ಮೇಷ ಹಿರಿಯರೊಂದಿಗೆ ಮನಃಸ್ತಾಪ ಆಗುವ ಸಂದರ್ಭವಿದೆ, ಎಚ್ಚರವಹಿಸಿರಿ. ಇಷ್ಟಮಿತ್ರರ ಆಗಮನದಿಂದ ಮನಸ್ಸಿಗೆ ಸಂತೋಷವಾಗುತ್ತದೆ. ನೌಕಾಯಾನದಲ್ಲಿ ಕೆಲಸ ಮಾಡುತ್ತಿರುವವರಿಗೆ ಸಮಯ ಉತ್ತಮವಾಗಿರುತ್ತದೆ.
ವೃಷಭ
ಭೂ ವ್ಯವಹಾರವನ್ನು ಮಾಡುವವರಿಗೆ ಉತ್ತಮ ಏಳಿಗೆ ಇರುತ್ತದೆ. ತೈಲವಸ್ತುಗಳನ್ನು ಮಾರಾಟ ಮಾಡುವವರಿಗೆ ಪ್ರಗತಿಯ ಜೊತೆಗೆ ಹೆಚ್ಚಿನ ಲಾಭವು ಇರುತ್ತದೆ.
ಮಿಥುನ
ವಿದ್ಯಾರ್ಥಿಗಳಿಗೆ ಅತ್ಯಂತ ಮಹತ್ವವಾದ ಕಾಲವೆನಿಸುತ್ತದೆ. ನಿರುದ್ಯೋಗಿಗಳನ್ನು ಅವರ ಹಳೆಯ ಸಂಸ್ಥೆಗಳು ಪುನಃ ಕೆಲಸಕ್ಕೆ ಕರೆಯಬಹುದು. ನಿಮ್ಮ ಮಿತ್ರರ ಸಹಕಾರದಿಂದ ರಾಜಕೀಯ ವ್ಯವಹಾರಗಳು ಸುಗಮವಾಗುತ್ತದೆ.
ಕಟಕ
ಗುರು ಹಿರಿಯರಿಂದ ಹೆಚ್ಚು ಪ್ರಶಂಸೆ ಒದಗಿಬರುತ್ತದೆ. ಆಕಸ್ಮಿಕ ಧನಲಾಭವಾಗುವ ಸಾಧ್ಯತೆ ದಟ್ಟವಾಗಿದೆ. ಆದಾಯದ ಹೊಸದಾರಿಗಳು ಗೋಚರ ಆಗುವ ಸಾಧ್ಯತೆಗಳಿವೆ. ಹಣದ ಒಳಹರಿವು ನಿಮ್ಮ ನಿರೀಕ್ಷೆಯನ್ನು ತಲುಪುತ್ತದೆ.
ಸಿಂಹ
ವೃತ್ತಿಯಲ್ಲಿ ಪ್ರಗತಿ ಇರುತ್ತದೆ. ಹಣದ ಒಳಹರಿವಿಗೆ ಏನು ತೊಂದರೆ ಇರುವುದಿಲ್ಲ, ಆದರೆ ಖರ್ಚಿಗೆ ಕಡಿವಾಣ ಹಾಕಬೇಕಾದ ಅನಿವಾರ್ಯತೆ ಇದೆ. ಕೈಗಾರಿಕೋದ್ಯಮಿಗಳಿಗೆ ಅವರ ದಾರಿಯಲ್ಲಿ ಪ್ರಗತಿಯನ್ನು ಕಾಣಬಹುದು.
ಕನ್ಯಾ
ಕೆಲವು ರಾಜಕೀಯ ಮುಖಂಡರಿಗೆ ಮುಖಭಂಗ ಅನುಭವಿಸುವ ಲಕ್ಷಣಗಳಿವೆ. ಪತ್ರಿಕೋದ್ಯಮದಲ್ಲಿ ಕೆಲಸ ಮಾಡುತ್ತಿರುವವರಿಗೆ ಹೆಚ್ಚಿನ ಪ್ರಗತಿ ಇರುತ್ತದೆ. ಮನೆಯವರ ಸಹಕಾರ ನಿಮಗೆ ಒದಗಿ ಬರುತ್ತದೆ. ಆಲಸ್ಯ ಉದಾಸೀನತೆಯಿಂದ ನಿರೀಕ್ಷಿತ ಫಲಿತಾಂಶಗಳು ಕೈಕೊಡಬಹುದು.
