ಸರ್ದಾರ್ ವಲ್ಲಭಬಾಯ್ ಪಟೇಲ್ ನಗರದ ಉದ್ಯಾನವನದಲ್ಲಿ ನೆಟ್ಟ ಸಸಿಗಳನ್ನು ಬೇರು ಸಮೇತ ಕಿತ್ತು ಹಾಕಿ ಎಲ್ಲೋ ರಸ್ತೆ ಮಾಡಲು ಈ ಉದ್ಯಾನವನದಲ್ಲಿ ಮಣ್ಣನ್ನು ಅಗೆದು ಹಳ್ಳ ಮಾಡಿ ಮನೆಗಳಿಗೆ ತೊಂದರೆ ಆಗುವಂತೆ ಸದ್ದಿಲ್ಲದೆ ಅಕ್ರಮವಾಗಿ ಮಣ್ಣು ಸಾಗಾಣಿಕೆ ನಡೆಯುತ್ತಿರುವುದು ಬೆಳಕಿಗೆ ಬಂದಿದೆ.
ಉದ್ಯಾನವದ ಮೇಲ್ಭಾಗ ಎತ್ತರಪ್ರದೇಶದಲ್ಲಿ ಮನೆಗಳಿದ್ದು ಯಾವುದೇ ಪರಿಜ್ಞಾನವಿಲ್ಲದೆ ಕೆಳಭಾಗದಲ್ಲಿ ಮಣ್ಣನ್ನು ಕೊರೆದುಕೊಂಡು ಹಳ್ಳ ಮಾಡಿದರೆ ಮೇಲ್ಭಾಗವಿರುವ ಮನೆಗಳು ಮಳೆಗಾಲದಲ್ಲಿ ಕುಸಿಯುವ ಸಂಭವವಿದೆ ಎಂದು ಸ್ಥಳೀಯರು ಆತಂಕ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ಮಣ್ಣು ಅಗೆಯುವವರನ್ನು ಪ್ರಶ್ನಿಸಿದಾಗ ಅಧಿಕಾರಿಗಳ ಗಮನಕ್ಕೆ ತಂದು ಮಾಡುತ್ತಿದ್ದೇವೆ
ಎಂದು ಹೇಳುತ್ತಿದ್ದು ಅದೇ ಅಧಿಕಾರಿಗಳಿಗೆ ಕರೆ ಮಾಡಿ ಕೇಳಿದರೆ ನಾವು ಅವರಿಗೆ ಅನುಮತಿಯನ್ನೇ ನೀಡಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.
ಈ ಉದ್ಯಾನವನ ಹಳ್ಳ ಮಾಡಿ ಮಣ್ಣನ್ನು ಕೊರೆಯಲು ಮುಂದಾದರೆ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡುವುದಾಗಿ ಸ್ಥಳೀಯ ನಿವಾಸಿಗಳು ಎಚ್ಚರಿಕೆ ನೀಡಿದ್ದಾರೆ.
















