ಮಂಗಳೂರು ದಸರಾ ಮೆರವಣಿಗೆಯಲ್ಲಿ ಭಕ್ತಿಯ ವೈಭವ ಮೆರೆದ ‘ಭಕ್ತ ಕುಂಬಾರ’ ಟ್ಯಾಬ್ಲೋ;  

Coastal Bulletin
ಮಂಗಳೂರು ದಸರಾ ಮೆರವಣಿಗೆಯಲ್ಲಿ ಭಕ್ತಿಯ ವೈಭವ ಮೆರೆದ ‘ಭಕ್ತ ಕುಂಬಾರ’ ಟ್ಯಾಬ್ಲೋ;  

ಬಂಟ್ವಾಳ: ಮಂಗಳೂರಿನ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನದ ದಸರಾ ಶೋಭಾಯಾತ್ರೆಯಲ್ಲಿ ಕುಲಾಲೆರ್ ಕುಡ್ಲ ಸೇವಾ ಚಾರಿಟೇಬಲ್ ಟ್ರಸ್ಟ್ (ರಿ.) ಮಂಗಳೂರು ಪ್ರಸ್ತುತಪಡಿಸಿದ ‘ಭಕ್ತ ಕುಂಬಾರ’ ನೃತ್ಯರೂಪಕವು ಜನರ ಗಮನ ಸೆಳೆಯಿತು.

ಟ್ರಸ್ಟ್ ವತಿಯಿಂದ ಪ್ರಥಮ ಬಾರಿಗೆ ಪ್ರದರ್ಶಿಸಲಾದ ಈ ಟ್ಯಾಬ್ಲೋ ಭಕ್ತ ಗೋರ ಕುಂಬಾರನ ಭಕ್ತಿ ಮತ್ತು ಶ್ರದ್ಧೆಯನ್ನು ಮನಮುಟ್ಟುವಂತೆ ಅನಾವರಣಗೊಳಿಸಿತು. ಶೋಭಾಯಾತ್ರೆಯುದ್ದಕ್ಕೂ ರಸ್ತೆಯ ಇಕ್ಕೆಲಗಳಲ್ಲಿ ನೆರೆದಿದ್ದ ಜನರು ಟ್ಯಾಬ್ಲೋವನ್ನು ಕುತೂಹಲದಿಂದ ವೀಕ್ಷಿಸಿ, ಮೊಬೈಲ್‌ಗಳಲ್ಲಿ ದೃಶ್ಯಗಳನ್ನು ಸೆರೆಹಿಡಿದರು.

ಟ್ರಸ್ಟ್ ಅಧ್ಯಕ್ಷ ಹಾಗೂ ಬಂಟ್ವಾಳ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸದಾಶಿವ ಬಂಗೇರ ಅವರ ನೇತೃತ್ವದಲ್ಲಿ ಟ್ಯಾಬ್ಲೋ ಪ್ರದರ್ಶನಗೊಂಡಿತು. ಮಹೇಶ್ ಕುಲಾಲ್ ಕಡೇಶಿವಾಲಯ ನೃತ್ಯ ನಿರ್ದೇಶನ ಮಾಡಿದ್ದರು.

ಜಯಗಣೇಶ್, ರಾಜೇಶ್ ಭಂಡಾರಿ ಬೆಟ್ಟು, ಭಾರತಿ ಟೀಚರ್, ಜ್ಯೋತಿ ಕುಲಾಲ್, ದಯಾನಂದ ನೇರಂಬೋಳು, ಗಣೇಶ್ ಬರ್ದೆಲ್, ಸಾನ್ವಿ ಸುಕುಮಾರ್, ಸಾಧ್ವಿ ಸುಕುಮಾರ್, ಲಾಸ್ಯ ಎಸ್.

ಬಂಗೇರ, ವಿದಿತ್ರಿ, ಶ್ರಾವಣಿ ಹಾಗೂ ಅದ್ವಿತ್ ಪಲ್ಲಿಪಾಡಿ ಕಲಾವಿದರಾಗಿ ಭಾಗವಹಿಸಿದ್ದರು.

ಟ್ರಸ್ಟ್ ಉಪಾಧ್ಯಕ್ಷ ರಾಜೇಂದ್ರ ಕುಮಾರ್, ಟ್ರಸ್ಟಿಗಳಾದ ಶೇಷಪ್ಪ ಟಿ. ಮೂಲ್ಯ, ದಯಾನಂದ ನೇರಂಬೋಳು, ದೇವಪ್ಪ ಕುಲಾಲ್ ಪಂಜಿಕಲ್ಲು, ಚಂದ್ರಹಾಸ ಪಲ್ಲಿಪ್ಪಾಡಿ, ಸೋಮಯ್ಯ ಹನೈನಡೆ ಹಾಗೂ ಕುಲಾಲ  ಸಮುದಾಯದ ಪ್ರಮುಖರಾದ ಡಾ.‌ಅಣ್ಣಯ್ಯ ಕುಲಾಲ್ ಉಳ್ತೂರು, ಸುಕುಮಾರ್ ಬಂಟ್ವಾಳ, ನಾರಾಯಣ ಸಿ. ಪೆರ್ನೆ, ಮನೋಹರ ನೇರಂಬೋಳು, ಎಚ್ಕೆ ನಯನಾಡು, ನಾಗೇಶ್ ಬಾಳೆಹಿತ್ಲು, ನವಿನ್ ಮಿತ್ತಬೈಲು, ಸೌಮ್ಯ ಸುಕುಮಾರ್, ಮೀನಾಕ್ಷಿ ಸುರೇಶ್ ಕುಮಾರ್ ಉಪಸ್ಥಿತರಿದ್ದರು. ಟ್ಯಾಬ್ಲೋದ ಕಲಾವಿದರು, ಹಿನ್ನೆಲೆ ತಂಡ ಮತ್ತು ತಾಂತ್ರಿಕ ವಿಭಾಗದಲ್ಲಿಯೂ ಕುಲಾಲ ಸಮುದಾಯದವರೇ ಸಕ್ರಿಯವಾಗಿ ತೊಡಗಿಸಿಕೊಂಡಿದ್ದು ವಿಶೇಷವಾಗಿತ್ತು

Leave a Comment