ಬಂಟ್ವಾಳ : ಶ್ರೀ ಲಕ್ಷ್ಮೀನರಸಿಂಹ ದೇವಸ್ಥಾನ ವಾಸುಕೀವನ ಧರ್ಮಚಾವಡಿ ಕುದನೆ ಬಂಟ್ವಾಳ ಕಸ್ಬ ಇಲ್ಲಿ ವರ್ಷಂಪ್ರತಿ ನಡೆಯುವ ವರ್ಷಾವಧಿ ಉತ್ಸವ ಶ್ರೀ ನರಸಿಂಹ ಜಯಂತಿ ಹಾಗೂ ನೆಮೋತ್ಸವ ಎ.30ನೇ ಗುರುವಾರ ನಡೆಯಲಿದೆ.
ಕಾರ್ಯಕ್ರಮಗಳ ವಿವರ:
ಬೆಳಿಗ್ಗೆ ಗಂಟೆ 9-00ಕ್ಕೆ "ಶ್ರೀ ನರಸಿಂಹ ಮಹಾಮಂತ್ರ ಹವನ", ಮಧ್ಯಾಹ್ನ ಗಂಟೆ 12-00ಕ್ಕೆ ಯಜ್ಞಪೂರ್ಣಾಹುತಿ ಹಾಗೂ ಮಹಾಅನ್ನಸಂತರ್ಪನೆ,ಮಧ್ಯಾಹ್ನ ಗಂಟೆ 2-00ಕ್ಕೆ ಗ್ರಾಮ
ದೈವ ಅಣ್ಣಪ್ಪಪಂಜುರ್ಲಿಗೆ ನೇಮೋತ್ಸವ, ಸಂಜೆ 6-00ಕ್ಕೆ ಕ್ಷೇತ್ರದ ಪರಿವಾರ ದೈವಗಳಾದ ರಕೇಶ್ವರಿ, ಮೈಸಂದಾಯ ಕಲ್ಲುರ್ಟಿ, ಪಂಜುರ್ಲಿ ದೈವಗಳಿಗೆ ಗಗ್ಗರಸೇವೆ ನಡೆಯಲಿರುವುದು ಎಂದು ಪ್ರಕಟಣೆ ತಿಳಿಸಿದೆ.














