ಮಂಗಳೂರು : ಸಾರ್ವಜನಿಕ ಸ್ಥಳದಲ್ಲಿ ತ್ಯಾಜ್ಯ ಎಸೆದು ಪರಿಸರ ಮಾಲಿನ್ಯ ಮಾಡಿದ ವ್ಯಕ್ತಿಯ ವಿರುದ್ಧ ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತ್ಯಾಜ್ಯ ಎಸೆಯಲು ಬಳಸಿದ್ದ ಸ್ಕೂಟರನ್ನು ವಶಕ್ಕೆ ಪಡೆದು ಆತನಿಂದಲೇ ಕಸ ತೆರವುಗೊಳಿಸಲಾಗಿದೆ.
ಉಳ್ಳಾಲ ನಿವಾಸಿ ಬದ್ರುದ್ದೀನ್ ಇರ್ಫಾನ್ ಎಂಬಾತನೇ ತನ್ನ ತಪ್ಪಿಗೆ ಶಾಸ್ತಿ ಮಾಡಿಕೊಂಡ ವ್ಯಕ್ತಿ. ಇರ್ಫಾನ್ ಹಣ್ಣಿನ ವ್ಯಾಪಾರಿಯಾಗಿದ್ದು, KA19 HA1879 ನೋಂದಣಿಯ ಸ್ಕೂಟರಲ್ಲಿ
ಕಳೆದ ಭಾನುವಾರ ಬೆಳಗ್ಗೆ ಕಿನ್ಯಾ ಗ್ರಾಮ ಪಂಚಾಯತ್ ವ್ಯಾಪ್ತಿಯ ಸಂಕೇಶ ತಿರುವು ರಸ್ತೆಯ ಸಾರ್ವಜನಿಕ ಸ್ಥಳದಲ್ಲಿ ಗೋಣಿ ಚೀಲದಲ್ಲಿ ಕಸವನ್ನು ತಂದು ಎಸೆದಿದ್ದ.
Advertisement