಶಿವಪ್ರಸಾದ್ ಶೆಟ್ಟಿ ಕೇವುಲ, ಗೋಪಾಲ ಸಪಲ್ಯ, ಚಂದ್ರಶೇಖರ ಬೊಕ್ಕಸ, ಮಮತಾ ಆನಂದ ಶೆಟ್ಟಿ, ಶಶಿಕಲಾ ರಾಜೇಶ್, ವಾಣಿ ಹರೀಶ್, ಹರಿಣಾಕ್ಷಿ ಸುರೇಶ್ ಕುಡೂರು, ಸುಜಾತಾ ರಮೇಶ್ ಮತ್ತಿತರರು ಉಪಸ್ಥಿತರಿದ್ದರು.









