ರಾಮನಗರ : ಪ್ರತಿಮೆಗಳ ಅನಾವರಣ ಮತ್ತು ಹಲವು ಕಾಮಗಾರಿಗಳ ಚಾಲನೆಯ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಯ ಸಮ್ಮುಖದಲ್ಲಿ ಶಿಕ್ಷಣ ಸಚಿವ ಸಿ.ಎನ್.ಅಶ್ವತ್ಥನಾರಾಯಣ ಮತ್ತು ಸಂಸದ ಡಿ.ಕೆ ಸುರೇಶ್ ಕೈ ಕೈ ಮಿಲಾಯಿಸಿದ್ದು ಮತ್ತು ಸಂಸದ ಎಸ್ ರವಿ ಮೈಕ್ ಕಿತ್ತೆಸೆದ ಘಟನೆ ರಾಮ ನಗರ ಜಿಲ್ಲಾ ಕಚೇರಿಗಳ ಮುಂಭಾಗದಲ್ಲಿ ನಡೆದಿದೆ.
ಅಶ್ವತ್ಥನಾರಾಯಣ ಅವರು ತಮ್ಮ ಭಾಷಣದ ಮೂಲಕ ಕಾಂಗ್ರೆಸನ್ನು ಟೀಕಿಸುತ್ತಾ ಭಾಷಣ ಮಾಡುತ್ತಿದ್ದರು.
ಆ ಸಮಯದಲ್ಲಿ ಸಂಸದ ಸುರೇಶ್ ಮತ್ತು ಅಶ್ವತ್ಥ ನಾರಾಯಣರ ನಡುವೆ ಮಾತಿನ ಜಟಾಪಟಿ ನಡೆದು ಕೈ ಕೈ ಮಿಲಾಯಿಸಿದರು. ಸಂಸದ ಎಸ್ . ರವಿ ಅವರು ಅಶ್ವತ್ಥನಾರಾಯಣರವರ ಬಳಿಯಿದ್ದ ಮೈಕ್ ಕಿತ್ತು ಸ್ವಲ್ಪ ಕಾಲ ಗೊಂದಲವುಂಟುಮಾಡಿದರು, ಇದೇ ಸಮಯಕ್ಕೆ ಭದ್ರತಾ ಸಿಬ್ಬಂದಿಗಳು ಅವರನ್ನು ತಡೆದು ಮುಂದೆ ನಡೆಯಬಹುದಾದ ದೊಡ್ಡ
ಅನಾಹುತಗಳನ್ನು ತಡೆದರು.
ನಂತರ ಡಿ.ಕೆ.ಸುರೇಶ್, ರವಿ ಮತ್ತಿತರರು ಮುಖ್ಯಮಂತ್ರಿಯ ಎದುರು ಧರಣಿ ಕುಳಿತು ಸಭೆಯನ್ನು ಅರ್ಧದಲ್ಲೇ ಮೊಟಕುಗೊಳ್ಳುವಂತೆ ಮಾಡಿದರು.
ಮಾಧ್ಯಮಗಳೊಂದಿಗೆ ಮಾತನಾಡಿದ ಆರ್ ಅಶೋಕ್ ಡಿ.ಕೆ.ಸುರೇಶ್ ತಮ್ಮ ಗೂಂಡಾವರ್ತನೆ ತೋರಿದ್ದು ಅದು ಅವರ ಪಕ್ಷದ ಸಂಸ್ಕೃತಿಯನ್ನು ತೋರಿಸುತ್ತದೆ ಎಂದು ಜರಿದರು.
ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿದ ಕುಮಾರಸ್ವಾಮಿ ರಾಮ ನಗರ ಅಭಿವೃದ್ಧಿ ಮಾಡಿದ್ದು ನಾನು ಆದರೆ ವೇದಿಕೆಯಲ್ಲಿ ಬಿಜೆಪಿ- ಕಾಂಗ್ರೆಸ್ ಜಗಳ ಮಾಡುತ್ತಿವೆ ಎಂದು ಟೀಕಿಸಿದರು.














