Coastal Bulletin

ಪುತ್ತೂರು: ಹಿಂದೂ ಜಾಗರಣ ವೇದಿಕೆಯ‌ ಮುಖಂಡ ಕಾರ್ತಿಕ್ ಮೇರ್ಲ ಹತ್ಯೆ ಆರೋಪಿಯ ಮೇಲೆ ಹಾಡುಹಗಲೇ ದುಷ್ಕರ್ಮಿಗಳು ಬೈಕ್ ನಲ್ಲಿ ಬಂದು ಮಚ್ಚಿನಿಂದ ಕೊಲೆ ಮಾಡಿರುವ ಘಟನೆ ಸುಳ್ಯ ತಾಲೂಕಿನ ಬೆಳ್ಳಾರೆ ಸಮೀಪದ ಪೆರ್ಲಂಪಾಡಿಯಲ್ಲಿ ನಡೆದಿದೆ.

ಪುತ್ತೂರು ತಾಲೂಕಿನ‌ ಅರ್ಯಾಪು ನಿವಾಸಿ ಚರಣ್ ಮೃತ ಯುವಕ. ಇವರು ಕಾರ್ತಿಕ್ ಮೇರ್ಲ ಹತ್ಯೆಯ ಮೂರು ಆರೋಪಿಗಳಲ್ಲಿ ಓರ್ವ. ಕಾರ್ತಿಕ್ ಮೇರ್ಲ ಹತ್ಯೆಯ ಪ್ರಕರಣದಲ್ಲಿ ಜೈಲು ಸೇರಿದ್ದ ಚರಣ್ ಎರಡು ವರ್ಷಗಳ ಹಿಂದೆ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದರು.

ಚರಣ್ ಪೆರ್ಲಂಪಾಡಿಯಲ್ಲಿ ಮೆಡಿಕಲ್ ಶಾಪ್ ತೆರೆಯಲು ಸಿದ್ಧತೆ ನಡೆಸುತ್ತಿದ್ದರು. ಅಲ್ಲದೇ ನಾಳೆ ಮೆಡಿಕಲ್ ಶಾಪ್ ಶುಭಾರಂಭ ನಡೆಯಲಿತ್ತು. ಆ ವಿಷಯವಾಗಿ ಕೆಲಸದಲ್ಲಿ ಇದ್ದ ಚರಣ್ ನನ್ನು ಸಂಜೆ ಬೈಕ್ ನಲ್ಲಿ ಬಂದ ಮೂವರು ದುಷ್ಕರ್ಮಿಗಳು ತಲ್ವಾರ್ ನಿಂದ ಚರಣ್ ಗೆ ಕಡಿದಿದ್ದಾರೆ. ರಕ್ತದ ಮಡುವಿನಲ್ಲಿದ್ದ ಚರಣ್ ಅಲ್ಲಿಯೇ ಪ್ರಾಣ ಬಿಟ್ಟಿದ್ದಾರೆ.

Leave a Comment