ಬಂಟ್ವಾಳ:ಟೋಲ್ ಗೇಟ್ ತೆರವು ಹೋರಾಟ ಸಮಿತಿ ನೇತೃತ್ವದಲ್ಲಿ ಬ್ರಹ್ಮರಕೂಟ್ಲು ಟೋಲ್ ಗೇಟ್ ತೆರವು ಒತ್ತಾಯಿಸಿ ಜನಾಂದೋಲನ ನಡಿಗೆಯು ಎ.28ರಂದು ಮಂಗಳವಾರ ನಡೆಯಲಿದೆ.
ಅಂದು ಸಂಜೆ 4 ಗಂಟೆಯಿಂದ ಮಾಜಿ ಸಚಿವ ಬಿ.ರಮಾನಾಥ ರೈ ನೇತೃತ್ವದಲ್ಲಿ ಬಿ.ಸಿ.ರೋಡಿನ ಬ್ರಹ್ಮಶ್ರೀ ನಾರಾಯಣ ಗುರು ವೃತ್ತದಿಂದ ಪಾದಯಾತ್ರೆ ಪ್ರಾರಂಭಗೊಂಡು ಬ್ರಹ್ಮರಕೂಟ್ಟು
ಟೋಲ್ ಗೇಟ್ ವರೆಗೆ ನಡೆಯಲಿದೆ. ಜನಾಂದೋಲನ ನಡಿಗೆಯಲ್ಲಿ ಜಿಲ್ಲೆಯ ಹಲವು ಮುಖಂಡರು ಸಮಾನ ಮನಸ್ಕ ಸಂಘಟನೆಗಳ ಸಹಿತ ಹೆಚ್ಚಿನ ಸಂಖ್ಯೆಯ ನಾಗರಿಕರು ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ














