ಕೊಡ್ಮಾಣ್ :ಶ್ರೀ ಕೃಷ್ಣ ಜನ್ಮೋತ್ಸವ ಸಮಿತಿ ಇದರ ಅಶ್ರಯದಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿಯ ಹಿನ್ನಲೆಯಲ್ಲಿ ವಿಜೃಂಭಣೆಯ ಶ್ರೀ ಕೃಷ್ಣ ಲೀಲೋತ್ಸವ ಮೊಸರು ಕುಡಿಕೆ ಉತ್ಸವವು ಭವ್ಯ ಶೋಭಯಾತ್ರೆಯೊಂದಿಗೆ ಕೊಡ್ಮಾಣ್ ಮದಕದಲ್ಲಿ ಶುಕ್ರವಾರ ನಡೆಯಿತು.ಶ್ರೀ ಕೃಷ್ಣ ದೇವರನ್ನು ಪಲ್ಲಕಿಯಲ್ಲಿ ಕುಳ್ಳಿರಿಸಿ ವೈಭವದ ಶೋಭಯಾತ್ರೆಯು ನೆತ್ತರಕೆರೆಗೆ ಬಂದು ಮತ್ತೆ ಉತ್ಸವ ಜಾಗಕ್ಕೆ ತೆರಳಿ ಸಮಾಪನಗೊಂಡಿತು.
ಈ ಸಂದರ್ಭದಲ್ಲಿ ವಿವಿಧ ಸ್ಪರ್ಧೆಗಳು ಹಾಗೂ ಪುಟಾಣಿ ಮಕ್ಕಳು ಶ್ರೀ ಕೃಷ್ಣ ವೇಷ ಧರಿಸಿ ಸಂಭ್ರಮಿಸಿದರು, ನೃತ್ಯ ವೈವಿದ್ಯ, ಪ್ರವೀಣ್ ಮರ್ಕಮೆ ತಂಡದವರಿಂದ ಹಾಸ್ಯ ಕಾರ್ಯಕ್ರಮ
ನಡೆಯಿತು, ಮೆರವಣಿಗೆಯುದ್ಧಕ್ಕೂ ಪಿರಮಿಡ್ ರಚಿಸಿ ಮೊಸರು ಕುಡಿಕೆ ಒಡೆಯುವ ಮೂಲಕ ಯುವಕರು ಸಂಭ್ರಮಿಸಿದರು. ಭಜನೆ, ವಾದ್ಯ ಘೋಷ, ಕೀಲು ಕುದುರೆ, ಗೊಂಬೆಗಳು ಮೆರವಣಿಗೆಯ ಮೆರಗನ್ನು ಹೆಚ್ಚಿಸಿತು.















