Coastal Bulletin

ಇಂದು ಪರಿಸರ ದಿನ ಪ್ರತಿ ವರ್ಷವೂ ಒಂದೊಂದು ಉದ್ದೇಶ ಇಟ್ಟುಕೊಂಡು ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸುತ್ತೇವೆ. ಈ ವರ್ಷ 'ಪರಿಸರ ವ್ಯವಸ್ಥೆ ಪುನಃಸ್ಥಾಪನೆ"ಎಂಬ ಉದ್ದೇಶವಿದೆ.

ಜೂನ್ 5ನೇ ದಿನವನ್ನು ವಿಶ್ವ ಪರಿಸರ ದಿನಾಚರಣೆಯೆಂದು ಆಚರಿಸಲಾಗುತ್ತದೆ. ಪರಿಸರ ದಿನಾಚರಣೆಯನ್ನು ಆಚರಿಸಬೇಕೆಂಬ ನಿರ್ಧಾರವನ್ನು 1972-73 ರ ವಿಶ್ವಸಂಸ್ಥೆಯ ಮಹಾಸಭೆಯಲ್ಲಿ ತೆಗೆದುಕೊಳ್ಳಲಾಯಿತು.

1974 ರಿಂದ ವಿಶ್ವ ಪರಿಸರ ದಿನಾಚರಣೆ ಪ್ರಾರಂಭವಾಯಿತು. ಜೂನ್ 05 ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಪ್ರಪಂಚದಾದ್ಯಂತ ಗಿಡ ನೆಡುವ ಸಂಭ್ರಮವನ್ನು ಆಚರಿಸಲಾಗುತ್ತಿದೆ. ನೆಲ, ಮಣ್ಣು, ಬೆಳೆ, ಹಣ್ಣು ಹಂಪಲು ಹೀಗೆ ಎಲ್ಲವೂ ಉಳಿಯುವಂತಾಗಲು ಈ ದಿನವನ್ನು ಜಾಗೃತ ದಿನವೆಂದು ಆಚರಿಸಲಾಗುತ್ತಿದೆ.

ನಾವು ಆದಷ್ಟು ವಾಯು ಮಾಲಿನ್ಯ, ಜಲಮಾಲಿನ್ಯ,

ಭೂಮಿ ಮಾಲಿನ್ಯ ಮಾಡುವುದನ್ನು ನಿಲ್ಲಿಸಬೇಕು. ವಿದ್ಯುತ್ ಬಳಕೆ ಕಡಿಮೆ ಮಾಡುವುದು. ನೀರು ಪೋಲಾಗದಂತೆ ಮಿತವಾಗಿ ಬಳಸುವುದು, ಪೆಟ್ರೊಲ್, ಡೀಸೆಲ್ ವಾಹನಗಳ ಬಳಕೆ ಕಡಿಮೆ ಮಾಡುವುದು ಅಗತ್ಯವಿದೆ. ಸೌರಶಕ್ತಿಯನ್ನು ಉಪಯೋಗಿಸಬೇಕು. ಅರಣ್ಯನಾಶ ಮಾಡಬಾರದು. ಹಸಿರು ಸಸ್ಯ ಬೆಳೆಸುವುದು. ರಾಸಾಯನಿಕ ಬಳಕೆ ಮತ್ತು ಪ್ಲಾಸ್ಟಿಕ ಬಳಕೆ ಕಡಿಮೆ ಮಾಡಬೇಕು.

ಪರಿಸರ ದಿನಾಚರಣೆ ಕೇವಲ ಒಂದು ದಿನಕ್ಕೆ ಸೀಮಿತವಾಗಿರದೇ ಪರಿಸರದ ಉಳಿವಿಗಾಗಿ ನಾವು ಪ್ರತಿದಿನ ಶ್ರಮಿಸೋಣ ಎನ್ನುತ್ತಾ ಎಲ್ಲರಿಗೂ ವಿಶ್ವ ಪರಿಸರ ದಿನಾಚರಣೆಯ ಶುಭಾಶಯಗಳು.

Leave a Comment