ಸತೀಶ್ ನೆತ್ತರಕೆರೆ-ದುಬೈ

ಹಿರಿಯ ಜೀವಗಳ ಬದುಕಿನ ತಲ್ಲಣಗಳ ಸುಂದರ ಕಾವ್ಯವು ಸತೀಶ್ ನೆತ್ತರಕೆರೆ, ದುಬೈ ಇವರ ಲೇಖನಿ ಯಲ್ಲಿ ಮೂಡಿಬಂದಿದೆ.

ನೋಡಿದ ತಾತ ಸುತ್ತಲೂ

ಏನೂ ಕಾಣಿಸದು ಆತನಿಗೆ

ಎಲ್ಲೆಲ್ಲೂ ತುಂಬಿದೆ ಕತ್ತಲು

ಯಾಕೆಂದರೆ;

ಮುದ್ದಿನ ಮಡದಿ ಎಪ್ಪತ್ತರಲಿ

ಮೊನ್ನೆ ಮೊನ್ನೆಯಷ್ಟೇ ಸತ್ತಳು!

ದುಡಿದರು ಬೆಂದರು

ನೊಂದರು ಅಂದು ಕಷ್ಟದಲಿ

ಈಗ ಮನೆ ತುಂಬಾ

ಮಕ್ಕಳು ಮೊಮ್ಮಕ್ಕಳು!


ತಾತನದು ಈಗ ನರಕದ ಬದುಕು

ಯಾರೂ ಇಲ್ಲ 

ಅಲ್ಲಿ ಕಷ್ಟ ಸುಖ ಕೇಳಲು

ಊರುಗೋಲಿನ ಆಸರೆಯೊಂದೇ 

ಈಗ

ಕೂತರೆ ಮೇಲೇಳಲು..!

">ತಮಗೆ ತಾವೇ ಹೊರೆಯಾದರೆ ಕೊನೆಗೆ

ಯಾರಿರುವರು ನಮ್ಮ ಸಾಕಲು?


ತಾತನಿಗೆ ಬರದೀಗ ಮಲಗಿದರೆ

ರಾತ್ರಿಯಿಡೀ ನಿದ್ದೆ

ಪಾಪ ತಿಳಿಯುವರಾರು ?

ಆ ಕನ್ನಡಕದೊಳಗಿನ ಒದ್ದೆ!


ಈ ಜೀವ ದಣಿದು ದುಡಿದು

ಬದುಕುವವರೆಗೆ ಅಷ್ಟೇ

ಮಕ್ಕಳು ಮರಿಗಳು ಎಂಬ

ಬಾಂಧವ್ಯದ ನಂಟು;

ಪರರಿಗೆ ಹೊರೆಯಾಗದೆ ಹೀಗೆ

ಜೀವನ ಸಂಜೆಯ ನೆಮ್ಮದಿಯಲಿ

ಕಳೆಯುವ ಭಾಗ್ಯ ಇಲ್ಲಿ

ಎಷ್ಟು ಮಂದಿಗುಂಟು??


ಸತೀಶ್ ಕುಲಾಲ್ ನೆತ್ತರಕೆರೆ,ದುಬೈ

Leave a Comment