Coastal Bulletin

ಮೇಷ : ಸಂಬಂಧಗಳನ್ನು ಗಟ್ಟಿ ಮಾಡಿಕೊಳ್ಳುವುದರಿಂದ ನಿಮಗೆ ವೈಯಕ್ತಿಕ ಜೀವನದಲ್ಲಿ ಲಾಭವಾಗುತ್ತದೆ. ಕೆಲವೊಮ್ಮೆ ನೀವು ಹಾಕಿಕೊಂಡ ನಿಯಮಗಳನ್ನು ಬದಿಗಿಟ್ಟು ಹೊಂದಿಕೊಳ್ಳುವ ಅನಿವಾರ್ಯತೆ ಎದುರಾಗಬಹುದು. ಹೋಟೆಲ್ ಉದ್ಯಮದವರಿಗೆ ನಿತ್ಯದ ಆದಾಯದಲ್ಲಿ ಸಾಕಷ್ಟು ವ್ಯತ್ಯಾಸಗಳು ಕಂಡುಬರುವುದು. ವಿದ್ಯಾರ್ಥಿಗಳು ತಮ್ಮ ಅಭ್ಯಾಸವನ್ನು ಹೆಚ್ಚಿನ ಶ್ರದ್ಧೆಯಿಂದ ಮಾಡುವುದರಿಂದ ಯಶಸ್ಸನ್ನು ಪಡೆಯುವರು.

ವೃಷಭ : ಅಭಿವೃದ್ಧಿಯ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಸೂಕ್ತ ಸಮಯ ಇದಾಗಿದೆ. ಬೇರೆಯವರ ಸಹಾಯವನ್ನು ಅಪೇಕ್ಷಿಸುತ್ತದೆ. ನಿಮ್ಮ ವೈಯಕ್ತಿಕ ಜವಾಬ್ದಾರಿಯಿಂದ ನಡೆದುಕೊಂಡಲ್ಲಿ ಹೆಚ್ಚಿನ ಮನ್ನಣೆ ಇರುತ್ತದೆ. ಇರುವ ಕೆಲಸವನ್ನು ಬಿಟ್ಟು ಹೊಸ ಕೆಲಸಕ್ಕೆ ಹೋಗಲು ರಾಜೀನಾಮೆ ನೀಡುವಿರಿ. ಹೊಸ ಕಂಪನಿಯೊಂದಿಗೆ ಸರಿಯಾಗಿ ಒಪ್ಪಂದವನ್ನು ಮಾಡಿಕೊಳ್ಳಿರಿ. 

ಮಿಥುನ : ನಿಮ್ಮ ಸಹವರ್ತಿಗಳು ಹಾಗೂ ಬಂಧುಗಳನ್ನು ವಿಶ್ವಾಸದಿಂದ ಕಾಣುವುದು ಬಹಳ ಮುಖ್ಯ ಇಲ್ಲದಿದ್ದಲ್ಲಿ ನಿಮ್ಮ ಕೆಲಸ ಕಾರ್ಯಗಳಿಗೆ ಅಡ್ಡಿ ಉಂಟು ಮಾಡಬಹುದು. ತಾಂತ್ರಿಕ ಕ್ಷೇತ್ರದಲ್ಲಿರುವ ಕೆಲವರಿಗೆ ಸಾಧನೆ ಮಾಡುವುದು ಕಷ್ಟವೆನಿಸಬಹುದು. ಹೆಚ್ಚಿನಶ್ರಮ ಹಾಕಿ ಸಾಧಿಸಿರಿ. ಆರೋಗ್ಯದಲ್ಲಿ ಸ್ವಲ್ಪ ಏರುಪೇರಾದರೂ ಆತಂಕವೇನಿಲ್ಲ.ಮಕ್ಕಳ ವಿದ್ಯಾಭ್ಯಾಸದಲ್ಲಿ ಸಾಧಾರಣ ಪ್ರಗತಿ ಇರುತ್ತದೆ.

