ಕೋರ್ಯಾರು:ಎ.26ರಿಂದ  ಶ್ರೀ ದುರ್ಗಾ ಮಹಮ್ಮಾಯೀ ಪುನರ್ ಪ್ರತಿಷ್ಠೆ ಬ್ರಹ್ಮ ಕಲಶೋತ್ಸವ.

Coastal Bulletin
ಕೋರ್ಯಾರು:ಎ.26ರಿಂದ  ಶ್ರೀ ದುರ್ಗಾ ಮಹಮ್ಮಾಯೀ ಪುನರ್ ಪ್ರತಿಷ್ಠೆ ಬ್ರಹ್ಮ ಕಲಶೋತ್ಸವ.

ಬಂಟ್ವಾಳ ತಾಲೂಕು ಕುಕ್ಕಿಪಾಡಿ ಗ್ರಾಮದ ಕೋರ್ಯಾರು ಶ್ರೀ ದುರ್ಗಾ ಮಹಮ್ಮಾಯೀ ದೇವಸ್ಥಾನದ ಪುನರ್ ಪ್ರತಿಷ್ಠೆ ಬ್ರಹ್ಮ ಕಲಶೋತ್ಸವ ಕಾರ್ಯಕ್ರಮಗಳು ಎಪ್ರಿಲ್ 26 ರಿಂದ ಮೇ 02 ರ ತನಕ ಜರುಗಲಿದೆ  ಎಂದು ಬ್ರಹ್ಮ ಕಲಶೋತ್ಸವ ಸಮಿತಿ ಅಧ್ಯಕ್ಷ ಉಮೇಶ್ ಗೌಡ ಮಂಚಕಲ್ಲು ತಿಳಿಸಿದ್ದಾರೆ .

ಅವರು ಬಂಟ್ವಾಳ ಪ್ರೆಸ್ ಕ್ಲಬ್ ನ್ನು ಕರೆದ ಪತ್ರಿಕಾ ಗೋಷ್ಠಿಯಲ್ಲಿ ಧಾರ್ಮಿಕ ಕಾರ್ಯಕ್ರಮಗಳ ವಿವರ ನೀಡಿದರು .

ಎ.26 ರಂದು ಆದಿತ್ಯವಾರ 3 ಗಂಟೆಗೆ ಸಿದ್ದಕಟ್ಟೆ ನಲ್ಲೂರಂಗಡಿ ಬಸದಿಯಿಂದ ಹಸಿರು ಹೊರೆಕಾಣಿಕೆಯನ್ನು ಶ್ರೀ ಕುಕ್ಕೆ ಸುಬ್ರಮಣ್ಯ ಮಠ ದ  ಶ್ರೀ ಶ್ರೀ ವಿದ್ಯಾ ಪ್ರಸನ್ನ ತೀರ್ಥ ಸ್ವಾಮೀಜಿ ಯವರ ಶುಭ ಆಶೀರ್ವಾದ ದೊಂದಿಗೆ ಗಣ್ಯರ ಉಪಸ್ಥಿತಿಯಲ್ಲಿ ಸಂಗಬೆಟ್ಟು ವೀರಭದ್ರ ದೇವಸ್ಥಾನದ ಪ್ರಧಾನ ಅರ್ಚಕರಾದ ಪ್ರಭಾಕರ ಐಗಳ್ ಮತ್ತು  ಸಿದ್ದಕಟ್ಟೆಯ ಪ್ರಸಿದ್ದ ವೈದ್ಯರಾದ ಡಾI ಪ್ರಭಾಚಂದ್ರ ಜೈನ್ ಚಾಲನೆ ನೀಡಲಿದ್ದು , ಗಣ್ಯರಾದ ಕಿರಣ್ ಕುಮಾರ್ ಮಂಜಿಲ,ಜಗತ್ಪಾಲ ಶೆಟ್ಟಿ ಉಮನೊಟ್ಟು , ಮಹಾವೀರ ಜೈನ್, ನಿತ್ಯಾನಂದ ಪೂಜಾರಿ ಕೆಂತಲೆ, ಸಂತೋಷ್ ಕುಮಾರ್ ರಾಯಿಬೆಟ್ಟು , ಪ್ರಭಾಕರ ಆಚಾರ್ಯ ,ಸದಾನಂದ ಕುಲಾಲ್ , ಮುಂತಾದವರು ಭಾಗವಹಿಸುವರು . ಸಂಜೆ ಗಂಟೆ 6 ಕ್ಕೆ ಸರಿಯಾಗಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ .ಎ.27 ಮತ್ತು 28 ರಂದು ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಲಿದೆ .

