ಮೈಸೂರು : ನಟ ದರ್ಶನ್ ಹೆಸರಲ್ಲಿ ದೋಖಾ ಯತ್ನ ಪ್ರಕರಣ ದಿನಕ್ಕೊಂದು ತಿರುವು ಪಡೆದುಕೊಳ್ಳುತ್ತಿವೆ. ದರ್ಶನ್ ವಿರುದ್ಧ ಪತ್ರಕರ್ತ ಹಾಗೂ ನಿರ್ದೇಶಕ ಇಂದ್ರಜೀತ್ ಲಂಕೇಶ್ ಹೊಸ ಬಾಂಬ್ ಸಿಡಿಸಿದ್ದಾರೆ. ಮೈಸೂರಿನಲ್ಲಿ ಸೆಲೆಬ್ರೆಟಿಗಳ ನಡವಳಿಕೆ, ಭಾಷೆ ಮಿತಿ ಮೀರಿದೆ. ಶ್ರೀಸಾಮಾನ್ಯರಿಗೆ ನ್ಯಾಯ ಸಿಗುತ್ತಿಲ್ಲ. ಹೋಟೆಲ್‌ನಲ್ಲಿದ್ದ ದಲಿತ ಸಪ್ಲೆಯರ್ ಮೇಲೆ ದರ್ಶನ್ ಮತ್ತು ಸ್ನೇಹಿತರು ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದ್ದಾರೆ.
ಇಂದು ಬೆಳಗ್ಗೆ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಅವರನ್ನು ಇಂದ್ರಜಿತ್ ಲಂಕೇಶ್ ಭೇಟಿ ಮಾಡಿ ನಟ ದರ್ಶನ್ ಮತ್ತು ಅವರ ಸ್ನೇಹಿತರ ವಿರುದ್ಧ ಗೃಹ ಸಚಿವರಿಗೆ ದೂರು ನೀಡಿದ್ದಾರೆ. ನಟನ ವಿರುದ್ಧ ಕ್ರಮ ಕೈಗೊಳ್ಳುವಂತೆ ಮೈಸೂರು ಪೊಲೀಸರಿಗೆ ನಿರ್ದೇಶನ ನೀಡಬೇಕೆಂದು ಗೃಹ ಸಚಿವ ಬಸವರಾಜ್ ಬೊಮ್ಮಾಯಿಯವರನ್ನು ಒತ್ತಾಯಿಸಿದ್ದಾರೆ.
ಗೃಹ ಸಚಿವರಿಗೆ ದೂರು ನೀಡಿದ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ನಿರ್ದೇಶಕ ಇಂದ್ರಜಿತ್ ಲಂಕೇಶ್ ನಟ ದರ್ಶನ್ ಮತ್ತು ಅವರ ಮೈಸೂರಿನ ಸ್ನೇಹಿತರಾದ ರಾಕೇಶ್ ಪಾಪಣ್ಣ ಮತ್ತು ಹರ್ಷ ಮೆಲಂಟ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಮೈಸೂರಿನಲ್ಲಿ ಸಂದೇಶ್ ನಾಗರಾಜ್ ಅವರಿಗೆ ಸೇರಿದ ಹೊಟೇಲ್ ನಲ್ಲಿ ಇತ್ತೀಚೆಗೆ ಇದೇ ಸ್ಟಾರ್ ನಟ ದರ್ಶನ್ ಮತ್ತು ಅವರ ಗ್ಯಾಂಗ್ ಹೋಗಿ ಊಟ ಪಾರ್ಟಿ ಮಾಡಿ ಪಾಪದ ದಲಿತ ಹೊಟೇಲ್ ಸಪ್ಲೈಯರ್ ಗೆ ಹೊಡೆದಿದ್ದಾರೆ.ಹಲ್ಲೆ ಸಂದರ್ಭದಲ್ಲಿ ಪವಿತ್ರಗೌಡ ಸಹ ಇದ್ರು.ಆತನ ಕಣ್ಣಿಗೂ ಗಾಯವಾಯ್ತು.ಇವರೆಲ್ಲರೂ ದಲಿತನಿಗೆ ಹೊಡೆದಿರುವ ಮಾಹಿತಿಯೂ ಇದೆ. ದಲಿತನ ಮೇಲೆ ಹಲ್ಲೆ ನಡೆದ ಬಳಿಕ ಮಾರನೇ ದಿನ
ನಟ, ಸ್ನೇಹಿತರನ್ನು ಹೊಡೆಯಲು ದಲಿತನ ಪತ್ನಿ ಪೊರಕೆ ತಂದ್ರು.ಇದಾದ ಬಳಿಕ ಪೊಲೀಸ್ ಠಾಣೆಯಲ್ಲಿ ಸೆಟಲ್ಮೆಂಟ್ ಆಯ್ತು. ಪೊಲೀಸ್ ಠಾಣೆಯಲ್ಲಿ ಸೆಟಲ್ಮೆಂಟ್ ಆಗಿರೋದು ದುರಂತ. ಪ್ರಕರಣ ಸಂಬಂಧಕ್ಕೆ ಇನ್ನಷ್ಟು ಸಾಕ್ಷ್ಯಗಳು ಬೇಕಾದ್ರೆ ನೀಡುವೆ.. ಈ ಸಂದರ್ಭದಲ್ಲಿ ತನಿಖೆ ನಡೆಯದಿದ್ರೆ ಬುದ್ಧಿ ಕಲಿಯಲ್ಲ.. ನಟ ತಲೆ ಸೀಳ್ತೀನಿ ಅಂತ ಹೇಳ್ತಿದ್ದಾರೆ. ಆ ರೀತಿ ಮಾತನಾಡಬೇಕಾಗಿತ್ತಾ..? ತಲೆ ಹೊಡೆತೀನಿ ಅಂತ ಹೇಳಿದ ನಟ ಯೋಚನೆ ಮಾಡಲಿ ಎಂದು ಇಂದ್ರಜಿತ್ ಕಿಡಿಕಾರಿದ್ದಾರೆ.
ಇಂದ್ರಜೀತ್ ಲಂಕೇಶ್ ದೂರು ನೀಡಿದ ಹಿನ್ನೆಲೆಯಲ್ಲಿ ಗೃಹ ಸಚಿವ ಬಸವರಾಜ ಬೊಮ್ಮಾಯಿ ತನಿಖೆಗೆ ಆದೇಶ ನೀಡಿದ್ದಾರೆ. ಬೆಂಗಳೂರಿನಲ್ಲಿ ಮಾತನಾಡಿದ ಅವರು, ಇಂದ್ರಜಿತ್ ಲಂಕೇಶ್ ಮನವಿ ಪತ್ರ ಸಲ್ಲಿಸಿದ್ದಾರೆ. ಅದರಂತೆ ತನಿಖೆ ನಡೆಸುವಂತೆ ಸೂಚನೆಯೂ ನೀಡಿದ್ದೇನೆ.. ಮನವಿ ಪತ್ರದಲ್ಲಿ ಸ್ಪಷ್ಟವಾಗಿ ಏನೂ ಹೇಳಿಲ್ಲ.. ನಮಗೆ ಯಾವುದೇ ಸಾಕ್ಷ್ಯಗಳನ್ನ ನೀಡಿಲ್ಲ...ಇಂದ್ರಜಿತ್ ಏನಾದ್ರೂ ಆರೋಪ ಮಾಡೋದಾದ್ರೆ ದೂರು ಕೊಟ್ಟು ಆರೋಪ ಮಾಡಲಿ ಎಂದು ಗೃಹ ಸಚಿವ ಹೇಳಿದ್ದಾರೆ.
