ಕಟಕ : ವಾಸ ಮಾಡುವ ಜಾಗದ ಬದಲಾವಣೆಯು ಅನಿವಾರ್ಯವಾಗಬಹುದು. ಸಂದರ್ಭಗಳನ್ನು ನಿಮಗೆ ತಕ್ಕಂತೆ ಬದಲಾವಣೆ ಮಾಡಿಕೊಳ್ಳುವ ಜಾಣ್ಮೆಯನ್ನು ರೂಡಿಸಿಕೊಳ್ಳಿರಿ. ಲೆಕ್ಕಪತ್ರಗಳಲ್ಲಿ ಕಂಡುಬಂದಿದ್ದ ಕ್ಲಿಷ್ಟ ಸಮಸ್ಯೆಯು ಬಗೆಹರಿಯುತ್ತದೆ. ರಿಯಲ್ ಎಸ್ಟೇಟ್ ಉದ್ಯಮದವರಿಗೆ ವ್ಯವಹಾರ ನಿಧಾನವಾಗಬಹುದು. ಇಂಜಿನಿಯರಿಂಗ್ ಕ್ಷೇತ್ರದ ವಿದ್ಯಾರ್ಥಿಗಳಿಗೆ ಹೆಚ್ಚಿನ ಸಾಧನೆ ಮಾಡುವ ಯೋಗವಿದೆ. 

ಸಿಂಹ : ಕೃಷಿ ಕೆಲಸ ಕಾರ್ಯಗಳು ನಿಮ್ಮ ನಿರೀಕ್ಷೆಗೆ ತಕ್ಕಂತೆ ನಡೆಯುತ್ತವೆ. ಕೃಷಿಯಿಂದ ಆದಾಯವನ್ನು ನಿರೀಕ್ಷಣೆ ಮಾಡಬಹುದು. ಮೇಲಧಿಕಾರಿಗಳೊಂದಿಗೆ ಉತ್ತಮ ಸಂಬಂಧವನ್ನು ಇಟ್ಟುಕೊಳ್ಳುವುದು ಮುಖ್ಯ. ಎಲೆಕ್ಟ್ರಿಕಲ್ ಗುತ್ತಿಗೆದಾರರಿಗೆ ಹೆಚ್ಚಿನ ಕೆಲಸಗಳು ದೊರೆಯುತ್ತವೆ. ಶುಷ್ಕ ಹಣ್ಣುಗಳನ್ನು ಮಾರಾಟ ಮಾಡುವವರ ವ್ಯವಹಾರ ವಿಸ್ತರಿಸುತ್ತದೆ. ಹಣದ ಒಳಹರಿವು ಏರಿಕೆಯ ಹಂತದಲ್ಲಿರುತ್ತದೆ. 

ಕನ್ಯಾ : ವೃತ್ತಿಜೀವನಕ್ಕೆ ಸಂಬಂಧಿಸಿದ ನಿರ್ಧಾರಗಳನ್ನು ತೆಗೆದುಕೊಳ್ಳುವಾಗ ಗೊಂದಲ ಉಂಟಾಗಬಹುದು, ಪರಿಣಿತರ ಸಲಹೆ ಸೂಚನೆಗಳನ್ನು ತಿಳಿದು ನಡೆಯಿರಿ. ವಿಲಾಸಿ ಜೀವನದತ್ತ ಮನಸ್ಸು ಹೊರಳುತ್ತದೆ ಈ ಬಗ್ಗೆ ಎಚ್ಚರವಹಿಸಿರಿ. ಶೇರು ಮಾರುಕಟ್ಟೆ ವ್ಯವಹಾರ ಮಾಡುವವರಿಗೆ ನಷ್ಟದ ಬಿಸಿ ತಟ್ಟಬಹುದು. ವಾಹನ ಖರೀದಿಯ ಬಗ್ಗೆ ಚಿಂತನೆ ಬರುತ್ತದೆ. ಕಬ್ಬಿಣ, ಸಿಮೆಂಟ್ ವ್ಯಾಪಾರ ಮಾಡುವವರಿಗೆ ವ್ಯವಹಾರ ಚೆನ್ನಾಗಿರುತ್ತದೆ