ಎ.29ರಂದು ಬೆಳಿಗ್ಗೆ ಗಂಟೆ 10.27 ಕ್ಕೆ ಮಿಥುನ ಲಗ್ನದಲ್ಲಿ ಪಂಚಲೋಹದ ಶ್ರೀ ದೇವಿಯ ಬಿಂಬ ಪ್ರತಿಷ್ಠೆ  . ಮಧ್ಯಾಹ್ನ 3 ಗಂಟೆಗೆ ಪರಮಪೂಜ್ಯ ಶ್ರೀ ಶ್ರೀ ಶ್ರೀ ವಿಶ್ವ ಪ್ರಸನ್ನ ತೀರ್ಥ ಸ್ವಾಮೀಜಿ ಪೇಜಾವರ ಅಧೋಕ್ಷಜ ಮಠ ರವರಿಂದ ಆರ್ಶೀವಚನ .. ಸಂಜೆ ಗಂಟೆ 6 ರಿಂದ ಯಕ್ಷ ಕದಂಬ ಯಕ್ಷಗಾನ ಬಳಗ ಮಾವಿನಕಟ್ಟೆ ಇವರಿಂದ “ಯಜ್ಞ ಸಂರಕ್ಷಣಾ ಸೀತಾಕಲ್ಯಾಣ” .... ರಾತ್ರಿ ಗಂಟೆ 08 ರಿಂದ ಡ್ಯಾನ್ಸಿಂಗ್ ಸ್ಟಾರ್ ಎಡಪದವು ಇವರಿಂದ “ಗಾನ ನೃತ್ಯ ವೈಭವ “ ಜರುಗಲಿದೆ .

ಎ.30ಗುರುವಾರ 4.30ರಿಂದ ತತ್ವಮಸಿ ಶ್ರೀ ಅಯ್ಯಪ್ಪ ಭಜಕ ವೃಂದ ಪೊಳಲಿ ಇವರ ನೇತೃತ್ವದ ವಿವಿಧ ಭಜನಾ ಮಂಡಳಿಗಳಿಂದ “ಭಜನಾ ಸಂಗಮೋತ್ಸವ “ ವನ್ನು ಶ್ರೀ ಚಾಮುಂಡೇಶ್ವರಿ ದೇವಸ್ಥಾನ ಬೆಳಾಲು ಇಲ್ಲಿನ ಧರ್ಮದರ್ಶಿ ಶ್ರೀ ಹರೀಶ್ ಅರಿಕೋಡಿ ಚಾಲನೆ ನೀಡಲಿದ್ದಾರೆ . ಸಂಜೆ ಗಂಟೆ 6 ರಿಂದ ಧಾರ್ಮಿಕ ಕಾರ್ಯಕ್ರಮ ಜರುಗಲಿದ್ದು , ಶ್ರೀ ಕ್ಷೇತ್ರ ಪೂಂಜಾ ದೇವಸ್ಥಾನದ ಆಸ್ರಣ್ಣರಾದ ಕೃಷ್ಣಪ್ರಸಾದ್ ಆಸ್ರಣ್ಣ ಅಧ್ಯಕ್ಷತೆ ವಹಿಸಲಿರುವರು . ರಾತ್ರಿ ಗಂಟೆ 8.00 ರಿಂದ ತಾಂಬೂಲ ಕಲಾವಿದೆರ್ ಪುಂಜಾಲಕಟ್ಟೆ ಇವರಿಂದ “ಎಲ್ಲೆ ದಾದ ,ಏರೆಗ್ ಗೊತ್ತು “ ಹಾಸ್ಯಮಯ ನಾಟಕ ಜರುಗಲಿದೆ.

ಎ.01ರಂದು ಬೆಳಿಗ್ಗೆ 10.45 ಕ್ಕೆ ಒದಗುವ ಮಿಥುನ ಲಗ್ನ ಸುಮುಹೂರ್ತದಲ್ಲಿ“ಬ್ರಹ್ಮ ಕಲಶಾಭಿಷೇಕ”ಮೇ.01 ಶುಕ್ರವಾರ ಬೆಳಿಗ್ಗೆ 10.45 ಕ್ಕೆ ಬ್ರಹ್ಮ ಕಲಶಾಭಿಷೇಕ ನೇರವೆರಲಿದೆ , ಬೆಳಿಗ್ಗೆ ಗಂಟೆ 11.30 ಕ್ಕೆ ಸರಿಯಾಗಿ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದ್ದು , ವಿವೇಕಾನಂದ ವಿದ್ಯಾವರ್ಧಕ ಸಂಘ (ರಿ) ಪುತ್ತೂರು ಇದರ ಅಧ್ಯಕ್ಷರಾದ ಡಾIIಪ್ರಭಾಕರ ಭಟ್ ಕಲ್ಲಡ್ಕ ರವರು ದೀಪ ಪ್ರಜ್ವಲನೆ ಮಾಡಲಿದ್ದು , ಶ್ರೀ ಧಾಮ ಮಾಣಿಲದ ಶ್ರೀ ಶ್ರೀ ಮೋಹನದಾಸ ಪರಮ ಹಂಸ ಸ್ವಾಮೀಜಿಯವರು ಹಾಗೂ ಶ್ರೀ ಕ್ಷೇತ್ರ ಕಟೀಲಿನ ಕಮಲಾದೇವಿ ಪ್ರಸಾದ ಆಸ್ರಣ್ಣರು ಆರ್ಶೀವಚನ ನೀಡಲಿದ್ದು , ,ಬಂಟ್ವಾಳ ವಿಧಾನ ಸಭಾ ಕ್ಷೇತ್ರದ ಶಾಸಕರಾದ ರಾಜೇಶ್ ನಾಯ್ಕ್ ,ಉಳಿಪಾಡಿ