ತುಲಾ
ಮಕ್ಕಳಿಂದ ಕಠಿಣ ಮಾತುಗಳನ್ನು ಕೇಳಬೇಕಾಗಬಹುದು. ಭೂ ವ್ಯವಹಾರ ಮಾಡುವವರಿಗೆ ಸ್ವಲ್ಪ
ಹಿನ್ನಡೆಯ ವಾರ. ಚಿಕ್ಕ ಮಕ್ಕಳ ಯೋಗ ಕ್ಷೇಮದ ಬಗ್ಗೆ ಹೆಚ್ಚು ನಿಗಾ ಇರಲಿ. ಉದ್ಯೋಗ ಕ್ಷೇತ್ರದಲ್ಲಿ ಹೆಚ್ಚು ಒತ್ತಡಗಳಾಗಬಹುದು.
ವೃಶ್ಚಿಕ
ಭೂ ವ್ಯವಹಾರವನ್ನು ಮಾಡುವವರಿಗೆ ಹೆಚ್ಚಿನ ಪ್ರಗತಿ ಇರುತ್ತದೆ. ಅನಿರೀಕ್ಷಿತ ಧನಾಗಮನವಾಗಬಹುದು. ಕೆಲವೊಂದು ವಿಷಯಗಳಲ್ಲಿ ಇದ್ದ ಅತಿಯಾದ ಆತಂಕದ ಸಂದರ್ಭಗಳು ದೂರವಾಗುತ್ತವೆ.
ಧನು
ಉದ್ಯೋಗ ಕ್ಷೇತ್ರದಲ್ಲಿ ಲವಲವಿಕೆಯ ವಾರ. ಮೇಲಧಿಕಾರಿಗಳಿಂದ ಪ್ರಶಂಸೆಯನ್ನು ಕೇಳಬಹುದು. ಸಾಲದ ಮೇಲಿನ ತೊಂದರೆ ನಿವಾರಣೆಯಾಗಬಹುದು. ಹಣದ ಒಳಹರಿವು ಸಾಮಾನ್ಯ ಗತಿಯಲ್ಲಿ ಇರುತ್ತದೆ.
ಮಕರ
ಮಾಡಿದ ಕೆಲಸಗಳಲ್ಲಿ ಹೆಚ್ಚು ಮನ್ನಣೆ ದೊರೆಯುತ್ತದೆ. ಹೊಸ ಕಾರ್ಯ ರೂಪಿಸುವಲ್ಲಿ ನಿಮ್ಮ ಯೋಜನೆ ಸಫಲವಾಗಲಿವೆ. ಬೇರೆಯವರ ಹಣದ ಅಥವಾ ಸಾಂಸಾರಿಕ ವ್ಯವಹಾರಗಳಲ್ಲಿ ಮಧ್ಯಸ್ಥಿಕೆಯನ್ನು ವಹಿಸುವುದು ಖಂಡಿತಾ ಬೇಡ.
ಕುಂಭ
ಹೊಸ ವಾಹನ ಖರೀದಿಯ ಯೋಗವಿದೆ. ಹಣದ ಒಳಹರಿವು ತೃಪ್ತಿಕರವಾಗಿ ಇರುತ್ತದೆ. ಕೆಲವು ಯುವಕರ ಒರಟು ಮಾತು ಉದ್ಯೋಗಕ್ಕೆ ಕುತ್ತು ತರಬಹುದು. ಸ್ಥಿರಾಸ್ತಿ ವಿಚಾರದಲ್ಲಿ ಪ್ರಗತಿ ಸಾಧಿಸಬಹುದು.
ಮೀನ
ಕಲಾವಿದರಿಗೆ ಹೆಚ್ಚು ಅನುಕೂಲಕರ ವಾತಾವರಣವಿರುತ್ತದೆ. ಸಾಂಸಾರಿಕ ನೆಮ್ಮದಿ ಇದ್ದರೂ ಆರ್ಥಿಕ ಸಮಸ್ಯೆ ಹೆಚ್ಚಾಗಬಹುದು. ಮಕ್ಕಳ ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಗಮನವನ್ನು ಈಗ ಕೊಡಲೇಬೇಕು.














