Coastal Bulletin

ಮಂಗಳೂರು: ಯುವಸಮುದಾಯವನ್ನು ಸಾಮಾಜಿಕ ಜಾಲತಾಣದ ಮೂಲಕ ಒಗ್ಗೂಡಿಸಿ ಸಾಮಾಜಿಕ ಚಟುವಟಿಕೆಗಳನ್ನು ನಡೆಸುವುದರ ಜೊತೆಗೆ ದೇಶಭಕ್ತಿಗೀತೆ, ಭಜನೆ ಸ್ಪರ್ಧೆ, ಧಾರ್ಮಿಕ ಕೇಂದ್ರಗಳಲ್ಲಿ ಕರಸೇವೆ, ಸ್ವಚ್ಛತಾ ಕಾರ್ಯ ನೆರವೇರಿಸುವ ಮೂಲಕ ನಮ್ಮ ಸಂಸ್ಕೃತಿ ನಮ್ಮ ಸಮುದಾಯದ ಪರಂಪರೆಗಳನ್ನು ಉಳಿಸಿ, ಅದನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ್ಯ ವಿಶ್ವ ಗಾಣಿಗರ ಚಾವಡಿ (ರಿ.) ತಂಡದಿಂದ ನಡೆಯುತ್ತಿದೆ ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ನುಡಿದರು.

ಅವರು ಭಾನುವಾರ ಕೇಂದ್ರ ಮೈದಾನದಲ್ಲಿ ವಿಶ್ವ ಗಾಣಿಗ ಟ್ರೋಫಿ-2022 ಕ್ರೀಡಾಕೂಟ ಉದ್ಘಾಟಿಸಿ ಮಾತನಾಡಿದರು. ಕ್ರೀಡೆಯ ಮೂಲಕ ಯುವಸಮುದಾಯದ ಜೊತೆಗೆ ಹಿರಿಯರನ್ನು ಒಗ್ಗೂಡಿಸಿ ಸಮುದಾಯದಲ್ಲಿ ಒಡನಾಟ ಬೆಳೆಸುತ್ತಿರುವುದು ಶ್ಲಾಘನೀಯ ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ಉದ್ಘಾಟನಾ ಸಮಾರಂಭದಲ್ಲಿ ಮಂಗಳೂರು ಗಾಣಿಗ ಸಂಘದ ಅಧ್ಯಕ್ಷ ನಾರಾಯಣ ಸಪಲ್ಯ ಕಣ್ಣೂರು ದೀಪ ಬೆಳಗಿಸಿ ಸಭಾ ಕಾರ್ಯಕ್ರಮ ಉದ್ಘಾಟಿಸಿದರು. ದ.ಕ.ಜಿಲ್ಲಾ ಗಾಣಿಗರ ಯಾನೆ ಸಪಲಿಗರ ಮಾತೃ ಸಂಘ ಮಾಜಿ ಅಧ್ಯಕ್ಷ, ದ.ಕ. ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗ ಸಮಿತಿ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ಶಾಸಕ ಯು.ಟಿ. ಖಾದರ್, ಮೂಲ್ಕಿ ಮೂಡಬಿದರೆ ಶಾಸಕ ಉಮಾನಾಥ ಕೋಟ್ಯಾನ್, ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್ ಕಾಮತ್, ಮಂಗಳೂರು ಉತ್ತರ ಬಿಜೆಪಿ ಕೈಗಾರಿಕಾ ಪ್ರಕೋಷ್ಟ, ಉದ್ಯಮಿ ಜನಾರ್ಧನ

ಅರ್ಕುಳ, ವಿಶ್ವ ಗಾಣಿಗರ ಚಾವಡಿ (ರಿ.) ತಂಡದ ಅಧ್ಯಕ್ಷ ಹರಿಪ್ರಸಾದ್ ಶಕ್ತಿನಗರ, ಮಂಜೇಶ್ವರ ಗಾಣಿಗ ಸಂಘ ಅಧ್ಯಕ್ಷ ತುಕಾರಾಂ ಕುಂಬ್ಳೆ, ಮಳಲಿ ಗಾಣಿಗ ಸಂಘ ಅಧ್ಯಕ್ಷ ಕಾಂತಪ್ಪ ಸಪಲಿಗ, ಕೋಶಾಧಿಕಾರಿ ಮೋಹನ್ ಸಪಲ್ಯ, ಉಳ್ಳಾಲ ಗಾಣಿಗ ಸಂಘ ಅಧ್ಯಕ್ಷ ಪ್ರಕಾಶ್ ಎಚ್ ಕೊಲ್ಯ, ಸೋಮೇಶ್ವರ ಗಾಣಿಗ ಸಂಘ ಅಧ್ಯಕ್ಷ ಎಸ್. ರಾಮ್ ದಾಸ್, ಕರಾವಳಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಅತ್ತಾವರ ಇದರ ನಿರ್ದೇಶಕರಾದ ಜ್ಯೋತಿ ಯಲ್ಬುರ್ಗಿ, ರಮೇಶ್ ಮೆಂಡನ್, ಸುಮಂಗಲ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಪಾಣೆಮಂಗಳೂರು ಅಧ್ಯಕ್ಷ ನಾಗೇಶ್ ಕಲ್ಲಡ್ಕ, ಸಫಲ ಸೌಹಾರ್ದ ಸಹಕಾರಿ ನಿಯಮಿತ ಇದರ ಅಧ್ಯಕ್ಷ ಸಂಜೀವ ಅಡ್ಯಾರ್, ನಿರ್ದೇಶಕರಾದ ವೆಂಕಟೇಶ್ ಕದ್ರಿ ಎಂ., ರಾಮ್ ದಾಸ್, ಉದ್ಯಮಿ ಸುನೀಲ್ ಪಾಣೆಮಂಗಳೂರು, ಶೈಲೇಶ್ ಕೀರ್ತೇಶ್ವರ ಮತ್ತಿತರರು ಉಪಸ್ಥಿತರಿದ್ದರು.

Leave a Comment