Coastal Bulletin

ಬೆಂಗಳೂರು:ಸಂಚಾರಿ ನಿಯಮ ಉಲ್ಲಂಘಿಸಿರುವವರಿಗೆ ಸಾರಿಗೆ ಇಲಾಖೆ ಭರ್ಜರಿ ರಿಯಾಯ್ತಿ ನೀಡಿದೆ.

ದಂಡ ಕಟ್ಟದೆ ಬಾಕಿ ಇಳಿಸಿಕೊಂಡಿರುವವರು ಮತ್ತು ಪ್ರಕರಣ ಕೋರ್ಟ್ ನಲ್ಲಿ ಇದ್ದರೆ ಅಂತಹವರು ಇದೇ ಫೆಬ್ರವರಿ 11ರೊಳಗೆ ದಂಡ ಪಾವತಿಸಿದರೆ ಶೇಕಡಾ 50ರಷ್ಟು ರಿಯಾಯ್ತಿ ಸಿಗಲಿದೆ. 

ಫೆಬ್ರವರಿ 11ರಂದು ಲೋಕ ಅದಾಲತ್ ನಡೆಯಲಿರುವ ಹಿನ್ನಲೆ ದಂಡ ಪಾವತಿಯಲ್ಲಿ ರಿಯಾಯ್ತಿ ನೀಡುವಂತೆ ಕಾನೂನು ಸೇವೆಗಳ ಪ್ರಾಧಿಕಾರದ ಅಧ್ಯಕ್ಷ ಬಿ. ವೀರಪ್ಪ ಮನವಿ ಮಾಡಿದ್ದರು.

ಅದರಂತೆ ಸಾರಿಗೆ ಇಲಾಖೆ ಅಧೀನ ಕಾರ್ಯದರ್ಶಿ ಶೇಕಡ 50ರಷ್ಟು ರಿಯಾಯ್ತಿ ನೀಡಿ ಆದೇಶ ಹೊರಡಿಸಿದ್ದಾರೆ. ಇನ್ನು ಫೆಬ್ರವರಿ 11ರೊಳಗೆ ಕಟ್ಟಲು ಸಾಧ್ಯವಾಗದಿದ್ದರೆ ಫೆಬ್ರವರಿ 11ರ ನಂತರ ಸಂಪೂರ್ಣ ದಂಡದ ಮೊತ್ತ ಪಾವತಿಸಬೇಕಾಗುತ್ತದೆ.

data-filename="IMG-20230203-WA0040.jpg" style="width: 292px;">

ರಿಯಾಯಿತಿ ನೀಡಿದ್ದೆ ತಡ ದಂಡ ಪಾವತಿ ಮಾಡಲು ಸವಾರರು ಮುಗಿ ಬಿದ್ದಿದ್ದಾರೆ. ಬೆಂಗಳೂರಿನ ಸಂಚಾರ ನಿರ್ವಹಣಾ ಕೇಂದ್ರಕ್ಕೆ ಸವಾರರು ಆಗಮಿಸಿ ದಂಡ ಪಾವತಿಸುತ್ತಿದ್ದಾರೆ.

ಫೆಬ್ರವರಿ 11 ರವರೆಗೆ ರಿಯಾಯಿತಿಗೊಳಿಸಿರುವ ಸರ್ಕಾರ, 44 ಬಗೆಯ ಎಲ್ಲಾ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿರುವ ಪೈನ್ಗಳಿಗೂ ರಿಯಾಯಿತಿ ನೀಡಿದೆ. ಬಾಕಿ ಇರುವ ದಂಡದ ವಿವರಗಳನ್ನ ವೀಕ್ಷಿಸುವ ಮತ್ತು ಪಾವತಿ ವಿಧಾನವನ್ನು ಕರ್ನಾಟಕ ಒನ್ ವೆಬ್ ಸೈಟ್ನಲ್ಲಿ ವಿವರಗಳನ್ನ ಪಡೆದು ಪಾವತಿಸಬಹುದು. ಪೇಟಿಎಂ ಆ್ಯಪ್ ಮುಖಾಂತರ ಉಲ್ಲಂಘನೆಗಳ ವಿವರ ಪಡೆದು ಹತ್ತಿರದ ಟ್ರಾಫಿಕ್ ಪೊಲೀಸ್ ಠಾಣೆಗಳಲ್ಲಿ ದಂಡ ಪಾವತಿಸಬಹುದು.

Leave a Comment