ತುಲಾ : ಯಾವುದೇ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳುವ ಮುಂಚೆ ಭವಿಷ್ಯದ ಚಿಂತೆ ಇರಲಿ. ಖರ್ಚು ವೆಚ್ಚಗಳಿಗೆ ಕಡಿವಾಣ ಹಾಕಲೇಬೇಕಾಗುತ್ತದೆ. ನಿಮ್ಮ ಕೆಲಸ ಕಾರ್ಯಗಳಿಂದಲೇ ನೀವು ಸಮಸ್ಯೆಗೆ ಸಿಲುಕುವಿರಿ. ಕೃಷಿ ಕಾರ್ಮಿಕರಿಗೆ ಬಿಡುವಿಲ್ಲದ ಕೆಲಸ ದೊರೆತು ಉತ್ತಮ ಸಂಪಾದನೆ

ಆಗುತ್ತದೆ. ನಿಮ್ಮ ಕೆಲವೊಂದು ಯೋಜನೆಗಳು ಅರ್ಧದಲ್ಲೇ ನಿಲ್ಲುವ ಲಕ್ಷಣಗಳಿವೆ.

ವೃಶ್ಚಿಕ : ವಿಲಾಸಿ ಜೀವನಕ್ಕೆ ಮೊರೆ ಹೋಗದಂತೆ ಎಚ್ಚರ ವಹಿಸಿರಿ. ನಿಮ್ಮ ಧನದ ಸಮಸ್ಯೆಗಳಿಗೆ ಮೂಲ ಕಾರಣವನ್ನು ತಿಳಿಯುವುದು ಬಹಳ ಮುಖ್ಯ. ಧನದಾ ಯವು ಸಾಮಾನ್ಯ ಸ್ಥಿತಿಯಲ್ಲಿ ಇರುತ್ತದೆ. ಸರ್ಕಾರಿ ಸಾಲ ಸೌಲಭ್ಯಗಳು ಈಗ ದೊರೆಯುತ್ತವೆ. ಸಿವಿಲ್ ಇಂಜಿನಿಯರ್‌ಗಳಿಗೆ ನಿರ್ಮಾಣ ಕಾರ್ಯಗಳ ಗುತ್ತಿಗೆ ದೊರೆಯುತ್ತವೆ. ಸಂಸ್ಥೆಗಳಲ್ಲಿ ಲೆಕ್ಕಾಚಾರದ ಜವಾಬ್ದಾರಿಯನ್ನು ಹೊಂದಿರುವವರು ಎಚ್ಚರದಲ್ಲಿ ಕೆಲಸ ಮಾಡಬೇಕು.

ಧನು : ಕೈ ಹಾಕಿದ ಕೆಲವು ಕೆಲಸಗಳು ಯಾವುದೇ ಅಡೆತಡೆ ಇಲ್ಲದೆ ನೆರವೇರುತ್ತವೆ. ಮಿತ್ರ ವೃಂದದಲ್ಲಿ ಹಣಕಾಸಿನ ವಿಚಾರದ ಸಮಸ್ಯೆಗಳು ಬರಬಹುದು. ಆಸ್ತಿಯ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತಾಳ್ಮೆಯಿಂದ ಇರುವುದು ಬಹಳ ಮುಖ್ಯ. ಉಳಿತಾಯದ ಹಣದ ಹೊಂದಾಣಿಕೆಯಿಂದ ಆರ್ಥಿಕ ಪರಿಸ್ಥಿತಿಯನ್ನು ಸರಿದೂಗಿಸುವಿರಿ. ವಕೀಲರುಗಳಿಗೆ ಅವರ ಕಕ್ಷಿದಾರರಿಂದ ಹೆಚ್ಚಿನ ಆದಾಯ ಬರುವ ಸಾಧ್ಯತೆಗಳು ಇವೆ.

