SSLC Results| ಸರಕಾರಿ ಪದವಿಪೂರ್ವ ಕಾಲೇಜು ಬೈಲೂರು ವಿದ್ಯಾರ್ಥಿನಿ ಲೀಸಾ ಬರ್ಬೋಜ ರಾಜ್ಯಕ್ಕೆ ದ್ವಿತೀಯ

Coastal Bulletin
SSLC Results| ಸರಕಾರಿ ಪದವಿಪೂರ್ವ ಕಾಲೇಜು ಬೈಲೂರು ವಿದ್ಯಾರ್ಥಿನಿ ಲೀಸಾ ಬರ್ಬೋಜ ರಾಜ್ಯಕ್ಕೆ ದ್ವಿತೀಯ

ಉಡುಪಿ: ರಾಜ್ಯದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರು ಕುತೂಹಲದಿಂದ ಕಾಯುತ್ತಿದ್ದ 2025-26ನೇ ಸಾಲಿನ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಫಲಿತಾಂಶ (SSLC Results 2026) ಪ್ರಕಟವಾಗಿದ್ದು, ರಾಜ್ಯದ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಶೇ.94.10 ಫಲಿತಾಂಶ ಬಂದಿದೆ. ಇನ್ನು ಜಿಲ್ಲೆಗಳಲ್ಲಿ 98.40% ಉತ್ತೀರ್ಣ ಫಲಿತಾಂಶದೊಂದಿಗೆ ದಕ್ಷಿಣ ಕನ್ನಡ ಜಿಲ್ಲೆ ಪ್ರಥಮ‌ ಸ್ಥಾನ ಪಡೆದುಕೊಂಡಿದ್ದರೆ, ಕಲಬುರಗಿ ಕೊನೆ ಸ್ಥಾನದಲ್ಲಿದೆ.

ಸರಕಾರಿ ಪದವಿಪೂರ್ವ ಕಾಲೇಜು ಬೈಲೂರು ವಿದ್ಯಾರ್ಥಿನಿ ಲೀಸಾ ಬರ್ಬೋಜ ರಾಜ್ಯಕ್ಕೆ ದ್ವಿತೀಯ ಸ್ಥಾನ ಪಡೆದು ವಿಶೇಷ ಸಾಧನೆ ಮಾಡಿದ್ದಾರೆ.

ಸರಕಾರಿ ಪದವಿಪೂರ್ವ ಕಾಲೇಜು ಬೈಲೂರು ಕಾರ್ಕಳ ತಾಲೂಕು ಇಲ್ಲಿನ 135

ವಿದ್ಯಾರ್ಥಿಗಳ ಪೈಕಿ 42 ಮಂದಿ ಡಿಸ್ಟಿಂಕ್ಷನ್ ಹಾಗೂ 73 ಮಂದಿ ಪ್ರಥಮ ದರ್ಜೆಯ ಮೂಲಕ ತೇರ್ಗಡೆಗೊಂಡು ಶಾಲಾ ಫಲಿತಾಂಶ 99.26% ಗಳಿಸುವಲ್ಲಿ ಯಶಸ್ವಿಯಾಗಿದ್ದು ಕಾಲೇಜ್ ಹಾಗೂ ಊರವರ ಮೆಚ್ಚುಗೆ ಗಳಿಸಿದ್ದಾರೆ.

Leave a Comment