ಅಧ್ಯಕ್ಷತೆ ವಹಿಸಲಿರುವರು .  ಕರ್ನಾಟಕ ಸರಕಾರದ ಮಾಜಿ ಮುಖ್ಯಮಂತ್ರಿ ಎಂ.ವೀರಪ್ಪ ಮೊಯಿಲಿ , , ಸಂಸದರಾದ ಕ್ಯಾ. ಬ್ರಿಜೇಶ್ ಚೌಟ , ಉಡುಪಿ ಚಿಕ್ಕ ಮಂಗಳೂರು ಕ್ಷೇತ್ರದ ಸಂಸದರಾದ ಕೋಟ ಶ್ರೀ ನಿವಾಸ ಪೂಜಾರಿ , ದ.ಕ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡುರಾವ್ , ಕರ್ನಾಟಕ ಸರಕಾರದ ಮಾಜಿ ಸಚಿವರು ರಮಾನಾಥ ರೈ , ಕರ್ನಾಟಕ ಸರಕಾರದ ಮಾಜಿ ಸಚಿವರು ಬಿ ನಾಗರಾಜ್ ಶೆಟ್ಟಿ, ಬೆಳ್ತಂಗಡಿ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಹರೀಶ್ ಪೂಂಜಾ , ಮೂಲ್ಕಿ ಮೂಡಬಿದ್ರೆ ವಿಧಾನ ಸಭಾ ಕ್ಷೇತ್ರದ ಶಾಸಕರಾದ ಉಮಾನಾಥ ಕೋಟ್ಯಾನ್ , , ವಿಧಾನ ಪರಿಷತ್ತ್ ಸದಸ್ಯರಾದ  ಮಂಜುನಾಥ ಭಂಡಾರಿ , ಕಿಶೋರ್ ಕುಮಾರ್ , ಪ್ರತಾಪ ಸಿಂಹ ನಾಯಕ್ , ಭಾರತಿ ಶೆಟ್ಟಿ, ಕರ್ನಾಟಕ ರಾಜ್ಯ ಧಾರ್ಮಿಕ ಪರಿಷತ್ತ್ ಸದಸ್ಯರು ಮಲ್ಲಿಕಾ ಪಕ್ಕಳ ,  ರವಿಶಂಕರ ಬಡಾಜೆ , ಕೊಡಮಣಿತ್ತಾಯ ದೈವಸ್ಥಾನ ಪಡ್ಯಾರಬೆಟ್ಟ ಇಲ್ಲಿನ ಆಡಳಿತ ಮೊಕ್ತೇಸರರಾದ ಜಿ.ಜೀವಂಧರ ಬಲ್ಲಾಳ್ , ದ.ಕ ಜಿಲ್ಲಾ ಧಾರ್ಮಿಕ ಪರಿಷತ್ತ್ ಸದಸ್ಯರು ದೇವಪ್ಪ ಕುಲಾಲ್ , ಬಲವಂಡಿ ಕ್ಷೇತ್ರದ ಗಡಿಪ್ರಧಾನರು ದುರ್ಗಾದಾಸ್ ಶೆಟ್ಟಿ ಮಾವಂತೂರು , ಬಂಟ್ವಾಳ ಬಿಲ್ಲವ ಸಂಘದ ಅಧ್ಯಕ್ಷ ಭುವನೇಶ್ ಪಚ್ಚಿನಡ್ಕ ,ಬಿ ಜೆ ಪಿ ಮುಖಂಡ ಸಂದೇಶ್ ಅರೆಬೆಟ್ಟು , ಸ್ಟೋನ್ ಕೃಷರ್ ಓನರ್ಸ್ ಅಸೋಸಿಯೇಷನ್ (ರಿ) ನ ಡಾIರವೀಂದ್ರ ಶೆಟ್ಟಿ ಬಜಗೋಳಿ, ಧನಲಕ್ಷ್ಮೀ ಕ್ಯಾಶ್ಯೂ ಇಂಡಸ್ರ್ಟಿಸ್ ಮೂಡಬಿದ್ರೆಯ ಶ್ರೀಪತಿ ಭಟ್ ,ವೈಬ್ರೆಂಟ್ ಕಾಲೇಜು ಮೂಡಬಿದ್ರೆಯ ಸುಭಾಶ್ ಜ , ಸಜೀಪಮುನ್ನೂರು ಮೂರ್ತೆದಾರರ ಸಹಕಾರಿ ಸಂಘದ ಅಧ್ಯಕ್ಷ ಸಂಜೀವ ಪೂಜಾರಿ , ಕೊಡಮಣಿತ್ತಾಯ ದೈವಸ್ಥಾನ ಅರೆಮಾಲೆಬೆಟ್ಟದ ಅನುವಂಶಿಕ ಆಡಳಿತದಾರರಾದ ಸುಕೇಶ್ ಕುಮಾರ್ , ಭಾರತೀಯ ಜನತಾ ಪಕ್ಷದ ಬಂಟ್ವಾಳ ಇದರ ಅಧ್ಯಕ್ಷರಾದ ಆರ್.ಚೆನ್ನಪ್ಪ ಕೋಟ್ಯಾನ್ , ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ಜಿಲ್ಲಾ ನಿರ್ದೇಶಕರಾದ ದಿನೇಶ್ ಡಿ , ಬಂಟ್ವಾಳ ನಗರಾಭಿವೃದ್ದಿ ಪ್ರಾಧಿಕಾರದ ಅಧ್ಯಕ್ಷರಾದ ಬೇಬಿ ಕುಂದರ್ , ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾದ ತುಂಗಪ್ಪ ಬಂಗೇರ, ಚಂದ್ರ ಪ್ರಕಾಶ್ ಶೆಟ್ಟಿ ತುಂಬೆ, ಸಿದ್ದಕಟ್ಟೆ ಹಾಲು ಉತ್ಪಾದಕ ಸಹಕಾರ ಸಂಘದ ಅಧ್ಯಕ್ಷ ರತ್ನಕುಮಾರ್ ಚೌಟ, ಸಿದ್ದಕಟ್ಟೆ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಭಾಕರ ಪ್ರಭು, ನೋಟರಿ ವಕೀಲರಾದ ಸುರೇಶ್ ಶೆಟ್ಟಿ , ವಿಜಯ ಗೌಡ ಶಿಬ್ರಿಕರೆ ಭಾಗವಹಿಸಲಿದ್ದಾರೆ. ಸಂಜೆ 5.00 ರಿಂದ ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಇವರಿಂದ “ಶ್ರೀ ದೇವಿ ಮಹಾತ್ಮೆ” ಯಕ್ಷಗಾನ ನಡೆಯಲಿದೆ .