ಮಕರ : ನಿಮ್ಮ ಕಲ್ಪನಾ ಶಕ್ತಿ ಚುರುಕಾಗಿ ಕೆಲಸ ಮಾಡಿ ನಿಮಗೆ ಗೌರವವನ್ನು ತಂದು ಕೊಡುತ್ತದೆ. ಎಲೆಕ್ಟ್ರಾನಿಕ್ ಉಪಕರಣಗಳನ್ನು ಮಾರಾಟ ಮಾಡುವವರಿಗೆ ವ್ಯಾಪಾರ ವೃದ್ಧಿಯಾಗುತ್ತದೆ. ಮಾತಿನಲ್ಲಿ ಕಾಠಿಣ್ಯತೆ ಖಂಡಿತ ಬೇಡ. ವಿದೇಶಕ್ಕೆ ಅದಿರನ್ನು ರಫ್ತು ಮಾಡುವವರಿಗೆ ಬೇಡಿಕೆ ಹೆಚ್ಚಾಗುತ್ತದೆ. ಮಕ್ಕಳ ವಿಷಯದಲ್ಲಿ ಶುಭ ವಾರ್ತೆಗಳನ್ನು ಕೇಳುವಿರಿ. ಕೃಷಿಯಿಂದ ನಿರೀಕ್ಷಿತ ಆದಾಯ ದೊರಕುವುದಿಲ್ಲ. 

ಕುಂಭ : ಹಿರಿಯರ ಸರಳತೆ ಅವರಿಗೆ ಹೆಚ್ಚು ಮೆರಗು ತರುತ್ತದೆ. ಸಕಾರಾತ್ಮಕ ಮನೋಭಾವದಿಂದ ಎಲ್ಲರ ಮನವನ್ನು ಗೆಲ್ಲುವರು. ವ್ಯಾಪಾರ ವ್ಯವಹಾರಗಳಲ್ಲಿ ಪೈಪೋಟಿ ಹೆಚ್ಚಾಗುತ್ತದೆ. ನಿಧಾನ ಗತಿಯಲ್ಲಿ ಸಾಗುತ್ತಿದ್ದ ನಿರ್ಮಾಣ ಕಾರ್ಯಗಳು ಮುಕ್ತಾಯ ಹಂತಕ್ಕೆ ಬರುತ್ತವೆ. ಕೋರ್ಟು ಕಚೇರಿ ವಿಷಯದಲ್ಲಿ ನಿಮಗೆ ಶುಭ ಸಮಾಚಾರಗಳು ಕೇಳಿ ಬರುತ್ತವೆ. ವೃತ್ತಿ ರಂಗದಲ್ಲಿ ಹಿತಶತ್ರುಗಳು ಹೆಚ್ಚಾಗಬಹುದು. 

ಮೀನ : ಕೆಲಸಗಳನ್ನು ಮುಂದೂಡುವ ಅಭ್ಯಾಸವನ್ನು ಕಡಿಮೆ ಮಾಡಿರಿ. ನಿಮ್ಮ ವ್ಯವಹಾರದಲ್ಲಿನ ಯೋಜನೆ ಹಾಗೂ ಅವುಗಳ ಬೆಳವಣಿಗೆಗೆ ಬಗ್ಗೆ ಗಮನಹರಿಸುವುದು ಬಹಳ ಮುಖ್ಯ. ಅಧ್ಯಯನಕ್ಕಾಗಿ ವಿದ್ಯಾರ್ಥಿಗಳು ಹೆಚ್ಚಿನ ಶ್ರಮ ಹಾಕಬೇಕಾಗುತ್ತದೆ. ನೃತ್ಯ ಮತ್ತು ಅಭಿನಯ ಕಲೆಗಳನ್ನು ಪ್ರದರ್ಶಿಸುವವರಿಗೆ ಬೇಡಿಕೆ ಬರುತ್ತದೆ. ಪ್ರಭಾವಿ ರಾಜಕಾರಣಿಗಳ ಜೊತೆ ಮಾತನಾಡಿ ನಿಮ್ಮ ಆಸ್ತಿ ವ್ಯವಹಾರಗಳನ್ನು ಸರಿಪಡಿಸಿಕೊಳ್ಳುವಿರಿ.

Leave a Comment