ಫರಂಗಿಪೇಟೆ :ಸೇವಾಂಜಲಿಯಲ್ಲಿ 137ನೇ ರಕ್ತದಾನ ಶಿಬಿರ

Coastal Bulletin
ಫರಂಗಿಪೇಟೆ :ಸೇವಾಂಜಲಿಯಲ್ಲಿ 137ನೇ ರಕ್ತದಾನ ಶಿಬಿರ

ಬಂಟ್ವಾಳ :ಸೇವಾಂಜಲಿ ಪ್ರತಿಷ್ಠಾನ ಫರಂಗಿಪೇಟೆ ಹಾಗೂ ಸೌತ್ ಕೆನರಾ ಫೋಟೋ ಗ್ರಾಪರ್ಸ್ ಅಸೋಸಿಯೆಷನ್ ರಿ ಬಂಟ್ವಾಳ ವಲಯ ಇದರ ಅಶ್ರಯದಲ್ಲಿ ಜ ಕೆ ಎಸ್ ಹೆಗ್ಡೆ ಆಸ್ಪತ್ರೆ ದೇರಳಕಟ್ಟೆ ಇದರ ಸಹಯೋಗದಲ್ಲಿ 137ನೇ ರಕ್ತದಾನ ಶಿಬಿರ ಜು 19ರಂದು ಆದಿತ್ಯವಾರ ಸೇವಾಂಜಲಿ ಸಭಾಗೃಹದಲ್ಲಿ ನಡೆಯಿತು.

ಸೌತ್  ಫೋಟೋ ಗ್ರಾಪರ್ಸ್ ಅಸೋಸಿಯೆಷನ್ (ರಿ) ಇದರ ಅಧ್ಯಕ್ಷರಾದ ರಾಜೇಂದ್ರ ಕೆ ಅವರು ರಕ್ತದಾನ ಮಾಡಿ ಶಿಬಿರಕ್ಕೆ ಚಾಲನೆ ನೀಡಿದರು.

ಜ ಕೆ ಎಸ್ ಹೆಗ್ಡೆ ಆಸ್ಪತ್ರೆಯ ವೈದ್ಯಧಿಕಾರಿ ಅನಿಲ್ ಶೆಟ್ಟಿ ಕೆ ಎಸ್ ರಕ್ತದಾನದ ಬಗ್ಗೆ ಮಾಹಿತಿ ನೀಡಿದರು.ಈ ಸಂದರ್ಭದಲ್ಲಿ ಬಿ

ಸಿ ರೋಡ್  ಸೆಕ್ಯೂರ್ ಕನ್ಸಲ್ಟೆನ್ಸಿಯ ಪ್ರಶಾಂತ್ ಫ್ರಾಂಕ್,ಸತ್ಯಾಸಾಯಿ ರಕ್ತನಿಧಿಯ ಮೋಹನ್ ಶೆಟ್ಟಿ,ಕಾರ್ಯದರ್ಶಿ ರವಿ ಕಲ್ಪನೆ, ಜಿಲ್ಲಾ ಮಾಜಿ ಕಾರ್ಯದರ್ಶಿ ದಯಾನಂದ,  ಗೌರವಧ್ಯಕ್ಷ ಕಿಶೋರ್ ಕುಮಾರ್ ಉಪಸ್ಥಿತರಿದ್ದರು.

ಸೇವಾಂಜಲಿ ಪ್ರತಿಷ್ಠಾನದ ಆಡಳಿತ ಟ್ರಸ್ಟಿ ಕೃಷ್ಣ ಕುಮಾರ್ ಪೂಂಜ ಪ್ರಾಸ್ತವಿಕವಾಗಿ ಮಾತನಾಡಿ ಸ್ವಾಗತಿಸಿದರು.ಸುಮಾರು 72 ದಾನಿಗಳು ರಕ್ತದಾನ ಮಾಡಿದರು.

Leave a Comment