ಮೇ 02ನೇ ಶನಿವಾರ ಸಂಜೆ ಗಂಟೆ 4.00 ರಿಂದ ಕಲ್ಲುರ್ಟಿ ಪಂಜುರ್ಲಿ ದೈವಗಳಿಗೆ “ನೇಮೋತ್ಸವ “ ಜರುಗಲಿದೆ.

ಪತ್ರಿಕಾ ಗೋಷ್ಠಿಯಲ್ಲಿ ಜೀರ್ಣೊದ್ದಾರ ಸಮಿತಿಯ ಗೌರವಾಧ್ಯಕ್ಷರಾದ ಪ್ರಭಾಕರ ಪ್ರಭು ,ದುರ್ಗಾದಾಸ್ ಶೆಟ್ಟಿ ಕರೆಂಕಿಜೆ , ಜೀರ್ಣೊದ್ದಾರ ಸಮಿತಿಯ ಅಧ್ಯಕ್ಷರಾದ ಗಂಗಾಧರ ಗೌಡ ಕುಕ್ಕೇಡಿ ,ಗುರಿಕಾರರಾದ ಗೋಪಾಲ ಗೌಡ , ಬ್ರಹ್ಮಕಲಶೋತ್ಸವ ಸಮಿತಿಯ ಗೌರವಾಧ್ಯಕ್ಷರಾದ ಹೇಮಚಂದ್ರ ಗೌಡ  ಸಿದ್ದಕಟ್ಟೆ ,ಬ್ರಹ್ಮಕಲಶೋತ್ಸವ ಸಮಿತಿಯ ಅಧ್ಯಕ್ಷರಾದ ಉಮೇಶ್ ಗೌಡ ಮಂಚಕಲ್ಲು ಉಪಸ್ಥಿತರಿದ್ದರು

Leave a Comment